ಕಾಂಗ್ರೆಸ್ಸಿಗರಿಂದಲೇ ಡಿಕೆಶಿಗೆ ಮತ್ತೊಮ್ಮೆ ಮುಖಭಂಗ- ದಿನೇಶ್ ಗುಂಡೂರಾವ್ ಹೊಸ ಬಾಂಬ್

ಕಾಂಗ್ರೆಸ್ಸಿಗರಿಂದಲೇ ಡಿಕೆಶಿಗೆ ಮತ್ತೊಮ್ಮೆ ಮುಖಭಂಗ- ದಿನೇಶ್ ಗುಂಡೂರಾವ್ ಹೊಸ ಬಾಂಬ್

ಕರ್ನಾಟಕದಲ್ಲಿ ದೋಸ್ತಿ ಪಕ್ಷಗಳು ಅಧಿಕಾರದ ಚುಕ್ಕಾಣಿ ಹಿಡಿದ ನಂತರ ಇಲ್ಲಿಯವರೆಗೂ ಹಲವಾರು ಬಾರಿ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕ ರಾಗಿರುವ ಡಿಕೆ ಶಿವಕುಮಾರ್ ಅವರು ಸರ್ಕಾರವನ್ನು ಉಳಿಸಿದ್ದಾರೆ. ಸರ್ಕಾರ ಬೀಳುವಂತಹ ಪರಿಸ್ಥಿತಿ ಯನ್ನು ಬಹಳ ಚಾಕಚಕ್ಯತೆಯಿಂದ ನಿರ್ವಹಿಸಿರುವ ಡಿಕೆ ಶಿವಕುಮಾರ್ ರವರು ಇಲ್ಲಿಯವರೆಗೂ ಸರ್ಕಾರ ಉಳಿದಿರುವುದಕ್ಕೆ ಕಾರಣ ಎಂದರೆ ತಪ್ಪಾಗಲಾರದು. ಇಷ್ಟೆಲ್ಲಾ ಕೆಲಸಗಳನ್ನು ಪಕ್ಷಕ್ಕಾಗಿ ಮಾಡುತ್ತಿರುವ ಡಿಕೆ ಶಿವಕುಮಾರ್ ಅವರನ್ನು ಮೊದಲಿನಿಂದಲೂ ಪಕ್ಷದಲ್ಲಿ ಕಡೆಗಣಿಸಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಮಾತುಗಳಿಗೆ ಪೂರಕ ಎಂಬಂತೆ ಇಂದು ದಿನೇಶ್ ಗುಂಡೂರಾವ್ ರವರು ಸಹ ಶಾಕಿಂಗ್ ಹೇಳಿಕೆ ಹೊರ ಹಾಕಿದ್ದಾರೆ.

ಲೋಕಸಭಾ ಚುನಾವಣೆಯ ಕಾವು ಮುಗಿಯುತ್ತಿದ್ದಂತೆ, ರಾಜ್ಯದ ಹಿಂದಿನ ಸರ್ಕಾರದ ಭವಿಷ್ಯದ ಉಪಚುನಾವಣೆ ಎಂದೇ ಬಿಂಬಿತವಾಗುತ್ತಿರುವ ವಿಧಾನಸಭಾ ಉಪಚುನಾವಣೆಯಲ್ಲಿ ಕುಂದಗೋಳ ಕ್ಷೇತ್ರದ ಉಸ್ತುವಾರಿಯನ್ನು ಡಿಕೆ ಶಿವಕುಮಾರ್ ಅವರಿಗೆ ನೀಡಲಾಗಿದೆ, ಕಾಂಗ್ರೆಸ್ ಪಕ್ಷದ ಉಸ್ತುವಾರಿಯಾಗಿ ಡಿಕೆ ಶಿವಕುಮಾರ್ ಅವರನ್ನು ಆಯ್ಕೆ ಮಾಡಿ ಸಂಪೂರ್ಣ ಜವಾಬ್ದಾರಿಯನ್ನು ನೀಡಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವಂತೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಆದೇಶ ನೀಡಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಇದಕ್ಕೆ ಪೂರಕ ಎಂಬಂತೆ ಉತ್ತರ ಕರ್ನಾಟಕದ ಹಿರಿಯ ಕಾಂಗ್ರೆಸ್ ನಾಯಕರು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನಿರ್ಧಾರದ ವಿರುದ್ಧ ಅಸಮಾಧಾನಗೊಂಡಿದ್ದಾರೆ, ಉತ್ತರ ಕರ್ನಾಟಕದಲ್ಲಿ ಹಲವಾರು ಹಿರಿಯ ನಾಯಕರು ಇದ್ದಾರೆ ಆದರೆ ಅವರೆಲ್ಲರನ್ನೂ ಬಿಟ್ಟು ಡಿಕೆ ಶಿವಕುಮಾರ್ ಅವರಿಗೆ ಉಸ್ತುವಾರಿ ನೀಡಲಾಗಿದೆ ಎಂಬ ಆರೋಪಗಳು ಹಾಗೂ ಸುದ್ದಿಗಳು ಕೇಳಿ ಬರುತ್ತಿದ್ದವು.

ಇಷ್ಟು ಸಾಲದು ಎಂಬಂತೆ ಡಿಕೆ ಶಿವಕುಮಾರ್ ಅವರು ಸಹ ಮಾಧ್ಯಮಗಳೊಂದಿಗೆ ಮಾತನಾಡಿ ದಿವಂಗತ ಮಾಜಿ ಸಚಿವ ಶಿವಳ್ಳಿ ರವರು ನನ್ನ ಸ್ನೇಹಿತ, ಆತ ಇಂದು ನಮ್ಮ ಜೊತೆ ಇಲ್ಲ ಆದರೆ ಆತನ ಧರ್ಮ ಪತ್ನಿ ಕುಸುಮ ರವರನ್ನು ಗೆಲ್ಲಿಸಿಕೊಂಡು ಬರುವ ಮೂಲಕ ಅವರ ಕುಟುಂಬದ ಬೆಂಬಲಕ್ಕೆ ನಾನಿದ್ದೇನೆ ಎಂಬ ಸಂದೇಶವನ್ನು ಸಾರುತ್ತಾನೆ ಹಾಗೂ ಕಾಂಗ್ರೆಸ್ ಪಕ್ಷವನ್ನು ಮತ್ತೊಮ್ಮೆ ಗೆಲುವಿನ ನಗೆ ಬೀರುವಂತೆ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದರು. ಆದರೆ ಈ ಎಲ್ಲಾ ಹೇಳಿಕೆಗಳಿಗೆ ವಿರುದ್ಧವಾಗಿ ದಿನೇಶ್ ಗುಂಡೂರಾವ್ ಅವರು ಹೊಸ ಬಾಂಬ್ ಸಿಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ದಿನೇಶ್ ಗುಂಡೂರಾವ್ ರವರ ಡಿಕೆ ಶಿವಕುಮಾರ್ ಅವರಿಗೆ ಯಾವುದೇ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ನೀಡಲಾಗಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಇದರಿಂದ ಸಾಮಾನ್ಯವಾಗಿ ಡಿಕೆ ಶಿವಕುಮಾರ್ ಅವರ ಕಣ್ಣು ಕೆಂಪಗಾಗಿದ್ದಾವೆ. ಯಾಕೆಂದರೆ ಪಕ್ಷವನ್ನು ಗೆಲ್ಲಿಸಿ ಕೊಂಡು ಬರುತ್ತೇನೆ ಎಂದು ಉತ್ಸಾಹದಿಂದ ಹೊರಟಿದ್ದ ಡಿಕೆ ಶಿವಕುಮಾರ್ ಅವರನ್ನು ತಡೆದು ನಿಮಗೆ ಯಾವುದೇ ಜವಾಬ್ದಾರಿ ನೀಡಲಾಗಿಲ್ಲ ಎಂದು ದಿನೇಶ್ ಗುಂಡೂರಾವ್ ಅವರು ಸ್ಪಷ್ಟಪಡಿಸಿದ್ದಾರೆ. ಇನ್ನು ಇದಕ್ಕೆ ಪ್ರತಿಕ್ರಿಯಿಸಿರುವ ಡಿಕೆ ಶಿವಕುಮಾರ್ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಉಸ್ತುವಾರಿ ನೀಡಿದ್ದೇವೆ ಎಂದು ನೀವೇ ಹೇಳಿಕೆ ನೀಡಿದ್ದೀರಿ ಆದರೆ ಇದೀಗ ಯಾಕೆ ಈ ರೀತಿ ಮಾಡುತ್ತಿದ್ದೀರಿ?? ಪಕ್ಷಕ್ಕಾಗಿ ನಿಷ್ಠಾವಂತರಾಗಿ ದುಡಿಯುತ್ತಿರುವ ಡಿಕೆ ಶಿವಕುಮಾರ್ ಅವರಿಗೆ ಕಾಂಗ್ರೆಸ್ ಪಕ್ಷವು ಮೊದಲಿನಿಂದಲೂ ಅಗೌರವ ತೋರಿದೆ, ಈಗಲೂ ಸಹ ಅದೇ ರೀತಿ ಆಗಿದೆ. ಇದರ ಪರಿಣಾಮವನ್ನು ನೇರವಾಗಿ ಎದುರಿಸಬೇಕಾದ ಪರಿಸ್ಥಿತಿ ಎದುರಾಗುತ್ತದೆ ಎಂದು ಕಾಮೆಂಟ್ ಗಳ ಮೇಲೆ ಕಮೆಂಟ್ಗಳನ್ನು ಮಾಡುತ್ತಿದ್ದಾರೆ.