ಖಡಕ್ ಖಾರದ ರುಚಿಯ ಉತ್ತರ ಕರ್ನಾಟಕ ಶೈಲಿಯ ಶೇಂಗಾ ಚಟ್ನಿ ಪುಡಿ ಮನೆಯಲ್ಲಿಯೇ ಮಾಡುವುದು ಹೇಗೆ ಗೊತ್ತೇ??
ಖಡಕ್ ಖಾರದ ರುಚಿಯ ಉತ್ತರ ಕರ್ನಾಟಕ ಶೈಲಿಯ ಶೇಂಗಾ ಚಟ್ನಿ ಪುಡಿ ಮನೆಯಲ್ಲಿಯೇ ಮಾಡುವುದು ಹೇಗೆ ಗೊತ್ತೇ??
ನಮಸ್ಕಾರ ಸ್ನೇಹಿತರೇ, ಇಂದು ನಾವು ಉತ್ತರ ಕರ್ನಾಟಕ ಶೈಲಿಯಲ್ಲಿ ಶೇಂಗಾ ಚಟ್ನಿ ಪುಡಿ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗದೆ. ಉತ್ತರ ಕರ್ನಾಟಕ ಶೈಲಿಯಲ್ಲಿ ಶೇಂಗಾ ಚಟ್ನಿ ಪುಡಿ ಮಾಡಲು ಬೇಕಾಗುವ ಸಾಮಗ್ರಿಗಳು: 1 ಬಟ್ಟಲು ಕಡಲೆ ಬೀಜ, 3 ಚಮಚ ಅಚ್ಚ ಖಾರದ ಪುಡಿ, ಕಾಲು ಚಮಚ ಅರಿಶಿನ ಪುಡಿ, 1 ಚಮಚ ಜೀರಿಗೆ, ಸ್ವಲ್ಪ ಕರಿಬೇವು, 25 ಎಸಳು ಬೆಳ್ಳುಳ್ಳಿ, 1 ಇಂಚು ಹುಣಸೆಹಣ್ಣು, ರುಚಿಗೆ ತಕ್ಕಷ್ಟು ಉಪ್ಪು, 1 ಚಮಚ ಎಣ್ಣೆ, ಕಾಲು ಚಮಚ ಬೆಲ್ಲ.
ಉತ್ತರ ಕರ್ನಾಟಕ ಶೈಲಿಯಲ್ಲಿ ಶೇಂಗಾ ಚಟ್ನಿ ಪುಡಿ ಮಾಡುವ ವಿಧಾನ: ಮೊದಲಿಗೆ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ ಕಡಲೆ ಬೀಜವನ್ನು ಹಾಕಿ ಕಡಿಮೆ ಉರಿಯಲ್ಲಿ 3 – 4 ನಿಮಿಷಗಳ ಕಾಲ ಹುರಿದುಕೊಂಡು ಒಂದು ಪ್ಲೇಟಿಗೆ ಹಾಕಿಕೊಳ್ಳಿ. ಮತ್ತೆ ಅದೇ ಬಾಣಲಿಗೆ ಜೀರಿಗೆಯನ್ನು ಹಾಕಿ ಹುರಿದುಕೊಂಡು ಅದೇ ಪ್ಲೇಟಿಗೆ ಹಾಕಿಕೊಂಡು ತಣ್ಣಗಾಗಲು ಬಿಡಿ.
ಮತ್ತೊಂದು ಕಡೆ ಗ್ಯಾಸ್ ಮೇಲೆ ಸಣ್ಣ ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ 1 ಚಮಚದಷ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಕರಿಬೇವುವನ್ನು ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಹುಣಸೆ ಹಣ್ಣನ್ನು ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಅರಿಶಿನ ಪುಡಿಯನ್ನು ಹಾಕಿ ಒಗ್ಗರಣೆ ಮಾಡಿಕೊಂಡು ಗ್ಯಾಸ್ ಆಫ್ ಮಾಡಿಕೊಳ್ಳಿ.ನಂತರ ಇದಕ್ಕೆ 2 ಚಮಚ ಖಾರದ ಪುಡಿಯನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ.
ಕಡಲೆಬೀಜ ತಣ್ಣಗಾದ ನಂತರ ಒಂದು ಮಿಕ್ಸಿ ಜಾರಿಗೆ ಹುರಿದ ಕಡಲೆ ಬೀಜ, ಜೀರಿಗೆ, ಬೆಳ್ಳುಳ್ಳಿ, ಒಗ್ಗರಣೆ ಮಿಶ್ರಣ, ರುಚಿಗೆ ತಕ್ಕಷ್ಟು ಉಪ್ಪು, 1 ಚಮಚ ಖಾರದ ಪುಡಿ, ಕಾಲು ಚಮಚ ಬೆಲ್ಲವನ್ನು ಹಾಕಿ ರುಬ್ಬಿ ಕೊಂಡರೆ ಉತ್ತರ ಕರ್ನಾಟಕ ಶೈಲಿಯ ಶೇಂಗ ಚಟ್ನಿಪುಡಿ ಸವಿಯಲು ಸಿದ್ಧ.