ಮತ್ತೊಮ್ಮೆ ಜನರ ಮನ ಗೆದ್ದ ಅಕ್ಷಯ್ ಕುಮಾರ್- ಟೀಕೆ ಮಾಡಿದವರು ಈಗ ಎಲ್ಲಿದ್ದೀರಾ??

ಅಕ್ಷಯ್ ಕುಮಾರ್ ಎಂದ ತಕ್ಷಣ ಹಲವಾರು ಜನರಿಗೆ ಅವರ ಸಿನಿಮಾಗಳು ನೆನಪಾಗುತ್ತವೆ. ಆದರೆ ಮತ್ತಷ್ಟು ಜನರಿಗೆ ಅಕ್ಷಯ್ ಕುಮಾರ್ ರವರಿಗೆ ಇರುವ ದೇಶ ಭಕ್ತಿ ಹಾಗೂ ಕಾಳಜಿ ನೆನಪಾಗುತ್ತದೆ. ಸದಾ ಯಾವುದೇ ಅಂಜಿಕೆ ಇಲ್ಲದೆ, ಯಾವುದೇ ವಿವಾದಗಳಿಗೂ ತಲೆ ಕೆಡಿಸಿಕೊಳ್ಳದೆ ನೇರ ಮಾತುಗಳಿಂದ ಸೈನಿಕರ ಬೆಂಬಲಕ್ಕೆ ನಿಂತು ಅವರ ಪರ ಧ್ವನಿ ಎತ್ತುವ ಅಕ್ಷಯ್ ಕುಮಾರ್ ಅವರು ಈಗಾಗಲೇ ದೇಶದಲ್ಲೆಡೆ ತಮ್ಮ ಸಮಾಜಮುಖಿ ಕಾರ್ಯಗಳಿಂದ ಮನೆ ಮಾತಾಗಿದ್ದಾರೆ. ದೇಶದ ಅಭಿವೃದ್ಧಿಯ ಬಗ್ಗೆ ಸದಾ ಚಿಂತನೆ ನಡೆಸುವ ಅಕ್ಷಯ್ ಕುಮಾರ್ ರವರು ಹಲವಾರು ಬಾರಿ ವೀರ ಮರಣ ಹೊಂದಿದ ಸೈನಿಕರ ಕುಟುಂಬಕ್ಕೆ ನೆರವಾದ ನಿದರ್ಶನಗಳು ಕಾಣಸಿಗುತ್ತವೆ.

ಇನ್ನು ನರೇಂದ್ರ ಮೋದಿ ರವರ ಬೆಂಬಲಿಗರಾಗಿರುವ ಅಕ್ಷಯ್ ಕುಮಾರ್ ರವರಿಗೆ ದಿನೇ ದಿನೇ ಹಲವಾರು ಟೀಕೆಗಳು ಎದುರಾಗುತ್ತಿದ್ದವು. ಅದೇ ರೀತಿ ಕಳೆದ ಬಾರಿಯ ಮೋದಿ ರವರ ಸಂದರ್ಶನದ ಸಮಯದಲ್ಲಿಯೂ ಸಹ ಹಲವಾರು ಟೀಕೆಗಳು ಎದುರಾಗಿದ್ದವು. ತದನಂತರ ಕೆನಡಾ ಪಾಸ್ ಪೋರ್ಟ್ ಹೊಂದಿದ್ದ ಕಾರಣ ಅಕ್ಷಯ್ ಕುಮಾರ್ ರವರು ಭಾರತದ ಸಂವಿಧಾನದ ಪ್ರಕಾರ ಭಾರತದಲ್ಲಿ ಮತಚಲಾಯಿಸುವ ಹಕ್ಕನ್ನು ಹೊಂದಿರಲಿಲ್ಲ, ಇದೇ ಕಾರಣವನ್ನು ಮುಂದಿಟ್ಟುಕೊಂಡು ಅಕ್ಷಯ್ ಕುಮಾರ್ ಅವರನ್ನು ಹಲವಾರು ವಿರೋಧಿಗಳು ಮನಬಂದಂತೆ ಟೀಕೆ ಮಾಡಿದ್ದರು. ಅಕ್ಷಯ್ ಕುಮಾರ್ ರವರ ರಾಷ್ಟ್ರೀಯತೆಯನ್ನು ಪ್ರಶ್ನಿಸಿ ಮನಬಂದಂತೆ ವಾಗ್ದಾಳಿ ನಡೆಸಿದ ಟೀಕಾಕಾರರು ಈಗ ಎಲ್ಲಿದ್ದಾರೆ ಎಂಬ ಹುಡುಕುವ ಪರಿಸ್ಥಿತಿ ಎದುರಾಗಿದೆ.

ಯಾಕೆಂದರೆ ಇದೀಗ ಒಡಿಸ್ಸಾ ರಾಜ್ಯವು ಸಂಪೂರ್ಣವಾಗಿ ಪೋನಿ ಚಂಡಮಾರುತದಿಂದ ತತ್ತರಿಸಿದ ಸಮಯದಲ್ಲಿ ಎಲ್ಲರಿಗೂ ಮುನ್ನ ಅಕ್ಷಯ್ ಕುಮಾರ್ ರವರು ಒಡಿಸ್ಸಾ ರಾಜ್ಯದ ಪರವಾಗಿ ನಿಂತಿದ್ದಾರೆ. ತಮ್ಮ ಸ್ವಂತ ಹಣದಿಂದ ಮುಖ್ಯಮಂತ್ರಿಗಳ ನಿಧಿಗೆ ಬರೋಬ್ಬರಿ 1 ಕೋಟಿ ಹಣ ರವಾನಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಕ್ಷಯ್ ಕುಮಾರ್ ರವರ ರಾಷ್ಟ್ರೀಯತೆಯನ್ನು ಪ್ರಶ್ನಿಸಿದ್ದ ವಿರೋಧಿಗಳ ನಡುವೆ ಅಕ್ಷಯ್ ಕುಮಾರ್ ರವರು ಮತ್ತೊಮ್ಮೆ ದೇಶದ ಯಾವುದೇ ಮೂಲೆಯಲ್ಲಿ ಸಂಕಷ್ಟ ಎದುರಾದರೂ ಮೊದಲಿಗೆ ನಿಲ್ಲುತ್ತೇನೆ ಎಂಬುದನ್ನು ನಿರೂಪಿಸಿದ್ದಾರೆ.

ಅಕ್ಷಯ್ ಕುಮಾರ್ ರವರು ಕೆನಡಾ ಪಾಸ್ಪೋರ್ಟ್ ಹೊಂದಿದ್ದರೂ ಸಹ ಸಂಪೂರ್ಣವಾಗಿ ತೆರಿಗೆಯನ್ನು ಭಾರತ ಸರ್ಕಾರಕ್ಕೆ ಪಾವತಿ ಮಾಡುತ್ತಾರೆ. ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ಅಕ್ಷಯ್ ಕುಮಾರ್ ಅವರು ಹಲವಾರು ಹಿಟ್ ಚಿತ್ರಗಳ ಬಂದ ಹಣವನ್ನು ಈಗಾಗಲೇ ಸಮಾಜಮುಖಿ ಕಾರ್ಯಗಳಲ್ಲಿ ಸದುಪಯೋಗಪಡಿಸಿಕೊಂಡಿದ್ದಾರೆ. ಇದೀಗ ಮತ್ತೊಮ್ಮೆ ಅದೇ ಹಾದಿಯಲ್ಲಿ ನಡೆಯುತ್ತಿರುವ ಅಕ್ಷಯ್ ಕುಮಾರ್ ರವರಿಗೆ ನಮ್ಮದೊಂದು ಸಲಾಂ. ಭಾರತದಲ್ಲಿ ಮತ ಚಲಾಯಿಸುವ ಹಕ್ಕು ಇಲ್ಲದಿದ್ದರೂ ನಾನೊಬ್ಬ ಭಾರತೀಯ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಅಕ್ಷಯ್ ಕುಮಾರ್ ಅವರ ಬೆಂಬಲಕ್ಕೆ ನಮ್ಮಂತಹ ಹಲವಾರು ಬೆಂಬಲಿಗರು ಇದ್ದಾರೆ ಎಂಬುದನ್ನು ವಿರೋಧಿಗಳು ನೆನಪಿಟ್ಟುಕೊಳ್ಳಬೇಕು.

Facebook Comments

Post Author: RAVI