ಕುಮಾರಸ್ವಾಮಿ ರವರಿಗೆ ದೊಡ್ಡ ಶಾಕ್, ಸಿಎಂ ಗೆ ಕೈಕೊಟ್ಟು ಬಿಜೆಪಿ ಸೇರಿದ ಆಪ್ತ

ಕುಮಾರಸ್ವಾಮಿ ರವರಿಗೆ ದೊಡ್ಡ ಶಾಕ್, ಸಿಎಂ ಗೆ ಕೈಕೊಟ್ಟು ಬಿಜೆಪಿ ಸೇರಿದ ಆಪ್ತ

ಮುಂದಿನ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಎಲ್ಲರೂ ಊಹಿಸಿದಂತೆ ಪಕ್ಷಾಂತರಗಳು ಹೆಚ್ಚಾಗಿವೆ. ಅದರಲ್ಲಿಯೂ ಎಲ್ಲಾ ಸಮೀಕ್ಷೆಗಳಲ್ಲಿಯೂ ಬಾರಿ ಜಯದೊಂದಿಗೆ ಮುನ್ನುಗ್ಗುತ್ತಿರುವ ಬಿಜೆಪಿ ಪಕ್ಷಕ್ಕೆ ಸೇರುವವರ ಸಂಖ್ಯೆ ಹೆಚ್ಚಾಗಿದೆ. ಇತ್ತೀಚೆಗಷ್ಟೇ  ಜೆಡಿಎಸ್ ಪಕ್ಷದ ಪ್ರಮುಖ ಭದ್ರಕೋಟೆ ಎನಿಸಿಕೊಂಡಿದ್ದ ಹಾಸನ ಜಿಲ್ಲೆಯಲ್ಲಿ ಹಲವಾರು ಕಾಂಗ್ರೆಸ್ ಮುಖಂಡರು ಬಿಜೆಪಿ ಪಕ್ಷಕ್ಕೆ ಸೇರಿಕೊಂಡಿದ್ದರು. ಖುದ್ದು ಯಡಿಯೂರಪ್ಪನವರು ಹಲವಾರು ಕಾಂಗ್ರೆಸ್ ಮುಖಂಡರನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿಕೊಂಡರು.

ಇನ್ನು ಈಗಾಗಲೇ ಅರ್ಧಕ್ಕೂ ಹೆಚ್ಚು ಹಾಸನ ಕೇಸರಿ ಮಯವಾಗಿದೆ, ದೋಸ್ತಿ ಗಳಲ್ಲಿ ಉಂಟಾಗಿರುವ ಭಿನ್ನಮತ ಇದೀಗ ಬಿಜೆಪಿ ಪಕ್ಷಕ್ಕೆ ವರದಾನವಾಗುತ್ತಿದೆ. ಕುಮಾರಸ್ವಾಮಿ ರವರ ಸಹೋದರ ರೇವಣ್ಣ ರವರ ನಡವಳಿಕೆಯಿಂದ ಹಲವಾರು ಜೆಡಿಎಸ್ ಕಾರ್ಯಕರ್ತರು ಸಹ ಈಗಾಗಲೇ ಬಿಜೆಪಿ ಪಕ್ಷ ಸೇರಿ ಚುನಾವಣಾ ಸಮಯದಲ್ಲಿ ಪಕ್ಷಕ್ಕೆ ಭಾರೀ ಹಿನ್ನಡೆ ಉಂಟು ಮಾಡಿದ್ದಾರೆ. ಇನ್ನು ಈ ಬಾರಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಎ ಮಂಜುರವರು ಕಣಕ್ಕಿಳಿದಿರುವ ಕಾರಣ ಹಾಸನ ಜಿಲ್ಲೆಯು ಹೈ ವೋಲ್ಟೇಜ್ ಕ್ಷೇತ್ರಗಳಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈಗಾಗಲೇ  ಮಂಡ್ಯ ಹಾಗೂ ಹಾಸನ ಕ್ಷೇತ್ರದಲ್ಲಿ ಈ ರೀತಿಯ ಹಲವಾರು ಸವಾಲುಗಳನ್ನು ಎದುರಿಸುತ್ತಿರುವ ಜೆಡಿಎಸ್ ಪಕ್ಷಕ್ಕೆ ಚಿತ್ರದುರ್ಗದಲ್ಲಿ ದೊಡ್ಡ ಶಾಕ್ ಎದುರಾಗಿದೆ.

ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಕುಮಾರಸ್ವಾಮಿ ರವರಿಗೆ ಮತ್ತೊಂದು ಶಾಕ್ ಎದುರಾಗಿದ್ದು, ಶಿರಾ ತಾಲೂಕಿನ ಪ್ರಭಾವಿ ಜೆಡಿಎಸ್ ಮುಖಂಡರಾದ ಚಿದಾನಂದ ಗೌಡ ರವರು ಜೆಡಿಎಸ್ ಪಕ್ಷವನ್ನು ತ್ಯಜಿಸಿದ್ದಾರೆ. ಮೊದಲಿನಿಂದಲೂ ಕುಮಾರಸ್ವಾಮಿರವರ ಆಪ್ತ ಬಳಗದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದ ಚಿದಾನಂದ ಗೌಡ ರವರು ಬಿಜೆಪಿ ಪಕ್ಷ ಸೇರಿ ಎಲ್ಲರಿಗೂ ಆಶ್ಚರ್ಯ ಉಂಟು ಮಾಡಿದ್ದಾರೆ. ಮಾಜಿ ಸಚಿವ ವಿ ಸೋಮಣ್ಣ ಹಾಗೂ ತುಮಕೂರು ಬಿಜೆಪಿ ಶಾಸಕ ಜ್ಯೋತಿ ಗಣೇಶ್ ರವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಪಕ್ಷ ಸೇರಿಕೊಂಡಿರುವ ಚಿದಾನಂದ ಗೌಡ ರವರು ಇದೀಗ ಜೆಡಿಎಸ್ ಪಕ್ಷದ ವಿರುದ್ಧ ತೊಡೆ ತಟ್ಟಿದ್ದಾರೆ.

ಮೊದಲಿನಿಂದಲೂ ಕುಮಾರಸ್ವಾಮಿ ರವರ ಕುಟುಂಬ ರಾಜಕಾರಣದ ವಿರುದ್ಧ ಅಸಮಾಧಾನವನ್ನು ಹೊಂದಿದ್ದ ಚಿದಾನಂದ ಗೌಡ ರವರು, ತಮ್ಮದೇ ಆದ ಪ್ರಭಾವವನ್ನು ಶಿರಾ ತಾಲೂಕಿನಲ್ಲಿ ಹೊಂದಿದ್ದಾರೆ. ಮೊದಲಿಂದಲೂ ಜೆಡಿಎಸ್ ಪಕ್ಷಕ್ಕಾಗಿ ಕಷ್ಟಪಟ್ಟು ದುಡಿದ ಇವರು ಇಂದು ಜೆಡಿಎಸ್ ಪಕ್ಷ ಬಿಟ್ಟು ಬಿಜೆಪಿ ಸೇರಿರುವ ಕಾರಣ ಇವರ ಜೊತೆಗೆ ಹಲವಾರು ಕಾರ್ಯಕರ್ತರು ಸಹ ಬಿಜೆಪಿ ಪಕ್ಷ ಸೇರಿಕೊಂಡಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ. ಈ ಮೂಲಕ ಪಕ್ಷಾಂತರಿಗಳ ಸಾಲಿಗೆ ಚಿದಾನಂದ ಗೌಡ ರವರು ಹೊಸದಾಗಿ ಸೇರಿಕೊಂಡಿದ್ದಾರೆ.