ಬಿಗ್ ನ್ಯೂಸ್: ಡಿಕೆಶಿಗೆ ಬಿಗ್ ಶಾಕ್ ನೀಡಿದ ದೇವೇಗೌಡರು ! ಟ್ರಬಲ್ ಶೂಟರ್ ನ ಕೈಬಿಟ್ಟ ಜೆಡಿಎಸ್ !

ಬಿಗ್ ನ್ಯೂಸ್: ಡಿಕೆಶಿಗೆ ಬಿಗ್ ಶಾಕ್ ನೀಡಿದ ದೇವೇಗೌಡರು ! ಟ್ರಬಲ್ ಶೂಟರ್ ನ ಕೈಬಿಟ್ಟ ಜೆಡಿಎಸ್ !

ಕಳೆದ ವರ್ಷ ಸರ್ಕಾರ ಅಧಿಕಾರಕ್ಕೆ ಏರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಡಿಕೆ ಶಿವಕುಮಾರ್ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಒಂದು ಕಡೆ ಬಿಜೆಪಿ ಪಕ್ಷವು ಬಹಿರಂಗವಾಗಿ ಆಪರೇಷನ್ ಕಮಲ ನಡೆಸುತ್ತಿದ್ದರೆ, ಮತ್ತೊಂದೆಡೆ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಡಿಕೆ ಶಿವಕುಮಾರ್ ಅವರು ಸಂಪೂರ್ಣವಾಗಿ ಯಶಸ್ವಿಯಾಗಿದ್ದರು. ಅಷ್ಟೇ ಅಲ್ಲದೆ ಸರ್ಕಾರ ರಚನೆಯಾದ ನಂತರ ದಿನಕ್ಕೊಂದು ಭಿನ್ನಮತಗಳು ಭುಗಿಲೇಳುವ ಸಮಯದಲ್ಲಿ ಮೈತ್ರಿ ಸರ್ಕಾರದ ಜೊತೆಗೆ ನಿಂತು ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ಮುಂದುವರೆಯುವಂತೆ ನೋಡಿಕೊಂಡಿದ್ದು ಡಿಕೆ ಶಿವಕುಮಾರ್. ಕಳೆದ ಲೋಕಸಭಾ ಚುನಾವಣೆಗೆ ಸಮಯದಲ್ಲಿಯೂ ಸಹ ಚುನಾವಣಾಪೂರ್ವ ಮೈತ್ರಿಯಲ್ಲಿ ಹಲವಾರು ಭಿನ್ನಮತಗಳು ಕಾಣಿಸಿಕೊಂಡಾಗ ದೇವೇಗೌಡರ ಬೆಂಬಲಕ್ಕೆ ನಿಂತು ಕಾಂಗ್ರೆಸ್ ಪಕ್ಷದ ನಡುವಿನ ಎಲ್ಲಾ ಭಿನ್ನಮತಗಳನ್ನು ಬಹಿರಂಗವಾಗಿ ಶಮನ ಮಾಡಿದ್ದು ಇದೇ ಡಿಕೆ ಶಿವಕುಮಾರ್.

ಡಿಕೆ ಶಿವಕುಮಾರ್ ಅವರ ಕಾರ್ಯವೈಖರಿಯನ್ನು ಕಂಡಿದ್ದ ಬಿಜೆಪಿ ಪಕ್ಷವು ಒಂದು ಕ್ಷಣ ದಂಗಾಗಿದ್ದು ಸತ್ಯ, ಪ್ರತಿಯೊಂದು ಬಾರಿಯೂ ಭಿನ್ನಮತಗಳು ಕಾಣಿಸಿಕೊಂಡಾಗ ತಮ್ಮ ನಾಯಕತ್ವ ಗುಣಗಳನ್ನು ಪ್ರದರ್ಶಿಸಿದ್ದ ಡಿಕೆ ಶಿವಕುಮಾರ್ ಅವರ ನಾಯಕತ್ವವನ್ನು ನೋಡಿ ದೇವೇಗೌಡರು ಸಹ ಅಚ್ಚರಿಪಟ್ಟಿದ್ದರು. ಅಷ್ಟೇ ಯಾಕೆ ಒಂದು ವೇಳೆ ಕುಮಾರಸ್ವಾಮಿ ಅವರನ್ನು ಹೊರತುಪಡಿಸಿ ಉಳಿದ ಕಾಂಗ್ರೆಸ್ ನಾಯಕ ಯಾರಾದರೂ ಮುಖ್ಯಮಂತ್ರಿಯಾಗುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರ ನೀಡಿದ್ದ ದೇವೇಗೌಡರು ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆಗಳು ಡಿಕೆ ಶಿವಕುಮಾರ್ ಅವರಿಗೆ ಇದೆ, ಒಂದು ವೇಳೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಅಗತ್ಯ ಬಂದಲ್ಲಿ ಡಿಕೆ ಶಿವಕುಮಾರ್ ರವರೇ ನಮ್ಮ ಮೊದಲ ಆದ್ಯತೆ ಎಂದು ಹೇಳಿಕೆ ನೀಡಿದ್ದರು.

ದೇವೇಗೌಡರ ಹೇಳಿಕೆ ನೋಡಿದ್ದ ಪ್ರತಿಯೊಬ್ಬರೂ ಒಂದು ವೇಳೆ ಮೈತ್ರಿ ಸರ್ಕಾರ ಭಿನ್ನಮತಗಳಿಂದ ಉರುಳುವ ಸಂದರ್ಭ ಬಂದಲ್ಲಿ ದೇವೇಗೌಡರು ಸಾಮಾನ್ಯವಾಗಿ ಡಿಕೆ ಶಿವಕುಮಾರ್ ಅವರ ಹೆಸರನ್ನು ಪ್ರಸ್ತಾಪಿಸಿ ಕುಮಾರಸ್ವಾಮಿ ರವರಿಂದ ರಾಜೀನಾಮೆ ನೀಡಿಸುತ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದರು. ಡಿಕೆ ಶಿವಕುಮಾರ್ ಅವರ ಕಡೆ ದೇವೇಗೌಡರ ಒಲವು ಇದ್ದರೂ ಅದಕ್ಕೆ ಸಿದ್ದರಾಮಯ್ಯನವರು ಅಡ್ಡಗಾಲು ಹಾಕುತ್ತಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನ ಜೊತೆ ಒಳ್ಳೆಯ ಬಾಂಧವ್ಯ ಹೊಂದಿರುವ ದೇವೇಗೌಡರು ಹೇಗಾದರೂ ಮಾಡಿ ಡಿಕೆ ಶಿವಕುಮಾರ್ ಅವರ ಕೈ ಹಿಡಿಯುತ್ತಾರೆ ಎಂದು ಎಲ್ಲರೂ ನಂಬಿದ್ದರು.

ಆದರೆ ಇದೀಗ ಮೈತ್ರಿ ಸರ್ಕಾರ ಉರುಳುವ ಸಂದರ್ಭ ಬಂದ ತಕ್ಷಣ ದೇವೇಗೌಡರು ಉಲ್ಟಾ ಹೊಡೆದಿದ್ದಾರೆ. ಮೊದಲಿನಿಂದಲೂ ಡಿಕೆ ಶಿವಕುಮಾರ್ ಅವರ ಪರವಾಗಿ ನಿಂತಿದ್ದ ದೇವೇಗೌಡರ ಅಚಲ ನಿಲುವು ಈಗ ಬದಲಾಗಿದೆ, ಒಂದು ವೇಳೆ ಮುಖ್ಯಮಂತ್ರಿಕುಮಾರಸ್ವಾಮಿ ರವರು ಸ್ಥಾನ ಕಳೆದುಕೊಳ್ಳುವ ಸಂದರ್ಭ ಬಂದರೆ ಮೈತ್ರಿ ಸರ್ಕಾರವನ್ನು ಮುಂದುವರಿಸುವ ಉದ್ದೇಶದಿಂದ ಮಲ್ಲಿಕಾರ್ಜುನ ಖರ್ಗೆ ರವರನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡಲು ಪ್ರಸ್ತಾಪಿಸುತ್ತಾರೆ ಎನ್ನಲಾಗಿದೆ. ಇದರಿಂದ ಸಿದ್ದರಾಮಯ್ಯನವರು ಸಹ ಸೈಲೆಂಟ್ ಆಗುತ್ತಾರೆ ಎಂಬುವ ಪ್ಲಾನ್ ದೇವೇಗೌಡರದ್ದು, ಆದರೆ ಇಷ್ಟು ದಿವಸ ಕುಮಾರಸ್ವಾಮಿರವರ ಬೆಂಬಲಕ್ಕೆ ನಿಂತಿದ್ದ ಡಿಕೆ ಶಿವಕುಮಾರ್ ಅವರಿಗೆ ದೇವೇಗೌಡರು ಈ ರೀತಿಯ ಶಾಕ್ ನೀಡುತ್ತಾರೆ ಎಂದು ಯಾರು ಊಹೆ ಕೂಡ ಮಾಡಿರಲಿಲ್ಲ. ಸದ್ಯಕ್ಕೆ ಇಷ್ಟು ಅಪ್ಡೇಟ್ಗಳು ಮಾತ್ರ ಸಿಗುತ್ತಿದ್ದು ಮುಂದೆ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ. ಈ ವಿಷಯದ ಕುರಿತು ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಬಾಕ್ಸಲ್ಲಿ ತಿಳಿಸಿ.ಯಾವುದೇ ರೀತಿಯ ವೆಬ್ಸೈಟ್ ಡಿಸೈನ್ ಅಥವಾ ಜಾಹೀರಾತಿಗಾಗಿ 9148497148 ನಂಬರ್ಗೆ ವಾಟ್ಸಾಪ್ ಮಾಡಿ.