ಚುನಾವಣೆ ಬಳಿಕ ಚೌಕಿದಾರ್ ಆದ ಗೋಲ್ಡನ್ ಸ್ಟಾರ್ ಗಣೇಶ್

ಕೆಲವು ದಿನಗಳ ಹಿಂದಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ನರೇಂದ್ರ ಮೋದಿ ಅವರು ಚೌಕಿದಾರ್ ನರೇಂದ್ರ ಮೋದಿ ಎಂದು ಹೆಸರು ಬದಲಿಸಿಕೊಂಡ ತಕ್ಷಣ ಕೋಟ್ಯಂತರ ಬಿಜೆಪಿ ಬೆಂಬಲಿಗರು ಹಾಗೂ ಎಲ್ಲಾ ಬಿಜೆಪಿ ನಾಯಕರು ತಮ್ಮ ಟ್ವಿಟರ್ ಹಾಗೂ ಫೇಸ್ಬುಕ್ ಖಾತೆಗಳ ಹೆಸರಿನ ಮುಂದೆ ಚೌಕಿದಾರ್ ಎಂದು ಸೇರಿಸಿಕೊಂಡು ನರೇಂದ್ರ ಮೋದಿ ರವರಿಗೆ ಬಹಿರಂಗವಾಗಿ ಬೆಂಬಲ ಘೋಷಿಸಿದ್ದರು. ತದನಂತರ ಚುನಾವಣಾ ಫಲಿತಾಂಶ ಹೊರಬಿದ್ದ ಮೇಲೆ ನರೇಂದ್ರ ಮೋದಿ ಅವರು ಅಧಿಕೃತವಾಗಿ ಸಾಮಾಜಿಕ ಜಾಲತಾಣಗಳಿಂದ ತಮ್ಮ ಹೆಸರಿನ ಮುಂದೆ ಇರುವ ಚೌಕಿದಾರ್ ಎಂಬ ಪದವನ್ನು ತೆಗೆಯುವಂತೆ ಆದೇಶ ನೀಡಿದ ಬಳಿಕ ಎಲ್ಲಾ ಬಿಜೆಪಿ ನಾಯಕರು ಚೌಕಿದಾರ್ ಎಂಬ ಹೆಸರನ್ನು ತೆಗೆದು ಹಾಕಿದ್ದರು. ಆದರೆ ಇದೀಗ ಮುಂಗಾರು ಮಳೆ ಖ್ಯಾತಿಯ ಗೋಲ್ಡನ್ ಸ್ಟಾರ್ ಗಣೇಶ್ ರವರು ಚೌಕಿದಾರ್ ಆಗಿ ಗಾಂಧಿನಗರದಲ್ಲಿ ಹವಾ ಸೃಷ್ಟಿಸಲು ಸಜ್ಜಾಗುತ್ತಿದ್ದಾರೆ.

ಕನ್ನಡ ಚಿತ್ರರಂಗದ ಫಿಲಂ ಚೇಂಬರ್ ನಿಂದ ಅನುಮತಿ ಪಡೆದುಕೊಂಡು ರಥಾವರ ಸಿನಿಮಾ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ಅವರು ಹೊಸದಾಗಿ ನಿರ್ದೇಶನ ಮಾಡುತ್ತಿರುವ ಚೌಕಿದಾರ್ ಎಂಬ ಚಿತ್ರದಲ್ಲಿ ಗಣೇಶ್ ರವರು ನಟಿಸುವುದು ಈಗ ಖಚಿತವಾಗಿದ್ದು, ಹೊಸ ಪ್ರಯೋಗಗಳಿಗೆ ಮುಂದಾಗಿರುವ ಗೋಲ್ಡನ್ ಸ್ಟಾರ್ ಗಣೇಶ್ ರವರು ಈ ಸಿನಿಮಾದಲ್ಲಿ 55 ವರ್ಷದ ವ್ಯಕ್ತಿಯ ಪಾತ್ರದಲ್ಲಿ ನಟನೆ ಮಾಡಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಈ ವಯಸ್ಸು ಕೇಳಿದ ತಕ್ಷಣ ಗಾಂಧಿನಗರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರು ರಾಜಕೀಯಕ್ಕೆ ಸಂಬಂಧಪಟ್ಟ ಸಿನಿಮಾ ಮಾಡುತ್ತಿರಬಹುದು ಎಂಬ ಮಾಹಿತಿ ಕೇಳಿಬಂದಿದ್ದು ಆದರೆ ಚಿತ್ರತಂಡವು ಎಲ್ಲಿಯೂ ಇದರ ಬಗ್ಗೆ ಗುಟ್ಟು ಬಿಟ್ಟುಕೊಡದೆ ಸಿನಿಮಾ ರಿಲೀಸ್ ಆದಾಗ ನಿಮಗೆ ತಿಳಿಯುತ್ತದೆ ಎಂದು ಹೇಳಿಕೆ ನೀಡಿದ್ದಾರೆ.

Facebook Comments

Post Author: RAVI