ಭಾರತೀಯ ವಾಯುಪಡೆಯ ಅತಿದೊಡ್ಡ ಸಮಸ್ಯೆಗೆ ಪರಿಹಾರ ನೀಡಲು ಇಸ್ರೇಲ್ ಬದ್ಧ ! ವಾಯುಪಡೆಗೆ ಆನೆಬಲ ! ಮತ್ತೊಂದು ಒಪ್ಪಂದ ಏರ್ಪಡಿಸಿಕೊಂಡ ಮಿತ್ರ ರಾಷ್ಟ್ರಗಳು

ಭಾರತೀಯ ವಾಯುಪಡೆಯ ಅತಿದೊಡ್ಡ ಸಮಸ್ಯೆಗೆ ಪರಿಹಾರ ನೀಡಲು ಇಸ್ರೇಲ್ ಬದ್ಧ ! ವಾಯುಪಡೆಗೆ ಆನೆಬಲ ! ಮತ್ತೊಂದು ಒಪ್ಪಂದ ಏರ್ಪಡಿಸಿಕೊಂಡ ಮಿತ್ರ ರಾಷ್ಟ್ರಗಳು

ನರೇಂದ್ರ ಮೋದಿ ರವರು ಕಳೆದ ಬಾರಿ ಐದು ವರ್ಷದ ಅಧಿಕಾರದ ಅವಧಿಯಲ್ಲಿ ಸೇನೆಯನ್ನು ಬಲಿಷ್ಠಗೊಳಿಸುವುದರಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅದರಲ್ಲಿಯೂ ಭಾರತದ ಪರಮ ಆಪ್ತ ರಾಷ್ಟ್ರವಾದ ಇಸ್ರೇಲ್ ದೇಶದೊಂದಿಗೆ ಹಲವಾರು ಒಪ್ಪಂದಗಳನ್ನು ಏರ್ಪಡಿಸಿಕೊಂಡು ಅತ್ಯಾಧುನಿಕ ಟೆಕ್ನಾಲಜಿಯನ್ನು ಭಾರತೀಯ ಸೇನೆಗೆ ತಲುಪುವಂತೆ ಮಾಡಿ, ಭಾರತೀಯ ಸೇನೆಯನ್ನು ಎಲ್ಲಾ ವಿಭಾಗಗಳಲ್ಲಿಯೂ ಬಲಿಷ್ಟಗೊಳಿಸಲು ಶ್ರಮವಹಿಸಿದ್ದರು. ಇದೀಗ ಮತ್ತೊಮ್ಮೆ ಅಧಿಕಾರಕ್ಕೆ ಏರಿದ ಮೇಲೆ ನರೇಂದ್ರ ಮೋದಿ ಅವರು ಮತ್ತೊಮ್ಮೆ ಇದೇ ನಿಟ್ಟಿನಲ್ಲಿ ಹಲವಾರು ದಿಟ್ಟ ಹೆಜ್ಜೆಗಳನ್ನು ಇಡುತ್ತಿದ್ದಾರೆ. ಕಳೆದ ಐವತ್ತು ದಿನಗಳ ಅವಧಿಯಲ್ಲಿ, ಬರೋಬ್ಬರಿ ಐವತ್ತು ಸಾವಿರ ಕೋಟಿಗೂ ಹೆಚ್ಚು ರಕ್ಷಣಾ ಒಪ್ಪಂದಕ್ಕೆ ಭಾರತ ದೇಶ ಸಹಿ ಹಾಕಿರುವುದು ಇದಕ್ಕೆ ಸ್ಪಷ್ಟ ನಿದರ್ಶನ.

ಹೀಗೆ ದಿನೇ ದಿನೇ ಬಲಿಷ್ಠ ಕೊಳ್ಳುತ್ತಿರುವ ಸೇನೆಯನ್ನು ಮತ್ತಷ್ಟು ಬಲಿಷ್ಠಗೊಳಿಸಲು ಇದೀಗ ಇಸ್ರೇಲ್ ದೇಶವು ಮುಂದೆ ಬಂದಿದ್ದು, ಹಲವಾರು ವರ್ಷಗಳಿಂದ ಭಾರತೀಯ ವಾಯುಪಡೆಯು ಎದುರಿಸುತ್ತಿದ್ದ ಅತಿ ದೊಡ್ಡ ಸಮಸ್ಯೆಯನ್ನು ನಿವಾರಿಸುವ ಅತ್ಯಾಧುನಿಕ ಟೆಕ್ನಾಲಜಿ ಇಸ್ರೇಲ್ ದೇಶದಿಂದ ಭಾರತ ದೇಶಕ್ಕೆ ಆಮದು ಮಾಡಿಕೊಳ್ಳಲಾಗುತ್ತದೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಟೆಕ್ನಾಲಜಿಯನ್ನು ಇಂದಿನ ಭಾರತೀಯ ಯುದ್ಧ ವಿಮಾನಗಳಿಗೆ ಸರಿಹೊಂದುವಂತೆ ಸಜ್ಜುಗೊಳಿಸಿ, ಭಾರತೀಯ ಯುದ್ಧ ವಿಮಾನಗಳಿಗೆ ಅಳವಡಿಸಲಾಗುತ್ತದೆ. ಮೂಲ ಮಾಹಿತಿಗಳ ಪ್ರಕಾರ ಮಿರಾಜ್ 2000, ಮಿಗ್ 29 ಹಾಗೂ ಸುಖೊಯ್-30 ಯುದ್ಧವಿಮಾನಗಳು ಈ ಅತ್ಯಾಧುನಿಕ ಟೆಕ್ನಾಲಜಿಯೊಂದಿಗೆ ಮತ್ತಷ್ಟು ಬಲಿಷ್ಠಗೊಳ್ಳಲಿವೆ. ಸಂಪೂರ್ಣ ವಿವರಗಳಿಗಾಗಿ ಕೆಳಗಡೆ ಓದಿ.

ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳು ಮೊದಲಿನಿಂದಲೂ ಬಲಿಷ್ಟವಾಗಿ ಇದ್ದರೂ ಸಹ ಒಮ್ಮೆಲೆ ಹಲವಾರು ಯುದ್ಧವಿಮಾನಗಳು ಶತ್ರು ರಾಷ್ಟ್ರಗಳ ಮೇಲೆ ದಾಳಿ ನಡೆಸಲು ಮುಂದಾದಲ್ಲಿ, ತಮ್ಮ ಜೊತೆಗೆ ಹಾರಾಡುತ್ತಿರುವ ಯುದ್ಧ ವಿಮಾನಗಳಿಗೆ ಭಾರತೀಯ ವಾಯುಪಡೆಯ ಪೈಲೆಟ್ ಗಳು ಯಾವುದೇ ಸಂದೇಶವನ್ನು ಕಳುಹಿಸಬೇಕಾದರೆ, ಮೊದಲು ವಾಯುಪಡೆಯ ಕಂಟ್ರೋಲ್ ರೂಂಗೆ ಸಂದೇಶವನ್ನು ತಲುಪಿಸಿ ತದನಂತರ ತನ್ನ ಜೊತೆ ಪಕ್ಕದಲ್ಲಿ ಹಾರಾಡುತ್ತಿರುವ ಯುದ್ಧ ವಿಮಾನಗಳಿಗೆ ಈ ಸುದ್ದಿಯನ್ನು ತಲುಪಿಸುವಂತೆ ಆದೇಶ ನೀಡಬೇಕಿತ್ತು. ನೂರಾರು ಅಡಿ ಎತ್ತರದಲ್ಲಿ ಹಾರಾಡುವ ಯುದ್ಧವಿಮಾನಗಳು, ಒಂದಕ್ಕೊಂದು ಸಂದೇಶ ಕಳುಹಿಸಬೇಕು ಎಂದರೆ ಬಹಳ ಕ್ಲಿಷ್ಟಕರವಾದ ಪ್ರೋಟೋಕಾಲ್ ಫಾಲೋ ಮಾಡಬೇಕಿತ್ತು. ಕ್ಷಣಮಾತ್ರದಲ್ಲಿ ಯಾವುದೇ ತೊಂದರೆಗಳು ಎದುರಾಗಬಹುದಾದ ಸಂದರ್ಭದಲ್ಲಿ ಈ ರೀತಿಯ ಪ್ರೋಟೋಕಾಲ್ ಫಾಲೋ ಮಾಡುವುದು ಬಹಳ ಕ್ಲಿಷ್ಟಕರವಾದ ಸಂಗತಿಯಾಗಿತ್ತು.

ಅಷ್ಟೇ ಅಲ್ಲದೆ, ಶತ್ರು ರಾಷ್ಟ್ರಗಳು ಯುದ್ಧ ವಿಮಾನಗಳ ಹಾರಾಟವನ್ನು ಕಂಡು ಕೂಡಲೇ ತಮ್ಮ ವಾಯು ಪ್ರದೇಶಗಳಲ್ಲಿ ಜಾಮರ್ ಗಳನ್ನು ಅಳವಡಿಸಿದರೆ ವಾಯುಪಡೆಯ ಯುದ್ಧ ವಿಮಾನಗಳು ಸಂಪರ್ಕವನ್ನು ಕಳೆದುಕೊಳ್ಳುತ್ತಿದ್ದವು, ಒಂದು ವೇಳೆ ಆವರ್ತನವನ್ನು ಬದಲಾಯಿಸಿ ಮತ್ತೊಂದು ಲಿಂಕಿನಲ್ಲಿ ಸಂದೇಶ ಕಳುಹಿಸಲು ಪ್ರಯತ್ನಪಟ್ಟರೆ, ಕೆಲವು ಸೂಕ್ಷ್ಮ ಕರ ಅಂಶಗಳು ತಪ್ಪಿ ಹೋಗುತ್ತಿದ್ದವು. ಇದೇ ಸಮಸ್ಯೆಯನ್ನು ಭಾರತೀಯ ವಾಯುಪಡೆಯು ಕಳೆದ ಬಾಲಕೋಟ್ ವೈಮಾನಿಕ ದಾಳಿಯ ವೇಳೆ ಎದುರಿಸಿತ್ತು. ಕೂಡಲೇ ಈ ಸಮಸ್ಯೆಗೆ ಪರಿಹಾರ ನೀಡಲು ಮುಂದಾಗಿರುವ ಮೋದಿರವರು ಭಾರತದ ಆಪ್ತ ರಾಷ್ಟ್ರವಾದ ಇಸ್ರೇಲ್ ದೇಶದ ಮೊರೆಹೋಗಿದ್ದಾರೆ.

ಇದೀಗ ಇಸ್ರೇಲ್ ದೇಶವು ಅತ್ಯಾಧುನಿಕ ಟೆಕ್ನಾಲಜಿ ಆದ SDR ಅನ್ನು ಭಾರತೀಯ ವಾಯುಪಡೆಯ ಯುದ್ಧವಿಮಾನಗಳ ಜೊತೆ ಹಂಚಿಕೊಳ್ಳಲು ಮುಂದಾಗಿದ್ದು, ಭಾರತೀಯ ವಾಯುಪಡೆಯ 400 ಯುದ್ಧವಿಮಾನಗಳು ತ್ವರಿತವಾಗಿ ಈ ಟೆಕ್ನಾಲಜಿಯನ್ನು ಬಳಸಿಕೊಂಡು ಮತ್ತಷ್ಟು ಬಲಿಷ್ಠ ಗೊಳ್ಳಲಿವೆ. ಈ ಟೆಕ್ನಾಲಜಿ ಯು ಯಾವುದೇ ಎತ್ತರದಲ್ಲಿ ಹಾರುತ್ತಿರುವ ಯುದ್ಧವಿಮಾನ ದಿಂದ ಮತ್ತೊಂದು ಯುದ್ಧ ವಿಮಾನಕ್ಕೆ ಯಾವುದೇ ಅಡೆತಡೆಯಿಲ್ಲದೆ ಹಾಗೂ ಜಾಮರ್ ಗಳನ್ನು ಅಳವಡಿಸಿದ್ದರೂ ಸಹ ಶತ್ರು ರಾಷ್ಟ್ರಗಳಿಗೆ ತಿಳಿಯದಂತೆ ಸಂಪರ್ಕಿಸಲು ಸಾಧ್ಯವಾಗುತ್ತದೆ. ಈ ರೀತಿಯ ಟೆಕ್ನಾಲಜಿಯನ್ನು ಭಾರತೀಯ ವಾಯುಪಡೆಯ ಜೊತೆ ಸಂಪೂರ್ಣವಾಗಿ ಹಂಚಿಕೊಳ್ಳಲು ಸಿದ್ಧವಾಗಿರುವ ದೇಶಕ್ಕೆ ನಮ್ಮ ಪರವಾಗಿ ಧನ್ಯವಾದಗಳು.