ಶ್ರೀಲಂಕಾ ವಿರುದ್ಧ ತಂಡದಲ್ಲಿ ಯಾರ್ಯಾರು ಆಡಬೇಕು ಎಂದು ತಿಳಿಸಿದ ಲಕ್ಷ್ಮಣ್, ಹೇಗಿದೆ ಗೊತ್ತಾ ಮಸ್ತ್ ತಂಡ??
ಶ್ರೀಲಂಕಾ ವಿರುದ್ಧ ತಂಡದಲ್ಲಿ ಯಾರ್ಯಾರು ಆಡಬೇಕು ಎಂದು ತಿಳಿಸಿದ ಲಕ್ಷ್ಮಣ್, ಹೇಗಿದೆ ಗೊತ್ತಾ ಮಸ್ತ್ ತಂಡ??
ನಮಸ್ಕಾರ ಸ್ನೇಹಿತರೇ ಅತ್ತ ಭಾರತದ ಒಂದು ತಂಡ ಇಂಗ್ಲೆಂಡ್ ನಲ್ಲಿ ಇಂಗ್ಲೆಂಡ್ ವಿರುದ್ದದ ಸರಣಿಯಲ್ಲಿ ಪಾಲ್ಗೊಳ್ಳಲು ತೆರಳಿದ್ದರೇ, ಇತ್ತ ಭಾರತದ ಇನ್ನೊಂದು ತಂಡ ಶ್ರೀಲಂಕಾ ವಿರುದ್ದದ ಸರಣಿಯಲ್ಲಿ ಪಾಲ್ಗೋಳ್ಳಲು ಶ್ರೀಲಂಕಾದಲ್ಲಿ ಕಠಿಣ ಅಭ್ಯಾಸ ಆರಂಭಿಸಿದೆ. ಇದೇ ಜುಲೈ 13 ರಿಂದ ಆರಂಭವಾಗುವ ಸರಣಿಯಲ್ಲಿ ಭಾರತ ಮೂರು ಏಕದಿನ ಹಾಗೂ ಮೂರು ಟಿ20 ಪಂದ್ಯವನ್ನ ಆಡಲಿದೆ. ಶಿಖರ್ ಧವನ್ ನಾಯಕರಾಗಿದ್ದು, ವೇಗಿ ಭುವನೇಶ್ವರ್ ಕುಮಾರ್ ಉಪನಾಯಕರಾಗಿದ್ದಾರೆ. ಕನ್ನಡಿಗ ರಾಹುಲ್ ದ್ರಾವಿಡ್ ಈ ತಂಡದ ಕೋಚ್ ಆಗಿದ್ದಾರೆ.
ಈಗ ಈ ಮಹತ್ವದ ಸರಣಿಗೆ ಭಾರತದ ಕಲಾತ್ಮಕ ಬ್ಯಾಟ್ಸಮನ್ ವೆಂಗಿಪುರಪ್ಪ ವೆಂಕಟಸಾಯಿ ಲಕ್ಷ್ಮಣ್ ಒಂದು ತಂಡವನ್ನು ಪ್ರಕಟಿಸಿದ್ದಾರೆ. ಈ ತಂಡದ ಪ್ರಕಾರ ಭಾರತ ಆಡಿದರೇ ಖಂಡಿತ, ಲಂಕಾ ನೆಲದಲ್ಲಿಯೇ, ಲಂಕಾ ತಂಡವನ್ನ 3 – 0 ಅಂತರದಲ್ಲಿ ಏಕದಿನ ಹಾಗೂ ಟಿ20 ಸರಣಿಗಳನ್ನ ಗೆಲ್ಲಬಹುದು ಎಂದು ಹೇಳಿದ್ದಾರೆ.
ಲಕ್ಷ್ಮಣ್ ಘೋಶಿಸಿರುವ ತಂಡದಲ್ಲಿ ಐವರು ಬ್ಯಾಟ್ಸ್ ಮನ್ ಗಳು, ಇಬ್ಬರೂ ಆಲ್ ರೌಂಡರ್ ಗಳು, ನಾಲ್ವರು ಬೌಲರ್ ಗಳಿದ್ದಾರೆ. ಆರಂಭಿಕರಾಗಿ ಶಿಖರ್ ಧವನ್, ಪೃಥ್ವಿ ಶಾ ರನ್ನ ಆಯ್ಕೆ ಮಾಡಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಸೂರ್ಯ ಕುಮಾರ್ ಯಾದವ್, ಮನೀಶ್ ಪಾಂಡೆ, ಹಾಗೂ ವಿಕೇಟ್ ಕೀಪರ್ ಬ್ಯಾಟ್ಸಮನ್ ಸಂಜು ಸ್ಯಾಮ್ಸನ್ ಇದ್ದಾರೆ. ಇನ್ನು ಆಲ್ ರೌಂಡರ್ ಗಳಾಗಿ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಇದ್ದಾರೆ. ವೇಗದ ಬೌಲರ್ ಗಳಾಗಿ ಭುವನೇಶ್ವರ್ ಕುಮಾರ್ ಹಾಗೂ ದೀಪಕ್ ಚಾಹರ್ ಇದ್ದಾರೆ. ಇನ್ನು ಸ್ಪಿನ್ ಜೋಡಿಯಾಗಿ ಕುಲ್-ಚಾ ಜೋಡಿ ಇರಲಿದೆ. ವಿ.ವಿ.ಎಸ್ ಲಕ್ಷ್ಮಣ್ ತಂಡದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.
ತಂಡ ಇಂತಿದೆ – ಶಿಖರ್ ಧವನ್ (ನಾಯಕ), ಪೃಥ್ವಿ ಶಾ, ಮನೀಶ್ ಪಾಂಡೆ, ಸೂರ್ಯ ಕುಮಾರ್ ಯಾದವ್, ಸಂಜು ಸ್ಯಾಮ್ಸನ್(ವಿಕೇಟ್ ಕೀಪರ್) ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ದೀಪಕ್ ಚಾಹರ್, ಯುಜವೇಂದ್ರ ಚಾಹಲ್, ಕುಲದೀಪ್ ಯಾದವ್.