ನಾಯ್ಡುಗೆ ಸಿಬಿಐ ನಂತರ ಮತ್ತೊಂದು ಬಿಗ್ ಶಾಕ್ ನೀಡಿದ ಜಗಮೋಹನ್ ರೆಡ್ಡಿ! ನಾಯ್ಡು ನೇರ ಜೈಲಿಗೆ??

ಜಗಮೋಹನ್ ರೆಡ್ಡಿ ರವರು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ಕೆಲವು ದಿನಗಳಲ್ಲಿ ಹಲವಾರು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೇ ಮೊದಲಿನಿಂದಲೂ ಆಂಧ್ರಪ್ರದೇಶ ರಾಜ್ಯವು ವಿಶೇಷ ಸ್ಥಾನಮಾನಕ್ಕಾಗಿ ಬೇಡಿಕೆ ಇಡುತ್ತಾ ಬಂದಿತ್ತು‌. ಆದರೆ ಅಧಿಕಾರ ವಹಿಸಿಕೊಂಡ ಕೆಲವೇ ಕೆಲವು ದಿನಗಳಲ್ಲಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಜಗನ್ಮೋಹನ್ ರೆಡ್ಡಿ ರವರು ಆಂಧ್ರಪ್ರದೇಶ ರಾಜ್ಯವನ್ನು ಎಲ್ಲಾ ರೀತಿಯಲ್ಲೂ ಅಳೆದು-ತೂಗಿ ನಿಮಗೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ಅನಿಸಿದರೆ ನೀಡಿ ಇಲ್ಲವಾದರೆ ಬೇಡ ಎಂದು ಹೇಳಿಕೆ ನೀಡುವ ಮೂಲಕ ಎಲ್ಲರ ಹುಬ್ಬೇರಿಸಿದ್ದರು.

ತದನಂತರ ಮಾಜಿ ಮುಖ್ಯಮಂತ್ರಿಗಳಾಗಿರುವ ಚಂದ್ರಬಾಬು ನಾಯ್ಡುರವರ ಮೇಲೆ ಸಮರ ಸಾರಿರುವ ಜಗಮೋಹನ್ ರೆಡ್ಡಿ ರವರು, ಸಿಬಿಐ ಸಂಸ್ಥೆಯ ಮೇಲಿದ್ದ ನಿಷೇಧವನ್ನು ಸಂಪೂರ್ಣವಾಗಿ ತೆಗೆದು ಹಾಕಿ ರಾಜ್ಯದಲ್ಲಿ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿ ಯಾವುದೇ ಪ್ರಕರಣವನ್ನು ರಾಜ್ಯದ ಅನುಮತಿಯಿಲ್ಲದೆ ಕೈಗೆತ್ತುಕೊಂಡು ತನಿಖೆ ನಡೆಸಿ, ಅಪರಾಧಿಗಳನ್ನು ಶಿಕ್ಷಿಸಬಹುದು ಎಂಬ ಆದೇಶ ಹೊರಗಿಟ್ಟಿದ್ದರು. ಇಷ್ಟೆಲ್ಲಾ ಆದ ನಂತರ ಇದೀಗ ಮತ್ತೊಂದು ನಿರ್ಧಾರ ತೆಗೆದುಕೊಂಡು ನಾಯ್ಡು ಅವರಿಗೆ ಶಾಕ್ ನೀಡಿದ್ದಾರೆ. ಇದನ್ನು ಕೇಳಿದ ಆಂಧ್ರಪ್ರದೇಶದ ಜನತೆಯು ನಾಯ್ಡುರವರು ಜೈಲಿಗೆ ಹೋಗುವ ದಿನಗಳು ಹತ್ತಿರ ಬರುತ್ತಿವೆ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದಾರೆ.

ನಿಮಗೆಲ್ಲರಿಗೂ ತಿಳಿದಿರುವ ಹಾಗೇ ಆಂಧ್ರಪ್ರದೇಶದ ಕನಸಿನ ಯೋಜನೆಯಾಗಿರುವ ಅಮರಾವತಿ ಯೋಜನೆಗಳಲ್ಲಿ ಹಲವಾರು ಅಕ್ರಮಗಳು ನಡೆದಿವೆ ಎಂಬ ಮಾತುಗಳು ಕೇಳಿಬಂದಿದ್ದವು. ಚಂದ್ರಬಾಬು ನಾಯ್ಡು ರವರು ತಮ್ಮ ಸ್ವಂತ ಕುಲದ/ಜಾತಿಯ ಓಲೈಕೆಗಾಗಿ ಹಾಗೂ ತಮ್ಮ ಆಪ್ತರ ಮನವೊಲಿಸಲು ಹಲವಾರು ಟೆಂಡರ್ ಗಳನ್ನು ಅಕ್ರಮವಾಗಿ ಮಂಜೂರು ಮಾಡಿದ್ದಾರೆ ಹಾಗೂ ಮಂಜೂರಾದ ಟೆಂಡರ್ ಗಳ ಯೋಜನೆಗಳು ಯಾವುದೇ ಗುಣಮಟ್ಟ ಗಳಿಂದ ಕೂಡಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದವು.

ಇದನ್ನು ಗಂಭೀರವಾಗಿ ಪರಿಗಣಿಸಿರುವ ಜಗಮೋಹನ್ ರೆಡ್ಡಿ ರವರು ಈ ಕೂಡಲೇ ಅಮರಾವತಿ ನಗರದ ಪ್ರತಿಯೊಂದು ಟೆಂಡರ್ ಗಳಲ್ಲಿ ನಡೆದಿರುವ ಹಗರಣಗಳನ್ನು ಹೊರತೆಗೆಯಲು ನಿರ್ಧಾರ ಮಾಡಿದ್ದು, ಪ್ರತಿಯೊಂದು ಟೆಂಡರ್ ಗಳ ಮಂಜೂರಾತಿಯನ್ನು ಮರುಪರಿಶೀಲನೆ ನಡೆಸಿ ಅನುಮಾನ ಬಂದಲ್ಲಿ ಸಂಪೂರ್ಣವಾಗಿ ತನಿಖೆ ನಡೆಸುವಂತೆ ಆದೇಶ ನೀಡಿದ್ದಾರೆ. ಇಷ್ಟೇ ಅಲ್ಲದೇ ಈಗಾಗಲೇ ಮುಗಿಯುವ ಹಂತದಲ್ಲಿ ಇರುವ ಯೋಜನೆಗಳ ಗುಣಮಟ್ಟಗಳನ್ನು ಪರಿಶೀಲಿಸಿ, ಅಂದುಕೊಂಡಿದ್ದಕ್ಕಿಂತ ಗುಣಮಟ್ಟ ಕಡಿಮೆ ಇದ್ದಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ಆದೇಶ ಹೊರಡಿಸಿದ್ದಾರೆ. ಈ ವಿಷಯ ಹೊರ ಬೀಳುತ್ತಿದ್ದಂತೆ ನಾಯ್ಡುರವರು ಇದೀಗ ಸಿಕ್ಕಿ ಬೀಳಲಿದ್ದಾರೆ ಹಾಗೂ ನೇರವಾಗಿ ಜೈಲಿಗೆ ಹೋಗಲಿದ್ದಾರೆ ಎಂಬ ಮಾತುಗಳು ಸಾಕಷ್ಟು ಕೇಳಿ ಬಂದಿವೆ. ಸಂಪೂರ್ಣ ವಿವರಗಳು ಇನ್ನು ಕೆಲವೇ ಕೆಲವು ದಿನಗಳಲ್ಲಿ ಹೊರಬೀಳಲಿದ್ದು ನಾಯ್ಡುರವರ ಭವಿಷ್ಯ ಏನಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.

Facebook Comments

Post Author: Ravi Yadav