ಅಸಲಿಗೆ ಹರ್ಷಲ್ ಪಟೇಲ್ ರವರು ಭುವನೇಶ್ವರ್ ಕುಮಾರ್ ರವರಿಗಿಂತ ಹೆಚ್ಚು ವಿಕೆಟ್ ಪಡೆದಿದ್ದರೂ ಕೂಡ ಸರಣಿ ಶ್ರೇಷ್ಠ ಭುವಿಗೆ ನೀಡಿದ್ದು ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೆ ಭಾರತೀಯ ಕ್ರಿಕೆಟ್ ತಂಡ ಸೌತ್ ಆಫ್ರಿಕಾ ವಿರುದ್ಧದ 5 ಟಿ ಟ್ವೆಂಟಿ ಪಂದ್ಯಗಳ ಸರಣಿಯನ್ನು ಸಮ ಬಲದೊಂದಿಗೆ ಮುಗಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಾಗಿದ್ದ ಕೊನೆಯ ಪಂದ್ಯ ಮಳೆಯಿಂದ ರದ್ದಾಗಿದೆ. ಈ ಕಾರಣದಿಂದಲೇ ಈ ಸರಣಿಯನ್ನು ಟೈ ಮೂಲಕ ಮುಗಿಸಲಾಗಿದೆ. ಮೊದಲ ಎರಡು ಪಂದ್ಯವನ್ನು ಸೌತ್ ಆಫ್ರಿಕಾ ತಂಡ ಗೆದ್ದರೆ ಕೊನೆಯ ಎರಡು ಪಂದ್ಯಗಳನ್ನು ಭಾರತೀಯ ಕ್ರಿಕೆಟ್ ತಂಡ ಗೆದ್ದಿದೆ. ಪ್ರಮುಖ ಅನುಭವಿ ಆಟಗಾರರ ಅನುಪಸ್ಥಿತಿಯಲ್ಲಿ ಕೂಡ ಭಾರತೀಯ ಕ್ರಿಕೆಟ್ ತಂಡ ಈ ಫಲಿತಾಂಶವನ್ನು ಸಾಧಿಸಿದೆ. ಇನ್ನು ನಾಲ್ಕು ಪಂದ್ಯಗಳಿಂದ 6 ವಿಕೆಟ್ ಗಳನ್ನು ಕಬಳಿಸಿರುವ ಭುವನೇಶ್ವರ್ ಕುಮಾರ್ ರವರಿಗೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ನೀಡಲಾಗಿದೆ.

ಆದರೆ ಈ ಕುರಿತಂತೆ ಹಲವಾರು ಜನರು ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ ಯಾಕೆಂದರೆ ಇವರಿಗೆ ಹೋಲಿಸಿದರೆ ಹರ್ಷಲ್ ಪಟೇಲ್ ರವರು ನಾಲ್ಕು ಪಂದ್ಯಗಳಲ್ಲಿ 7 ವಿಕೆಟ್ಗಳನ್ನು ಕಬಳಿಸಿದ್ದಾರೆ ಆದರೂ ಕೂಡ ಹರ್ಷಲ್ ಪಟೇಲ್ ರವರ ಬದಲಾಗಿ ಭುವನೇಶ್ವರ್ ಕುಮಾರ್ ರವರಿಗೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ನೀಡಲಾಗಿದೆ. ಕ್ರಿಕೆಟ್ ಅಭಿಮಾನಿಗಳು ಯಾಕೆ ಹೀಗೆ ಮಾಡಿದ್ದೀರಾ ಎಂಬುದಾಗಿ ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆಗಳ ಸುರಿಮಳೆಯನ್ನು ಹರಿಸುತ್ತಿದ್ದಾರೆ. ಈ ಸರಣಿಯಲ್ಲಿ ಹರ್ಷಲ್ ಪಟೇಲ್ ರವರು ನಾಲ್ಕು ಪಂದ್ಯಗಳಲ್ಲಿ 88 ರನ್ ನೀಡಿ 7 ವಿಕೆಟ್ ಗಳನ್ನು ಕಬಳಿಸಿದ್ದಾರೆ. ಅದರಲ್ಲಿಯೂ ಅವರ ಬೆಸ್ಟ್ ಬೌಲಿಂಗ್ ಫಿಗರ್ 25 ರನ್ನುಗಳಿಗೆ 4 ವಿಕೆಟ್ ಕಬಳಿಸಿರುವುದು ಆಗಿದೆ. ಇನ್ನು ಭುವನೇಶ್ವರ್ ಕುಮಾರ್ ರವರು ನಾಲ್ಕು ಪಂದ್ಯಗಳಲ್ಲಿ 85 ರನ್ನು ನೀಡಿ 6 ವಿಕೆಟ್ ಕಬಳಿಸಿದ್ದಾರೆ.

ಈ ಸರಣಿಯಲ್ಲಿ ಅವರ ಬೆಸ್ಟ್ ಬೌಲಿಂಗ್ ಫಿಗರ್ 13 ರನ್ನುಗಳಿಗೆ 4 ವಿಕೆಟ್ ಆಗಿದೆ. ವಿಕೆಟ್ ಪಡೆದುಕೊಂಡಿರುವ ವಿಚಾರದಲ್ಲಿ ಅಶೋಕ್ ಪಟೇಲ್ ಅವರು ಮುಂದಿರಬಹುದು ಆದರೆ ಎಕಾನಮಿ ದೃಷ್ಟಿಯಲ್ಲಿ ಭುವನೇಶ್ವರ್ ಕುಮಾರ್ ರವರು ಸಾಕಷ್ಟು ಬಂದಿದ್ದಾರೆ. ಹರ್ಷಲ್ ಪಟೇಲ್ ರವರು 7.24 ಎಕಾನಮಿ ರೇಟ್ ನಲ್ಲಿ ಬೌಲಿಂಗ್ ಮಾಡಿದ್ದರೆ ಈ ಕಡೆ ಭುವನೇಶ್ವರ್ ಕುಮಾರ್ ರವರು 6.07 ಎಕಾನಮಿ ರೇಟ್ ನಲ್ಲಿ ಬೌಲಿಂಗ್ ಮಾಡಿರುವ ಕಾರಣದಿಂದಾಗಿ ಅವರನ್ನು ಸರಣಿ ಶ್ರೇಷ್ಠ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಮೂಲಕ ನಿಮ್ಮ ಕುತೂಹಲ ಹಾಗೂ ಗೊಂದಲವನ್ನು ನಾವು ಪರಿ ಹರಿಸಿದ್ದೇವೆ ಎಂಬುದಾಗಿ ಭಾವಿಸುತ್ತೇವೆ.