ಯು-ಟರ್ನ್ ಹೊಡೆದ ಕುಮಾರಸ್ವಾಮಿ- ಮುಂದುವರೆಯಿತು ಕೋಟಿ ಕೋಟಿಯ ಐಷಾರಾಮಿ ಜೀವನ

ಯು-ಟರ್ನ್ ಹೊಡೆದ ಕುಮಾರಸ್ವಾಮಿ- ಮುಂದುವರೆಯಿತು ಕೋಟಿ ಕೋಟಿಯ ಐಷಾರಾಮಿ ಜೀವನ

ಇದೀಗ ಎಲ್ಲಿ ನೋಡಿದರೂ ಸಿಎಂ ಕುಮಾರಸ್ವಾಮಿ ರವರ ಗ್ರಾಮವಾಸ್ತವ್ಯದ ಸದ್ದು ಕೇಳಿಬರುತ್ತಿದೆ. ಚುನಾವಣೆಗೂ ಮುನ್ನವೇ ಪ್ರಣಾಳಿಕೆಯಲ್ಲಿ ತಾನು ಗ್ರಾಮವಾಸ್ತವ್ಯದ ಮೂಲಕ ಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿನ ಜನರ ಕಷ್ಟಗಳನ್ನು ಅರಿತು, ಪ್ರತಿಯೊಂದಕ್ಕೂ ಪರಿಹಾರವನ್ನು ನೀಡುತ್ತೇನೆ ಎಂದು ಕುಮಾರಸ್ವಾಮಿ ರವರು ಭರವಸೆ ನೀಡಿದ್ದರು. ಆದರೆ ಅದ್ಯಾಕೋ ಕುಮಾರಸ್ವಾಮಿ ರವರು ಅಧಿಕಾರ ಸ್ವೀಕರಿಸಿಗೊಂಡು ಒಂದು ವರ್ಷ ಕಳೆದರೂ ಸಹ ಸಿಎಂ ಕುಮಾರಸ್ವಾಮಿ ರವರು ಗ್ರಾಮವಾಸ್ತವ್ಯದ ಬಗ್ಗೆ ಯೋಚನೆ ಸಹ ಮಾಡಿರಲಿಲ್ಲ. ಇಷ್ಟು ದಿವಸ ಸರ್ಕಾರ ಉಳಿಸಿಕೊಳ್ಳುವಲ್ಲಿ ನಿರತರಾಗಿದ್ದ ಕುಮಾರಸ್ವಾಮಿರವರು ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದ ಮೇಲೆ, ಗ್ರಾಮ ವಾಸ್ತವ್ಯ ಗಳ ಬದಲಾಗಿ ತಾಲೂಕು ವಾಸ್ತವ್ಯ ಮಾಡುವುದಾಗಿ ಘೋಷಣೆ ಮಾಡಿ, ಸರ್ಕಾರಿ ಶಾಲೆಗಳಲ್ಲಿ ವಾಸ್ತವ್ಯವೂಡಿ ಜನರ ಸಮಸ್ಯೆಯನ್ನು ಆಲಿಸಿ ಪರಿಹಾರ ನೀಡುತ್ತೇನೆ ಎಂದು ಭರವಸೆ ನೀಡಿದ್ದರು.

ಇದೇ ಕಾರ್ಯವಾಗಿ ಹಲವಾರು ಮುಂಜಾಗ್ರತಾ ಕಾರ್ಯಗಳು ಆರಂಭವಾಗಿದ್ದವು. ಕುಮಾರಸ್ವಾಮಿ ರವರು ಬರುತ್ತಾರೆ ಎಂಬ ಸುದ್ದಿ ಕೇಳುತ್ತಿದ್ದಂತೆ ಸರ್ಕಾರಿ ಶಾಲೆಗಳ ನವೀಕರಣ ಆರಂಭವಾಗಿತ್ತು. ಇಷ್ಟೆಲ್ಲಾ ವಾದ-ವಿವಾದಗಳ ನಡುವೆ ರಾಜ್ಯವೂ ಆರ್ಥಿಕ ಸಂಕಷ್ಟದಲ್ಲಿ ಇದ್ದರೂ ಸಹ ಖರ್ಚಿಗೆ ಕಡಿವಾಣ ಹಾಕುತ್ತೇನೆ ಎಂದು ಅಧಿಕಾರದ ಗದ್ದುಗೆ ಏರಿದ್ದ ಕುಮಾರಸ್ವಾಮಿ ಅವರು, ಕೋಟಿ ಕೋಟಿ ಸರ್ಕಾರದ ಹಣವನ್ನು ತಾವು ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ವಾಸ್ತವ್ಯ ಮಾಡಿ ಬಾರಿ ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದರು. ಆದರೆ ಗ್ರಾಮವಾಸ್ತವ್ಯದ ಸುದ್ದಿ ಕೇಳಿ ಬಂದ ತಕ್ಷಣ, ಕುಮಾರಸ್ವಾಮಿ ರವರು ಜೆಪಿ ನಗರದಲ್ಲಿ ಇರುವ ತಮ್ಮ ಮನೆಗೆ ಶಿಫ್ಟ್ ಆಗಲಿದ್ದಾರೆ ಎಂಬ ಮಾಹಿತಿ ಕೇಳಿಬಂದಿತ್ತು.

ಈ ಮೂಲಕ ವಿರೋಧ ಪಕ್ಷದವರ ಬಾಯಿಗೆ ಬೀಗ ಜಡಿದಿದ್ದ ಕುಮಾರಸ್ವಾಮಿ ರವರು ಇದೀಗ ಯು-ಟರ್ನ್ ಹೊಡೆದ ವಿಷಯ ತಿಳಿದು ಬಂದಿದೆ. ರಾಜ್ಯವು ಈ ರೀತಿಯ ಆರ್ಥಿಕ ಸಂಕಷ್ಟದಲ್ಲಿ ಇದ್ದರೂ ಸಹ ಕುಮಾರಸ್ವಾಮಿರವರ ಕೋಟಿ ಕೋಟಿ ಬಿಲ್ ಮಾಡುವ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ವಾಸ್ತವ್ಯ ಮುಂದುವರಿಸುತ್ತಿದ್ದಾರೆ. ಈಗಲೂ ಸಹ ಸಿಎಂ ಕುಮಾರಸ್ವಾಮಿ ರವರು ಅಲ್ಲೇ ವಾಸ್ತವ್ಯ ಹೂಡಿದ್ದಾರೆ. ಹೀಗಾಗಿ ಕೇವಲ ತೋರ್ಪಡಿಕೆ ಯ ವಿಷಯವಾಗಿ ಕುಮಾರಸ್ವಾಮಿ ರವರು ಬದಲಾವಣೆ ಮಾಡುತ್ತೇನೆ ಎಂದು ಹೇಳಿಕೊಂಡರೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.

ಲೋಕಸಭಾ ಚುನಾವಣೆಯ ನಂತರ ಸಿಎಂ ಕುಮಾರಸ್ವಾಮಿ ರವರು ಕೇವಲ ಐಷಾರಾಮಿ ಹೋಟೆಲುಗಳಲ್ಲಿ ವಾಸ್ತವ್ಯ ಮಾಡುತ್ತಿದ್ದು, ಗ್ರಾಮ ವಾಸ್ತವ್ಯ ಮಾಡುತ್ತಿಲ್ಲ ಎಂದು ವಿರೋಧ ಪಕ್ಷಗಳು ಆರೋಪ ಮಾಡಿದವು ಇದಕ್ಕೆ ಪ್ರತ್ಯುತ್ತರವಾಗಿ ಕುಮಾರಸ್ವಾಮಿರವರ ಗ್ರಾಮ ವಾಸ್ತವ್ಯ ಆರಂಭಿಸುತ್ತೇನೆ ಎಂದು ಅಧಿಕೃತ ಹೇಳಿಕೆಯನ್ನು ನೀಡಿದ್ದರು. ಈ ಎಲ್ಲ ವಿವಾದಗಳ ನಡುವೆ ತಾಜ್ ವೆಸ್ಟ್ ಎಂಡ್ ಹೋಟೆಲ್ನ ವಾಸ್ತವ್ಯ ಇದೀಗ ಮುಂದುವರೆದಿದ್ದು ವಿರೋಧ ಪಕ್ಷಗಳಿಗೆ ಇದೀಗ ಮತ್ತೊಂದು ಅಸ್ತ್ರ ಸಿಕ್ಕಿದ್ದು, ಈ ಅಸ್ತ್ರವನ್ನು ಕುಮಾರಸ್ವಾಮಿರವರ ಮೇಲೆ ಮತ್ತೊಮ್ಮೆ ಪ್ರಯೋಗಿಸಲು ವಿರೋಧ ಪಕ್ಷ ಸಿದ್ಧವಾಗಿದೆ.