ಕಲಾಂ ರವರಿಗೆ ಪ್ರತಿವರ್ಷ ವಿಶೇಷ ರೀತಿಯಲ್ಲಿ ಗೌರವ ಸಲ್ಲಿಸಲು ಒತ್ತಾಯಿಸಿದ ಬಿಜೆಪಿ ನಾಯಕ! ಹೇಗೆ ಗೊತ್ತಾ??

ಕಲಾಂ ರವರಿಗೆ ಪ್ರತಿವರ್ಷ ವಿಶೇಷ ರೀತಿಯಲ್ಲಿ ಗೌರವ ಸಲ್ಲಿಸಲು ಒತ್ತಾಯಿಸಿದ ಬಿಜೆಪಿ ನಾಯಕ! ಹೇಗೆ ಗೊತ್ತಾ??

ಯಾವೊಬ್ಬ ಭಾರತೀಯನು ದ್ವೇಷಿಸದೆ ಇರುವ ಅಜಾತಶತ್ರು ಎಂದು ಇಡೀ ದೇಶದ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದ ಭಾರತದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ರವರ ಬಗ್ಗೆ ನಮಗೆ ಮಾತನಾಡಲು ಒಂದು ಸಂಪೂರ್ಣ ದಿವಸ ಸಹ ಸಾಕಾಗುವುದಿಲ್ಲ. ಇಡೀ ವಿಶ್ವವೇ ಇವರ ಕಾರ್ಯಗಳನ್ನು ಕೊಂಡಾಡಿ, ಅಮೆರಿಕದಂತಹ ದೊಡ್ಡ ದೇಶಗಳು ಕೋಟಿ ಕೋಟಿ ಹಣ ನೀಡುತ್ತೇವೆ ನಮ್ಮ ದೇಶಕ್ಕೆ ಬಂದು ಕೆಲಸ ಮಾಡಿ ಎಂದರೂ, ಭಾರತದ ಕ್ಷಿಪಣಿ ವ್ಯಕ್ತಿ ಎಂದೇ ಖ್ಯಾತರಾಗಿರುವ ಅಬ್ದುಲ್ ಕಲಾಂರವರು ಒಪ್ಪಿರಲಿಲ್ಲ. ಮಹಾನ್ ದೇಶ ಭಕ್ತರಾಗಿದ್ದ ಇವರು ಕೆಲವು ವರ್ಷಗಳ ಹಿಂದೆ ನಮ್ಮೆಲ್ಲರನ್ನು ಅಗಲಿ ಎಲ್ಲಾ ಭಾರತೀಯರ ಕಣ್ಣಲ್ಲಿ ನೀರನ್ನು ತರಿಸಿದ್ದರು.

ಇದೀಗ ಮಾಜಿ ರಾಷ್ಟ್ರಪತಿ ದಿವಂಗತ ಎಪಿಜೆ ಅಬ್ದುಲ್ ಕಲಾಂ ರವರಿಗೆ ವಿಶೇಷ ಗೌರವವನ್ನು ಸಲ್ಲಿಸುವ ನಿಟ್ಟಿನಲ್ಲಿ ಬಿಜೆಪಿ ಪಕ್ಷದ ಮಾಜಿ ರಾಜ್ಯಸಭಾ ಸಂಸದ ಹಾಗೂ ಬಿಜೆಪಿ ಪಕ್ಷದ ಹಿರಿಯ ಮುಖಂಡರಲ್ಲಿ ಒಬ್ಬರಾಗಿರುವ ಆನಂದ್ ಬಾಸ್ಕರ್ ಅವರು ಕೇಂದ್ರ ಸರ್ಕಾರದ ಮುಂದೆ ಹೊಸ ಮನವಿಯನ್ನು ಇಟ್ಟಿದ್ದಾರೆ. ಈ ಮೂಲಕ ಪ್ರತಿ ವರ್ಷವೂ ಅಬ್ದುಲ್ ಕಲಾಂ ರವರ ಹುಟ್ಟುಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಣೆ ಮಾಡಿ ಗೌರವ ಸಲ್ಲಿಸಲು ಅನುವು ಮಾಡಿಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ. ಅದು ಹೇಗೆ ಗೊತ್ತಾ?? ಸಂಪೂರ್ಣ ವಿವರಗಳಿಗಾಗಿ ಕೆಳಗಡೆ ಓದಿ ಹಾಗೂ ಈ ವಿಚಾರವಾಗಿ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

ನಿಮಗೆಲ್ಲರಿಗೂ ತಿಳಿದಿರುವ ಹಾಗೇ ವಿಶೇಷ ವ್ಯಕ್ತಿಗಳಿಗೆ ಗೌರವ ಸಲ್ಲಿಸಲು ಆ ನಾಯಕರ ಹುಟ್ಟು ಹಬ್ಬದ ದಿನ ವಿಶೇಷ ರೀತಿಯ ದಿನಾಚರಣೆ ಗಳನ್ನು ಆಚರಿಸಲಾಗುತ್ತದೆ. ಇದೇ ವಿಚಾರವಾಗಿ ಈಗಾಗಲೇ ವಿಶ್ವಸಂಸ್ಥೆಯು ಅಬ್ದುಲ್ ಕಲಾಂ ರವರ ಹುಟ್ಟುಹಬ್ಬದ ದಿನವನ್ನು ವಿಶ್ವ ವಿದ್ಯಾರ್ಥಿ ದಿನ ಎಂದು ಘೋಷಣೆ ಮಾಡಿದೆ. ಆದರೆ ಇದು ಭಾರತದಲ್ಲಿ ಜಾರಿ ಇಲ್ಲ. ಇದೇ ವಿಚಾರವಾಗಿ ಇದೀಗ ಕೇಂದ್ರದ ಬಳಿ ಮನವಿ ಮಾಡಿಕೊಂಡಿರುವ ಕೇಂದ್ರ ಮಾನವ ಸಂಪನ್ಮೂಲ ಸಚಿವ ಡಾಕ್ಟರ್ ರಮೇಶ್ ನಿಶಾಂತ್ ರವರಿಗೆ ಆನಂದ್ ಬಾಸ್ಕರ್ ರವರು ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.

ಅಬ್ದುಲ್ ಕಲಾಂರವರ ಹುಟ್ಟುಹಬ್ಬವಾದ ಅಕ್ಟೋಬರ್ 15 ನೇ ತಾರೀಖನ್ನು ರಾಷ್ಟ್ರದಲ್ಲಿ ರಾಷ್ಟ್ರೀಯ ವಿದ್ಯಾರ್ಥಿ ದಿನಾಚರಣೆಯಾಗಿ ಘೋಷಣೆ ಮಾಡಬೇಕು. ಅಷ್ಟೇ ಅಲ್ಲದೆ ಎಲ್ಲಾ ಹಂತದ, ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿಯೂ ಈ ದಿನವನ್ನು ಸೂಕ್ತವಾಗಿ ಆಚರಿಸುವಂತೆ ಆದೇಶ ಹೊರಡಿಸಬೇಕು. ಇದರಿಂದಾಗಿ ಭಾರತದ ಕ್ಷಿಪಣಿ ವ್ಯಕ್ತಿ ಅಬ್ದುಲ್ ಕಲಾಂರವರು ಕನಸು ಕಂಡಂತೆ, ವಿದ್ಯಾರ್ಥಿಗಳ ಮನಸ್ಸನ್ನು ಬೆಳಗಿಸುವ ಕ್ಷಣ ವನ್ನಾಗಿ ಈದಿನ ಬಳಸಿಕೊಳ್ಳಬೇಕು ಎಂದು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ. ಒಂದು ವೇಳೆ ಬಿಜೆಪಿ ನಾಯಕರು ಇದಕ್ಕೆ ಅಸ್ತು ಎಂದಲ್ಲಿ ಇನ್ನು ಅಬ್ದುಲ್ ಕಲಾಂರವರ ಹುಟ್ಟುಹಬ್ಬದ ದಿನವನ್ನು ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನ ದಿನಾಚರಣೆಯನ್ನಾಗಿ ಮಾಡಿಕೊಂಡು ಕಲಾಂ ರವರಿಗೆ ವಿಶೇಷ ಗೌರವ ಸಲ್ಲಿಸುತ್ತಾರೆ.