ಈ ಮೂವರು ಐಪಿಎಲ್ ಸ್ಟಾರ್ ಗಳನ್ನೂ ಟೀಮ್ ಇಂಡಿಯಾಗೆ ಆಯ್ಕೆ ಮಾಡಿದ ಎಂದ ಸೆಹ್ವಾಗ್, ಆ ಮೂವರು ಯುವ ವೇಗಿಗಳು ಯಾರ್ಯಾರು ಗೊತ್ತೇ??

ಈ ಮೂವರು ಐಪಿಎಲ್ ಸ್ಟಾರ್ ಗಳನ್ನೂ ಟೀಮ್ ಇಂಡಿಯಾಗೆ ಆಯ್ಕೆ ಮಾಡಿದ ಎಂದ ಸೆಹ್ವಾಗ್, ಆ ಮೂವರು ಯುವ ವೇಗಿಗಳು ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಈ ಬಾರಿಯ ಐಪಿಎಲ್ ನಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸಾಕಷ್ಟು ಹೊಸ ಹೊಸ ಪ್ರತಿಭೆಗಳು ದೊಡ್ಡಮಟ್ಟದಲ್ಲಿ ಮಿಂಚುತ್ತಿದ್ದಾರೆ ಎನ್ನುವುದು ಈಗಾಗಲೇ ನಿಮಗೆ ತಿಳಿದಿದೆ. ನಿಜಕ್ಕೂ ಕೂಡ ಇಂತಹ ಪ್ರತಿಭೆಗಳಲ್ಲಿ ಅಧಿಕವಾಗಿ ಕಾಣಿಸಿಕೊಂಡಿರುವುದು ನಮ್ಮ ಭಾರತೀಯ ಕ್ರಿಕೆಟ್ ಪ್ರತಿಭೆಗಳು ಎನ್ನುವುದು ಮತ್ತಷ್ಟು ಸಂತೋಷಪಡುವ ವಿಚಾರವಾಗಿದೆ. ಪ್ರತಿವರ್ಷ ಐಪಿಎಲ್ ಕಾರಣದಿಂದಾಗಿ ಭಾರತ ತಂಡಕ್ಕೆ ಹೊಸಹೊಸ ಯುವ ಉದಯೋನ್ಮುಖ ಕ್ರಿಕೆಟ್ ಆಟಗಾರರು ಸಿಗುತ್ತಿರುವುದು ನಿಜಕ್ಕೂ ಕೂಡ ಐಪಿಎಲ್ ಪ್ರತಿಭೆಗಳ ಅನ್ವೇಷಣಾ ತಾಣ ಎಂದರೆ ತಪ್ಪಾಗಲಾರದು.

ಇದೇ ಐಪಿಎಲ್ ನಲ್ಲಿ ಮಿಂಚುತ್ತಿರುವ ಯುವ ಆಟಗಾರರಿಗೆ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಯಲ್ಲಿ ಅವಕಾಶ ನೀಡಬೇಕು ಎಂಬುದಾಗಿ ಭಾರತದ ಮಾಜಿ ಓಪನಿಂಗ್ ಬ್ಯಾಟ್ಸ್ ಮನ್ ಆಗಿರುವ ವೀರೇಂದ್ರ ಸೆಹ್ವಾಗ್ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಹೌದು ಗೆಳೆಯರೇ ಈ ಬಾರಿ ಐಪಿಎಲ್ ನಲ್ಲಿ ಮೂರು ಬೌಲರ್ಗಳು ಸಾಕಷ್ಟು ತಮ್ಮ ಉತ್ತಮ ಪರ್ಫಾರ್ಮೆನ್ಸ್ ಮೂಲಕ ಎಲ್ಲರಲ್ಲು ಕೂಡ ಭರವಸೆ ಮೂಡಿಸಿದ್ದಾರೆ. ಎಲ್ಲರೂ ಅವರನ್ನು t20 ವರ್ಲ್ಡ್ ಕಪ್ ತಂಡಕ್ಕೆ ಆಯ್ಕೆ ಮಾಡಲು ಸಲಹೆ ನೀಡುತ್ತಿದ್ದಾರೆ. ಆದರೆ ವೀರೇಂದ್ರ ಸೆಹ್ವಾಗ್ ರವರು ಮಾತ್ರ ಅದಕ್ಕೂ ಮುನ್ನವೇ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಅವರನ್ನು ತಂಡದಲ್ಲಿ ಹಾಕಿಕೊಂಡರೆ ಅವರಿಗೆ ಇನ್ನಷ್ಟು ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕುರಿತಂತೆ ಅನುಭವ ಸಿಗುತ್ತದೆ ಎಂಬುದಾಗಿ ಹೇಳಿದ್ದಾರೆ.

ಇದಕ್ಕಾಗಿ ತಂಡದ ಅನುಭವಿ ಹಾಗೂ ಹಿರಿಯ ಆಟಗಾರರಿಗೆ ಅಂದರೆ ಹಿರಿಯ ಬೌಲರ್ಗಳಿಗೆ ವಿಶ್ರಾಂತಿ ನೀಡುವುದು ಅಗತ್ಯವಾಗಿದೆ ಯಾಕೆಂದರೆ ಮುಂದಿನ ದಿನಗಳಲ್ಲಿ ವಿಶ್ವಕಪ್ ಸೇರಿದಂತೆ ಇನ್ನು ಹಲವಾರು ಸರಣಿಗಳನ್ನು ಭಾರತೀಯ ಕ್ರಿಕೆಟ್ ತಂಡ ಈ ವರ್ಷ ಆಡಲಿದೆ ಎನ್ನುವುದಾಗಿ ವೀರೇಂದ್ರ ಸೆಹ್ವಾಗ್ ರವರು ಹೇಳಿದ್ದಾರೆ. ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆ ಮಾಡಬೇಕು ಎಂದು ವೀರೇಂದ್ರ ಸೇವಾಗ್ ರವರ ಹೇಳುತ್ತಿರುವ ಯುವ ಆಟಗಾರರು ಯಾರೆಂದರೆ ಸನ್ರೈಸರ್ಸ್ ಹೈದರಾಬಾದ್ ತಂಡದ ಉಮ್ರಾನ್ ಮಲ್ಲಿಕ್, ಪಂಜಾಬ್ ಕಿಂಗ್ಸ್ ತಂಡದ ಆರ್ಶ್ ದೀಪ್, ಹಾಗೂ ಮತ್ತೊಬ್ಬ ಭರವಸೆಯ ಬೌಲರ್ ಆಗಿರುವ ಆವೇಶ ಖಾನ್ ರವರನ್ನು ಈ ಬಾರಿಯ ದಕ್ಷಿಣ ಆಫ್ರಿಕಾ ಸರಣಿಯ ಸಂದರ್ಭದಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ಪ್ರಮುಖ ಬೌಲರ್ಗಳನ್ನು ಆಗಿ ಆಯ್ಕೆ ಮಾಡಬೇಕು ಎನ್ನುವುದಾಗಿ ಬ್ಯಾಟ್ ಬೀಸಿದ್ದಾರೆ. ವೀರೇಂದ್ರ ಸೆಹವಾಗ್ ರವರ ಅಭಿಪ್ರಾಯದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.