ಜಾತಿ ರಾಜಕೀಯವನ್ನು ಮತ್ತೊಮ್ಮೆ ಆರಂಭಿಸಿದ ರಾಜ್ಯ ಸರ್ಕಾರ- ಉಳಿದವರ ಗತಿ ಏನಾಗಬೇಕು??

ಜಾತಿ ರಾಜಕೀಯವನ್ನು ಮತ್ತೊಮ್ಮೆ ಆರಂಭಿಸಿದ ರಾಜ್ಯ ಸರ್ಕಾರ- ಉಳಿದವರ ಗತಿ ಏನಾಗಬೇಕು??

ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಜಾತಿ ಲೆಕ್ಕಚಾರ ಆರಂಭವಾಗಿದೆ. ಕುರುಬ ಸಮುದಾಯದ ಮತಗಳನ್ನು ಸಂಪೂರ್ಣವಾಗಿ ತನ್ನ ತೆಕ್ಕೆಗೆ ಹಾಕಿಕೊಳ್ಳಲು ಸಿದ್ದರಾಮಯ್ಯರವರು ಹೊಸ ಯೋಜನೆಯನ್ನು ಸಿದ್ಧಗೊಳಿಸಿದ್ದಾರೆ, ಅದುವೇ ಮೀಸಲಾತಿ. ಹೌದು ಈಗಾಗಲೇ ಕುರುಬ ಜನಾಂಗಕ್ಕೆ 2 ಎ ಹಿಂದುಳಿದ ವರ್ಗಗಳ ಅಡಿಯಲ್ಲಿ ಶೇಕಡ 15 ರಷ್ಟು ಮೀಸಲಾತಿ ಲಭ್ಯವಾಗುತ್ತಿದೆ. ಇದೀಗ ಇಷ್ಟು ಸಾಲದು ಎಂಬಂತೆ ಸಮಾಜ ಕಲ್ಯಾಣ ಇಲಾಖೆಯು ಕುರುಬ ಜನಾಂಗವನ್ನು ಎಸ್ ಟಿ ಸಮುದಾಯಕ್ಕೆ ಸೇರಿಸಲು ಬುಡಕಟ್ಟು ಸಂಶೋಧನಾ ಸಂಸ್ಥೆಗೆ ಸೂಚಿಸಿದ್ದು, ಅದಕ್ಕಾಗಿ ಬರೋಬ್ಬರಿ 40 ಲಕ್ಷ ರೂ ಮಂಜೂರು ಮಾಡಲಾಗಿದೆ.

ಕುರುಬ ಸಮಾಜದ ಸಂಸ್ಕೃತಿ, ಆಚಾರ ವಿಚಾರ, ಸಾಮಾಜಿಕ, ಭಾಷೆ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿ ಹಾಗೂ ಭೌಗೋಳಿಕ ಅಂಶಗಳ ಕುರಿತಂತೆ ಸಂಪೂರ್ಣವಾಗಿ ಅಧ್ಯಯನ ನಡೆಸಿ ರಾಜ್ಯದ ಪ್ರತಿಯೊಂದು ಜಿಲ್ಲೆಗೂ ಪ್ರತ್ಯೇಕ ವರದಿಯನ್ನು ರೂಪುಗೊಳಿಸಿ ವರದಿ ನೀಡಬೇಕೆಂದು ಸಮಾಜ ಕಲ್ಯಾಣ ಇಲಾಖೆಯು ಬುಡಕಟ್ಟು ಇಲಾಖೆಗೆ ಸೂಚಿಸಿದೆ. ಕುರುಬ ಸಮುದಾಯವನ್ನು ಎಸ್ ಟಿ ಗೆ ಸೇರಿಸುವ ಈ ಪ್ರಸ್ತಾವನೆಯನ್ನು ಈ ಹಿಂದೆಯೇ ಕುರುಬ ಸಮುದಾಯದ ನಾಯಕ ಸಿದ್ದರಾಮಯ್ಯ ರವರು ಆಲೋಚನೆ ನಡೆಸಿದ್ದರು. ರಾಜ್ಯದಲ್ಲಿ ಅತಿ ದೊಡ್ಡ ಸಂಖ್ಯೆಯಲ್ಲಿ ಕುರುಬ ಸಮುದಾಯದ ಜನಾಂಗದವರಿದ್ದು, ಈ ರೀತಿಯ ಮೀಸಲಾತಿಗಳನ್ನು ನೀಡುವ ಮೂಲಕ ಅವರ ಬೆಂಬಲದ ಲಾಭವನ್ನು ಪಡೆಯಲು ಸಾಧ್ಯವಾಗುವುದು ಎಂಬುದು ರಾಜಕೀಯ ಲೆಕ್ಕಾಚಾರ ವಾಗಿದೆ ಎಂಬುದು ಎಲ್ಲರ ಅಭಿಪ್ರಾಯ ವಾಗಿದೆ.