ಮಾನವೀಯತೆ ಮೆರೆದ ಸುಧಾಮೂರ್ತಿ ಅಮ್ಮ, ಉತ್ತರ ಕರ್ನಾಟಕ ನೆರವಿಗೆ ನಿಂತು ಮಾಡಿದ್ದೇನು ಗೊತ್ತಾ??ಧನ್ಯವಾದ ತಿಳಿಸಿದ ಬಿ ಸ್ ವೈ

ಮಾನವೀಯತೆ ಮೆರೆದ ಸುಧಾಮೂರ್ತಿ ಅಮ್ಮ, ಉತ್ತರ ಕರ್ನಾಟಕ ನೆರವಿಗೆ ನಿಂತು ಮಾಡಿದ್ದೇನು ಗೊತ್ತಾ??ಧನ್ಯವಾದ ತಿಳಿಸಿದ ಬಿ ಸ್ ವೈ

ರಾಜ್ಯದ ಜನರು ಯಾವುದೇ ಕಷ್ಟದಲ್ಲಿ ಇರಲಿ ಮೊದಲಿಗೆ ಸ್ಪಂದನೆ ಮಾಡುವ ಏಕೈಕ ಮಹಿಳೆಯೆಂದರೆ ಕರ್ನಾಟಕದಲ್ಲಿ ಸುಧಾಮೂರ್ತಿ ಅಮ್ಮ.  ಯಾರೇ ಆಗಲಿ ಸಂಕಷ್ಟದಲ್ಲಿ ಇದ್ದಾರೆ ಎಂದ ತಕ್ಷಣ ಸುಧಾಮೂರ್ತಿ ಅಮ್ಮನವರು ಹಿಂದೆ ಮುಂದೆ ನೋಡದೆ ಸಹಾಯ ಹಸ್ತ ಚಾಚುತ್ತಾರೆ. ಕಳೆದ ಬಾರಿ ಕೊಡಗಿನ ಉಂಟಾದ ಪ್ರವಾಹ ಪರಿಸ್ಥಿತಿಯನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿ, ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಿ, ಬೇಕಾದ ಸಾಮಗ್ರಿಗಳನ್ನು ಸಮಯಕ್ಕೆ ಸರಿಯಾಗಿ ಹಲವರಿಗೆ ತಲುಪಿಸಿ, ಹಲವಾರು ಮನೆಗಳನ್ನು ಕಟ್ಟಿಸಿ ಕೊಟ್ಟಿದ್ದ ಸುಧಾಮೂರ್ತಿ ಅವರು ಇದೀಗ ಮತ್ತೊಮ್ಮೆ ಮಾನವೀಯತೆ ಮೆರೆದಿದ್ದಾರೆ. ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ 22 ಜಿಲ್ಲೆಗಳಲ್ಲಿ ಉಂಟಾಗಿರುವ ಪ್ರವಾಹದಿಂದ ಹಲವು ಮಂದಿ ಮನೆ, ಮಠಗಳನ್ನು ಕಳೆದುಕೊಂಡಿದ್ದಾರೆ,ಈ ಪರಿಸ್ಥಿತಿಗೆ ಸುಧಾಮೂರ್ತಿ ಅವರು ಸ್ಪಂದಿಸಿದ್ದಾರೆ.

ಹೌದು ಇದೀಗ ಉತ್ತರ ಕರ್ನಾಟಕ ಅಕ್ಷರಸಹ ಪ್ರವಾಹದಿಂದ ನಲುಗಿಹೋಗಿದೆ, ರಾಜ್ಯದ ಎಲ್ಲಾ ಬಿಜೆಪಿ ಶಾಸಕರು ಸೇರಿದಂತೆ ಇನ್ನೂ ಹಲವಾರು ಇತರ ಪಕ್ಷದ ರಾಜಕೀಯ ನಾಯಕರು ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಉತ್ತರ ಕರ್ನಾಟಕದಲ್ಲಿ ಟಿಕಾಣಿ ಹೂಡಿದ್ದಾರೆ. ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಇನ್ಫೋಸಿಸ್ ಫೌಂಡೇಶನ್ ಮೂಲಕ ಸುಧಾಮೂರ್ತಿ ರವರು ಪ್ರವಾಹ ನಿರ್ವಹಣೆ 10 ಕೋಟಿ ರೂಗಳನ್ನು ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಸಹಾಯ ಮಾಡಿದ್ದನ್ನು ಬೇರೊಬ್ಬರಿಗೆ ಹೇಳದ ಸುಧಾಮೂರ್ತಿ ರವರ ಈ ನಡೆ ಎಲ್ಲೆಡೆ ಮೆಚ್ಚುಗೆಗೆ ಕಾರಣವಾಗಿದೆ. ಇದೇ ಸಮಯದಲ್ಲಿ ಮಾತನಾಡಿದ ಯಡಿಯೂರಪ್ಪನವರು ಕನಿಷ್ಠ 5000 ಕೋಟಿ ರೂ ಇದೀಗ ಬೇಕಾಗಿದ್ದು, ಈ ಕೂಡಲೇ ಅನುದಾನಕ್ಕಾಗಿ ಕೇಂದ್ರದ ಕದ ತಟ್ಟುತ್ತಿವೆ, ಇನ್ನು ಪರಿಹಾರ ಶಿಬಿರಗಳಲ್ಲಿ ಯಾವುದೇ ಸಮಸ್ಯೆಗಳು ಇಲ್ಲ.ಅಷ್ಟೇ ಅಲ್ಲದೆ ನಾನು ಇಲ್ಲಿನ ಪರಿಸ್ಥಿತಿ ಸರಿ ಹೋಗುವ ತನಕ ಇಲ್ಲೇ ಇರುವೆ, ಜನರಿಗೆ ಬೇಕಾಗಿರುವ ಎಲ್ಲಾ ರೀತಿಯ ಸವಲತ್ತುಗಳನ್ನು ನೀಡುವುದಕ್ಕೆ ನಾವು ಬದ್ದರಾಗಿದ್ದೇವೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. .