ಎಲ್ಲಾ ತಂಡಗಳಿಂದ ಅತ್ಯುತ್ತಮ ಆಟಗಾರರನ್ನು ಹೆಸರಿಸಿ, ಹನ್ನೊಂದರ ತಂಡ ಕಟ್ಟಿದ ಇಫ್ರಾನ್- ಘಟಾನುಘಟಿ ಆಟಗಾರರನ್ನು ಕೈ ಬಿಟ್ಟು ಆಯ್ಕೆ ಮಾಡಿದ ತಂಡ ಹೇಗಿದೆ ಗೊತ್ತೆ?

ನವದೆಹಲಿ: ಸ್ನೇಹಿತರೆ ಕಳೆದ ಕೆಲವು ದಿನಗಳ ಹಿಂದಷ್ಟೇ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ಮುಕ್ತಾಯವಾಗಿದೆ. ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿದಂತಹ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಟ್ರೋಫಿಯನ್ನು ತಮ್ಮ ಮುಡಿಗೇರಿಸಿಕೊಂಡರೆ ಐಪಿಎಲ್ ಉದ್ದಕ್ಕೂ ಅದ್ಭುತ ಬ್ಯಾಟಿಂಗ್ ಹಾಗೂ ಬೌಲಿಂಗ್ ಪ್ರದರ್ಶನ ತೋರಿದಂತಹ ಆಟಗಾರರನ್ನು ಭಾರತ ತಂಡದ ಮಾಜಿ ಆಲ್ ರೌಂಡರ್ ಇರ್ಫಾನ್ ಪಠಾನ್ ಆಯ್ಕೆ ಮಾಡಿಕೊಂಡಿದ್ದಾರೆ.

ಹೌದು ಸ್ನೇಹಿತರೆ, ಕಳೆದ ಸೋಮವಾರ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಆರು ವಿಕೆಟ್ಗಳಿಂದ ಗುಜರಾತ್ ಟೈಟನ್ಸ್ ತಂಡವನ್ನು ಸೋಲಿಸಿ ಐದನೇ ಬಾರಿಗೆ ಚಾಂಪಿಯನ್ ಟ್ರೋಫಿಯನ್ನು ತಮ್ಮ ಮುಡಿಗೇರಿಸಿಕೊಂಡಿತ್ತು. ಈ ಸಂದರ್ಭದಲ್ಲಿ ಮಾತನಾಡಿದಂತಹ ಮಾಜಿ ಆಲ್ ರೌಂಡರ್ ಇರ್ಫಾನ್ ಪಟಾನ್ ಅವರು 12 ಆಟಗಾರರನ್ನು ಒಳಗೊಂಡ ತಮ್ಮ ನೆಚ್ಚಿನ ಐಪಿಎಲ್ ತಂಡ ಯಾವುದೆಂಬುದನ್ನು ಪ್ರಕಟಿಸಿದ್ದಾರೆ.

ಇರ್ಫಾನ್ ಈ ಬಾರಿಯ ಐಪಿಎಲ್ ನಲ್ಲಿ ಯಶಸ್ವಿ ಬ್ಯಾಟಿಂಗ್ ಪ್ರದೇಶನ ತೋರಿದಂತಹ ಯಂಗ್ ಬ್ಯಾಟರ್ ಯಶಸ್ವಿ ಜೈಸ್ವಾಲ್, ನಾಯಕ ಎಂಎಸ್ ಧೋನಿ, ಹಾರ್ದಿಕ್ ಪಾಂಡ್ಯ ಹಾಗೂ ರೋಹಿತ್ ಶರ್ಮದಂತಹ ಪ್ಲೇ ಆಫ್ ತಲುಪಿದ ದೊಡ್ಡ ತಂಡಗಳ ನಾಯಕರನ್ನು ಕೈಬಿಟ್ಟು ಇತರರನ್ನು ಆಯ್ಕೆ ಮಾಡಿಕೊಂಡಿರುವುದು ಅಚ್ಚರಿ ಮೂಡಿಸುವಂತಹ ಸಂಗತಿಯಾಗಿದೆ.

ಮೊದಲ ಹೆಸರು ಆರ್‌ಸಿಬಿ ತಂಡದ ನಾಯಕ ಫಾಪ್ ಡ್ಯೂಪ್ಲಿಸಿಸ್, ಟೂರ್ನಿಯಲ್ಲಿ ಬರೋಬ್ಬರಿ 8 ಅರ್ಧ ಶತಕಗಳೊಂದಿಗೆ 730 ರನ್ ಗಳಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಫಾಪ್ ಡ್ಯೂಪ್ಲೆಸಿಗೆ ತಮ್ಮ ಮೆಚ್ಚುಗೆಯನ್ನು ಇರ್ಫಾನ್ ಪಟಾನ್ ತೋರಿದ್ದಾರೆ. ಆನಂತರ ಐಪಿಎಲ್ 2023 ಆರೆಂಜ್ ಕ್ಯಾಪ್ ಹೋಲ್ಡರ್ ಶುಭ್ಮನ್ ಗಿಲ್ ಅವರನ್ನು ಶ್ಲಾಘಿಸಿದರು. ಹೀಗೆ ಎರಡು ಶತಕಗಳೊಂದಿಗೆ 639 ರನ್ಗಳನ್ನು ಬಾರಿಸಿರುವ ವಿರಾಟ್ ಕೊಹ್ಲಿ ಅವರನ್ನು ಮೂರನೇ ಬ್ಯಾಟ್ಸ್ಮನ್ ಆಗಿ ನೋಡಲು ಇರ್ಫಾನ್ ಇಷ್ಟಪಡುತ್ತಾರಂತೆ.

ಅದರಂತೆ 605 ರನ್ ಬಾರಿಸಿರುವ ಸೂರ್ಯ ಕುಮಾರ್ ಯಾದವ್ ಹಾಗೂ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ವಿಶೇಷ ದಾಖಲೆ ಮಾಡಿರುವ ಕೆಕೆಆರ್ ಭರ್ಜರಿ ಬ್ಯಾಟ್ಸ್ಮ್ಯಾನ್ ರಿಂಕು ಸಿಂಗ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ನ ಹೆನ್ರಿಕ್ ಕ್ಲಾಸೆನ್ ಅವರನ್ನು ಕ್ರಮವಾಗಿ ನಾಲ್ಕು, ಐದು ಮತ್ತು ಆರನೇ ಸ್ಥಾನದಲ್ಲಿ ಆಲ್ರೌಂಡರ್ಗಳಾಗಿ ಆಯ್ಕೆ ಮಾಡಿದ್ದಾರೆ.

ಇದರ ಜೊತೆ ಜೊತೆಗೆ ಈ ಬಾರಿಯ ಐಪಿಎಲ್ನಲ್ಲಿ 20 ವಿಕೆಟ್ಗಳನ್ನು ಕಬಳಿಸಿರುವ ರವೀಂದ್ರ ಜಡೇಜಾ ಮತ್ತು ರಶಿದ್ ಖಾನ್ ಅವರನ್ನು ಇರ್ಫಾನ್ ಆಯ್ಕೆ ಮಾಡಿಕೊಂಡಿದ್ದು, ಇವರ ಜೊತೆಗೆ ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ, ಮೊಹಮ್ಮದ್ ಸಿರಾಜ್, ಮತೀಶ್ ಪತಿರಾಣ ಅವರನ್ನು ತಮ್ಮ ನೆಚ್ಚಿನ ವೇಗದ ಬೌಲಿಂಗ್ ವಿಭಾಗಕ್ಕೆ ಆಯ್ಕೆ ಮಾಡಿಕೊಂಡರೆ, ಯಶಸ್ವಿ ಜೈಸ್ವಾಲ್ ಅವರನ್ನು ಕೈ ಬಿಡುವ ಮುಖಾಂತರ ಅಚ್ಚರಿ ಮೂಡಿಸಿದ್ದಾರೆ.

ಇನ್ನು ಒಟ್ಟಾರೆಯಾಗಿ ಇರ್ಫಾನ್ ಪಟಾನ್ ಕಟ್ಟಿದ 2023ರ ಐಪಿಎಲ್ ತಂಡ ಹೀಗಿದ್ದು, ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.
೧. ಫಾಫ್ ಡುಪ್ಲೆಸಿಸ್ (ನಾಯಕ ಹಾಗೂ ಓಪನರ್)
೨. ಶುಭ್ಮನ್ ಗಿಲ್ (ಓಪನರ್)
೩. ವಿರಾಟ್ ಕೊಹ್ಲಿ (ಬ್ಯಾಟ್ಸ್ ಮ್ಯಾನ್)
೪. ಸೂರ್ಯಕುಮಾರ್ ಯಾದವ್ (ಬ್ಯಾಟ್ಸ್ ಮ್ಯಾನ್)
೫. ಹೆನ್ರಿಕ್ ಕ್ಲಾಸಸ್ (ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ಮನ್)
೬. ರಿಂಕು ಸಿಂಗ್ (ಬ್ಯಾಟ್ಸ್ ಮ್ಯಾನ್)
೭. ರವೀಂದ್ರ ಜಡೇಜಾ (ಸ್ಪಿನ್ ಆಲ್ ರೌಂಡರ್)
೮. ರಶೀದ್ ಖಾನ್ (ಸ್ಪಿನ್ನರ್)
೯. ಮೊಹಮ್ಮದ್ ಶಮಿ (ವೇಗದ ಬೌಲರ್)
೧೦. ಮೊಹಮ್ಮದ್ ಸಿರಾಜ್ (ವೇಗದ ಬೌಲರ್)
೧೧. ಮತೀಶ್ ಪತಿರಾಣ (ವೇಗದ ಬೌಲರ್)