ಪಾಕಿಸ್ತಾನದ ಬೆಂಬಲಕ್ಕೆ ನಿಂತು ಬಹಿರಂಗವಾಗಿ ಭಾರತಕ್ಕೆ ಎಚ್ಚರಿಕೆ ನೀಡಿದ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ! ಎತ್ತ ಸಾಗುತ್ತಿದೆ ದೇಶ?

ಪಾಕಿಸ್ತಾನದ ಬೆಂಬಲಕ್ಕೆ ನಿಂತು ಬಹಿರಂಗವಾಗಿ ಭಾರತಕ್ಕೆ ಎಚ್ಚರಿಕೆ ನೀಡಿದ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ! ಎತ್ತ ಸಾಗುತ್ತಿದೆ ದೇಶ?

ಜಮ್ಮು ಹಾಗೂ ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನವನ್ನು ತೆಗೆದುಹಾಕಿ ಕೇಂದ್ರ ಸರ್ಕಾರವು ಕಳೆದ ವಾರ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿತ್ತು, ಇದರಿಂದ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪಾಕಿಸ್ತಾನವು ಮಾನಸಿಕ ಸ್ಥಿಮಿತ ಕಳೆದುಕೊಂಡಂತೆ ಕಾಣುತ್ತಿದೆ. ಸುಖಾಸುಮ್ಮನೆ ಭಾರತದ ವಿರುದ್ಧ ಕತ್ತಿಮಸೆದ ಪಾಕಿಸ್ತಾನವು ಹಾಗೂ ಪಾಕಿಸ್ತಾನದ ಮೀಡಿಯಾಗಳಿಗೆ ಭಾರತದ ಕೆಲವು ರಾಜಕಾರಣಿಗಳ ಹೇಳಿಕೆ ಬಲವಾಗಿ ಬೆಂಬಲವನ್ನು ನೀಡಿದೆ ಎಂಬುವುದರಲ್ಲಿ ಎರಡು ಮಾತಿಲ್ಲ. ಈಗಾಗಲೇ ಕಾಶ್ಮೀರದಲ್ಲಿ ಅಶಾಂತಿ ನೆಲೆಸಿದೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು, ಕೆಲವು ರಾಷ್ಟ್ರೀಯ ಮಾಧ್ಯಮಗಳು ಹಾಗೂ ಕರ್ನಾಟಕದ ಕೆಲವು ಬಕೆಟ್ ಟಿವಿಗಳು ಸುದ್ದಿಗಳನ್ನು ಪ್ರಸಾರ ಮಾಡುತ್ತಿವೆ. ಹೀಗಿರುವಾಗ ನಕಲಿ ಸುದ್ದಿಯನ್ನು ತಡೆಯಬೇಕಾದ ನಾಯಕರು, ನಕಲಿ ಸುದ್ದಿಗಳಿಗೆ ಮತ್ತಷ್ಟು ಪ್ರೇರಕದ ಮಾತುಗಳನ್ನು ಹೊರಹಾಕುತ್ತಿದ್ದಾರೆ.

ಇದೀಗ ಇದರ ಸಾಲಿಗೆ ಮತ್ತು ಕಾಂಗ್ರೆಸ್ ನ ಹಿರಿಯ ನಾಯಕ ಸೇರಿಕೊಂಡಿದ್ದಾರೆ, ಈಗಾಗಲೇ ಕಾಂಗ್ರೆಸ್ ಪಕ್ಷವು ಕೇಂದ್ರ ಸರ್ಕಾರದ ಈ ನಿರ್ಧಾರದ ಪರ ನಿಲ್ಲದೆ ಇದ್ದ ಕಾರಣ ಹಲವಾರು ಜನ ಪಕ್ಷ ಬಿಟ್ಟು ಬಿಜೆಪಿ ಪಕ್ಷದ ಕಡೆ ವಲಸೆ ಹೋಗುತ್ತಿದ್ದಾರೆ. ಅಷ್ಟೇ ಅಲ್ಲದೆ ಕಾಂಗ್ರೆಸ್ ಪಕ್ಷದ ಹಲವಾರು ನಾಯಕರು ಬಿಜೆಪಿ ಪಕ್ಷ ಸರಿಯಾದ ನಿರ್ಧಾರ ತೆಗೆದುಕೊಂಡಿದೆ ಎಂದು ಹಾಡಿ ಹೊಗಳುತ್ತಿದ್ದಾರೆ. ಇಷ್ಟಾದರೂ ಸಹ ಕಾಂಗ್ರೆಸ್ ನಾಯಕರು ಮತ್ತು ಜಾತ್ಯಾತೀತ ಬುದ್ಧಿಜೀವಿಗಳು ಎಂದು ಕರೆಯಲ್ಪಡುವ ಹಲವಾರು ಜನ ಇದರ ವಿರುದ್ಧ ಧ್ವನಿ ಎತ್ತಿದ್ದಾರೆ. ಈಗ ಇದೇ ರೀತಿಯ ಹೇಳಿಕೆ ನೀಡಿರುವ ದಿಗ್ವಿಜಯ್ ಸಿಂಗ್ ರವರ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶದ ಮಾತುಗಳು ಕೇಳಿ ಬಂದಿವೆ, ಇವರ ಮಾತು ಮತ್ತೊಮ್ಮೆ ಪಾಕಿಸ್ತಾನದ ಮಾಧ್ಯಮಗಳಿಗೆ ಹಾಗೂ ಅಂತರರಾಷ್ಟ್ರೀಯ ಭಾರತದ ವಿರುದ್ಧ ಕುತಂತ್ರಗಳನ್ನು ನಡೆಸುವ ಮಾಧ್ಯಮಗಳಿಗೆ ಆಹಾರವಾಗಿದೆ.

ಅಷ್ಟಕ್ಕೂ ಅವರು ಏನು ಹೇಳಿದ್ದಾರೆ ಗೊತ್ತಾ??

ಕಾಶ್ಮೀರದಲ್ಲಿ ಭಾರತೀಯ ಸೇನೆ ಹಾಗೂ ಪೊಲೀಸರು ಯಾವುದೇ ಗುಂಡುಗಳನ್ನು ಹಾರಿಸುತ್ತಿಲ್ಲ ಎಂದು ಖಚಿತಪಡಿಸಿದ ನಂತರವೂ ಸಹ ಇದರ ವಿರುದ್ಧ ಹಲವಾರು ಮಾತುಗಳು ಕೇಳಿಬರುತ್ತಿರುವ ಹೊತ್ತಲ್ಲಿ ದಿಗ್ವಿಜಯ್ ಸಿಂಗ್ ಅವರು ಕಾಶ್ಮೀರದ ಪರಿಸ್ಥಿತಿಯ ಬಗ್ಗೆ ಊಹೆ ಮಾಡಿಕೊಂಡು ಭಾರತೀಯ ಕೇಂದ್ರ ಸರ್ಕಾರವು ಇಂದು ತನ್ನ ಕೈಯನ್ನು ತಾನೆ ಸುಟ್ಟಿಕೊಳ್ಳುತ್ತಿದೆ, ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಅಜಿತ್ ದೋವೆಲ್ ರವರು ಸಂಪೂರ್ಣ ಜಾಗರೂಕರಾಗಿರಬೇಕು ಇಲ್ಲವಾದಲ್ಲಿ ನಾವು ಕಾಶ್ಮೀರವನ್ನು ಕಳೆದುಕೊಳ್ಳುತ್ತೇವೆ ಎಂಬ ಆತಂಕ ವ್ಯಕ್ತಪಡಿಸಿ ಭಾರತ ದೇಶಕ್ಕೆ ಎಚ್ಚರಿಕೆ ನೀಡಿದ್ದಾರೆ.

ಅಲ್ಲ ಸ್ವಾಮಿ ಇಡೀ ವಿಶ್ವವೇ ಭಾರತದ ಕಿರೀಟ ವಾದ ಜಮ್ಮು ಕಾಶ್ಮೀರ ಭಾರತದ್ದು ಎಂದು ಹೇಳುತ್ತಿದೆ. ಅಷ್ಟೇ ಅಲ್ಲದೆ ಭಾರತೀಯ ಸೇನೆಯು ಪಾಕಿಸ್ತಾನದ ಸೇನೆಯನ್ನು ಕ್ಷಣಮಾತ್ರದಲ್ಲಿ ಮುಗಿಸಿಬಿಡುತ್ತದ. ಈ ರೀತಿ ಇರುವಾಗ ಯಾವ ಕಾರಣವನ್ನು ನೀವು ಮುಂದಿಟ್ಟುಕೊಂಡು ಭಾರತ ಕಾಶ್ಮೀರ ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತದೆ ಎಂದು ಚಿಂತನೆ ಮಾಡುತ್ತಿದ್ದೀರಾ?? ನಿಮಗೆ ಭಾರತೀಯ ಸೇನೆಯ ಮೇಲೆ ನಂಬಿಕೆ ಇಲ್ಲವೇ? ನಿಮ್ಮ ಪ್ರತಿಪಕ್ಷದವರು ಆದ ನರೇಂದ್ರ ಮೋದಿ ಹಾಗೂ ಅಮಿತ್ ಶಾ ರವರ ಮೇಲೆ ಕೋಪ ಇದ್ದರೆ ಇರಲಿ, ಆದರೆ ಕಾಶ್ಮೀರ ಕಳೆದುಕೊಳ್ಳುವ ಭೀತಿ ನಿಮಗೆ ಯಾಕೆ ಬಂತು? ಬಹಿರಂಗವಾಗಿ ಈ ರೀತಿ ಪಾಕಿಸ್ತಾನ ದೇಶವು ಬಲಿಷ್ಠವಾಗಿದೆ ಎಂದು ಹೇಳಿಕೆ ನೀಡುತ್ತಿದ್ದೀರಿ ! ಇದೆಲ್ಲ ನೋಡಿದರೆ ನಿಮಗೆ ಕೇವಲ ನರೇಂದ್ರ ಮೋದಿ ಅಥವಾ ಅಮಿತ್ ಶಾ ರವರ ಮೇಲೆ ಮಾತ್ರ ಕೋಪವಿಲ್ಲ, ಇಡೀ ದೇಶದ ವಿರುದ್ಧವೇ ಕೋಪ ಇರುವಂತೆ ಕಾಣುತ್ತಿದೆ.