ಹಾಸನದಲ್ಲಿ ಬಿಜೆಪಿ ಭರ್ಜರಿ ಬೇಟೆ: ದೇವೇಗೌಡರ ಭದ್ರಕೋಟೆ ಛಿದ್ರ ಛಿದ್ರ

ಹಾಸನದಲ್ಲಿ ಬಿಜೆಪಿ ಭರ್ಜರಿ ಬೇಟೆ: ದೇವೇಗೌಡರ ಭದ್ರಕೋಟೆ ಛಿದ್ರ ಛಿದ್ರ

ಮುಂದಿನ ಲೋಕಸಭಾ ಚುನಾವಣೆಯ ದಿನಾಂಕ ಪ್ರಕಟನೆ ಗೊಳ್ಳುತ್ತಿದ್ದಂತೆ ಎಲ್ಲಾ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದೆ.ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿರುವ ಕಾರಣ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಸೀಟು ಹಂಚಿಕೆಯಲ್ಲಿ ನಿರತವಾಗಿವೆ. ಈಗಾಗಲೇ ಜೆಡಿಎಸ್ ನ ಹಲವಾರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಫಿಕ್ಸ್ ಎನ್ನಲಾಗುತ್ತಿದೆ. ಅದರಲ್ಲೂ ಮಂಡ್ಯ ದಲ್ಲಿ ನಿಖಿಲ್ ಕುಮಾರಸ್ವಾಮಿ ಹಾಗೂ ಹಾಸನದಲ್ಲಿ ರೇವಣ್ಣ ರವರ ಮಗ ಪ್ರಜ್ವಲ್ ರೇವಣ್ಣ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಆದರೆ ಪಕ್ಷದ ಹಿರಿಯ ನಾಯಕರು ಮೈತ್ರಿ ಮಾಡಿಕೊಂಡರೆ ಸಾಲದು ಬದಲಾಗಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ತನ್ನ ಪಕ್ಷದ ಏಳಿಗೆಗಾಗಿ ಹಲವಾರು ವರ್ಷಗಳ ಕಾಲ ದುಡಿದು ಬಂದಿರುವ ಕಾರ್ಯಕರ್ತರು ಹಾಗೂ ನಾಯಕರು ಮೈತ್ರಿ ಮಾಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.

ಆದರೆ ಈ ಇಬ್ಬರು ಅಭ್ಯರ್ಥಿಗಳಿಗೆ ತಮ್ಮದೇ ಜಿಲ್ಲೆಗಳಲ್ಲಿಯೂ ಸಹ ಹಲವಾರು ವಿರೋಧಗಳು ಕೇಳಿ ಬಂದಿವೆ. ಒಂದೆಡೆ ನಿಖಿಲ್ ಕುಮಾರಸ್ವಾಮಿ ರವರಿಗೆ ಸುಮಲತಾ ರವರು ಅಡ್ಡಗಾಲು ಹಾಕಿದ್ದಾರೆ, ಇಷ್ಟು ಸಾಲದು ಎಂಬಂತೆ ಹಲವಾರು ಕಾಂಗ್ರೆಸ್ ನಾಯಕರು ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ನಿಖಿಲ್ ಕುಮಾರಸ್ವಾಮಿ ಅವರು ಸರಿಯಾದ ಅಭ್ಯರ್ಥಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಹಾಸನದ ರಾಜಕೀಯದ ಬಗ್ಗೆ ಗಮನಹರಿಸಿದರೆ ಬದ್ಧ ವೈರಿಗಳಂತೆ ಕಾದಾಡುತ್ತಿದ್ದ ರೇವಣ್ಣ ಹಾಗೂ ಎ ಮಂಜುರವರು ಕಾಳಗ ತಾರಕಕ್ಕೇರಿದೆ.

ಕುಮಾರಸ್ವಾಮಿ ರವರ ಸಹೋದರ ರೇವಣ್ಣ ನನ್ನ ರಾಜಕೀಯ ಶತ್ರು ವಾಗಿದ್ದು, ಯಾವುದೇ ಕಾರಣಕ್ಕೂ ನಾನು ಹಾಸನ ಕ್ಷೇತ್ರವನ್ನು ರೇವಣ್ಣ ರವರ ಪುತ್ರ ಪ್ರಜ್ವಲ್ ರೇವಣ್ಣ ರವರಿಗೆ ಬಿಟ್ಟುಕೊಡಲು ಸಿದ್ದವಿಲ್ಲ ಎಂದು ಬಹಿರಂಗವಾಗಿಯೇ ಈ ಹಿಂದೆ ಹಲವಾರು ಬಾರಿ ಹೇಳಿಕೆ ನೀಡಿದ್ದರು. ಇದೀಗ ಹಾಸನ ಜಿಲ್ಲೆಯಲ್ಲಿ ಪ್ರಜ್ವಲ್ ರೇವಣ್ಣ ಅವರು ಸ್ಪರ್ಧಿಸುವುದು ಬಹುತೇಕ ಖಚಿತವಾಗಿರುವ ಕಾರಣ ಎ ಮಂಜುರವರು ಮೈತ್ರಿ ಸರ್ಕಾರಕ್ಕೆ ಬಹು ದೊಡ್ಡ ಶಾಕ್ ನೀಡಿದ್ದಾರೆ.ಹೌದು ಎ ಮಂಜುರವರು ನನಗೆ ಈ ಸಮ್ಮಿಶ್ರ ಸರ್ಕಾರದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಸ್ಪರ್ಧಿಸಿದರೆ ಮಾತ್ರ ನನ್ನ ಬೆಂಬಲ ಇರುತ್ತದೆ ಎಂದು ಹೇಳಿದ್ದಾರೆ.

ಒಂದು ವೇಳೆ ಪ್ರಜ್ವಲ್ ರೇವಣ್ಣ ಅವರು ಸ್ಪರ್ಧಿಸಿದ್ರೆ ಈಗಾಗಲೇ ನಾನು ಬಿಜೆಪಿಯ ನಾಯಕರ ಜೊತೆ ಹಲವಾರು ಸುತ್ತಿನ ಮಾತುಕತೆ ನಡೆಸಿದ್ದೇನೆ , ಹಾಸನದಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಿದ್ಧವಿದ್ದೇನೆ, ರಾಜಕೀಯ ನಿಂತ ನೀರಲ್ಲ, ಬಳಿಕ ಯೋಚನೆ ಮಾಡಿ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳುತ್ತೇನೆ ಎಂದು ಬಹಿರಂಗವಾಗಿ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. ಈ ಮೂಲಕ ರೇವಣ್ಣ ರವರು ಸ್ಪರ್ಧಿಸಿದರೆ ಎ ಮಂಜುರವರು ಬಿಜೆಪಿ ಸೇರುವುದು ಖಚಿತವಾಗಿದೆ ಯಾಕೆಂದರೆ ಈಗಾಗಲೇ ಹಲವಾರು ಸುತ್ತಿನ ಮಾತುಕತೆಗಳ ಪ್ರಕಾರ ಎ ಮಂಜುರವರಿಗೆ ಬಿಜೆಪಿ ಪಕ್ಷದಿಂದ ಟಿಕೆಟ್ ಕೊಡಲು ಪಕ್ಷ ಸಿದ್ಧವಾಗಿದೆ. ಒಂದು ವೇಳೆ ಅದೇ ನಡೆದಲ್ಲಿ ಬಿಜೆಪಿ ಪಕ್ಷದ ಬಲ ಹಾಗೂ ಎ ಮಂಜು ಅವರ ವರ್ಚಸ್ಸು ಸೇರಿಕೊಂಡು ಪ್ರಜ್ವಲ್ ರೇವಣ್ಣ ಅವರಿಗೆ ಸೋಲಿನ ರುಚಿ ತೋರಿಸಲಿದೆ