ತೇಜಸ್ವಿ ಸೂರ್ಯರವರನ್ನು ತರಾಟೆಗೆ ತೆಗೆದುಕೊಂಡ ಸಿದ್ದು- ಯಾಕೆ? ಹೇಳಿದ್ದೇನು ?? ತಿಳಿಯಲು ಒಮ್ಮೆ ಓದಿ

ತೇಜಸ್ವಿ ಸೂರ್ಯರವರನ್ನು ತರಾಟೆಗೆ ತೆಗೆದುಕೊಂಡ ಸಿದ್ದು- ಯಾಕೆ? ಹೇಳಿದ್ದೇನು ?? ತಿಳಿಯಲು ಒಮ್ಮೆ ಓದಿ

ತೇಜಸ್ವಿ ಸೂರ್ಯ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ನಡುವೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವಾರ್ ಶುರುವಾಗಿದೆ. ಜನರಿಗೆ ಸತ್ಯ ತಿಳಿಸಲು ಮನವಿ ಮಾಡಿಕೊಂಡ ತೇಜಸ್ವಿ ಸೂರ್ಯ ರವರನ್ನು ಸಿದ್ದು ಸಂಪೂರ್ಣ ಮಾಹಿತಿ ಪಡೆಯದೇ ತರಾಟೆಗೆ ತೆಗೆದುಕೊಂಡಿದ್ದ ಕಾರಣ ಇದು ಮತ್ತಷ್ಟು ಸದ್ದು ಮಾಡಿದೆ. ಅಷ್ಟಕ್ಕೂ ವಿಷಯದ ಮೂಲವೇನು ಗೊತ್ತೇ? ತಿಳಿಯಲು ಒಮ್ಮೆ ಸಂಪೂರ್ಣ ಓದಿ. ನಿಮಗೆಲ್ಲರಿಗೂ ತಿಳಿದಿರುವ ಹಾಗೇ ತೇಜಸ್ವಿ ಸೂರ್ಯ ರವರ ಕನ್ನಡಿಗರ ಪರವಾಗಿ, ಸಂಸ್ತತ್ತಿನಲ್ಲಿ ಧ್ವನಿ ಎತ್ತಿ ಐಬಿಪಿಎಸ್‌ನ ಎಲ್ಲಾ ಪರೀಕ್ಷೆಗಳನ್ನೂ ಕನ್ನಡದಲ್ಲಿ ಬರೆಯಲು ಅವಕಾಶ ನೀಡಬೇಕು ಎಂದು ಕೇಂದ್ರದ ಗಮನ ಸೆಳೆದಿದ್ದರು ಇನ್ನು ಇದಕ್ಕೆ ಕೇಂದ್ರ ಸರ್ಕಾರ ಕೂಡ ಅಸ್ತು ಎಂದಿತ್ತು.

ಹೀಗಿರುವಾಗ, ಗಾಳಿ ಮಾತುಗಳನ್ನು ನಂಬಿ ಪತ್ರಿಕೆಗಳು ಸೇರಿದಂತೆ ಕನ್ನಡದ ಹಲವು ಮಾಧ್ಯಮಗಳು ಕನ್ನಡ ಭಾಷೆಯಲ್ಲಿ ಪರೀಕ್ಷೆ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಸುದ್ದಿ ಹಬ್ಬಿಸಿದ್ದರು. ವಿಪರ್ಯಾಸವೆಂದರೆ, ಹಲವಾರು ಪ್ರತಿಷ್ಠಿತ ಮಾಧ್ಯಮಗಳು ಸಹ ಈ ಸುದ್ದಿಯನ್ನು ಹಬ್ಬಿಸಿದ್ದರು. ಇದನ್ನೇ ಬಳಸಿಕೊಂಡ ಸಿದ್ದರಾಮಯ್ಯ ನವರು ಕೇಂದ್ರ ಸರ್ಕಾರ ಮತ್ತೊಮ್ಮೆ ಕರ್ನಾಟಕ ರಾಜ್ಯದ ಜನರಿಗೆ ಮೋಸ ಮಾಡಿದ್ದಾರೆ, ಹಾಗಿದ್ದರೆ, ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಹಾಗೂ ಸಂಸದ ತೇಜಸ್ವಿ ಸೂರ್ಯ ರವರ ಭರವಸೆ ಸುಳ್ಳೇ ಎಂದು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವಿಷಯದಲ್ಲಿ ಬಿಜೆಪಿ ಪಕ್ಷ ಮೋಸ ಮಾಡುತ್ತಿದೆ ಎಂದು #BJPMOSA ಎಂದು ಹ್ಯಾಷ್ ಟ್ಯಾಗ್ ಬಳಸಿ ಟ್ವೀಟ್ ಮಾಡಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ತೇಜಸ್ವಿ ಸೂರ್ಯ ರವರು,  ಇದೇ ಮೊಟ್ಟ ಮೊದಲ ಬಾರಿಗೆ ಸ್ವತಂತ್ರ ಭಾರತ ದೇಶದಲ್ಲಿ ಬ್ಯಾಂಕಿಂಗ್ ಪರೀಕ್ಷೆಗಳನ್ನು ಕನ್ನಡದಲ್ಲಿ ನಡೆಸಲು ಅವಕಾಶ ನೀಡಲಾಗುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಈಗಾಗಲೇ ಘೋಷಣೆ ಮಾಡಿದ್ದಾರೆ. ಸದ್ಯದಲ್ಲಿಯೇ ಅಧಿಕೃತ ಆದೇಶ ಕೂಡ ಹೊರಬೀಳಲಿದೆ. ಈ ವಿಚಾರದಲ್ಲಿ ಕೀಳು ರಾಜಕೀಯ ಮಾಡಬೇಡಿ ಸಿದ್ದರಾಮಯ್ಯ ನವರೇ’ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಟ್ವೀಟ್‌ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಲು ಟ್ವೀಟ್ ಮಾಡಿದ ಸಿದ್ದರಾಮಯ್ಯ ನವರು, ಎಲ್ಲಾ ಪ್ರಾದೇಶಿಕ ಬ್ಯಾಂಕ್‌ಗಳ ಪರೀಕ್ಷೆಗಳನ್ನು 2014 ರವರೆಗೆ, ಕನ್ನಡ ಭಾಷೆಯಲ್ಲಿಯೇ ಬರೆಯುವ ಅವಕಾಶವಿತ್ತು. ಆದರೆ ನಿಮ್ಮ ಸರ್ಕಾರದ ಕೆಟ್ಟ ಆಡಳಿತದಿಂದ ಹಿಂದಿ ಮತ್ತು ಇಂಗ್ಲಿಷ್ ನಲ್ಲಿಯೇ ಮಾತ್ರ ಬರೆಯುವ ಹಾಗೇ ನಿಯಮ ಮಾಡಲಾಗಿದೆ. ಕನ್ನಡಿಗರ ಜನಪ್ರತಿನಿಧಿಯಾಗಿ ಮೊದಲು ಬೆನ್ನು ಮೂಳೆ ಸರಿಪಡಿಸಿಕೊಂಡು ಕನ್ನಡದ ಹಿತಾಸಕ್ತಿ ಪರವಾಗಿ ನಿಲ್ಲುವುದನ್ನು ಕಲಿಯಿರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.