ಫೇಮಸ್ ಮೇಲುಕೋಟೆ ಪುಳಿಯೋಗರೆಯನ್ನು ಸಿಂಪಲ್ ಆಗಿ ಮನೆಯಲ್ಲೇ ಮಾಡುವುದು ಹೇಗೆ ಗೊತ್ತಾ??

ಫೇಮಸ್ ಮೇಲುಕೋಟೆ ಪುಳಿಯೋಗರೆಯನ್ನು ಸಿಂಪಲ್ ಆಗಿ ಮನೆಯಲ್ಲೇ ಮಾಡುವುದು ಹೇಗೆ ಗೊತ್ತಾ??

ನಮಸ್ಕಾರ ಸ್ನೇಹಿತರೇ, ಇಂದು ನಾವು ಮೇಲುಕೋಟೆ ಅಯ್ಯಂಗಾರ್ ಪುಳಿಯೋಗರೆ ಗೊಜ್ಜು ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಮೇಲುಕೋಟೆ ಅಯ್ಯಂಗಾರ್ ಪುಳಿಯೋಗರೆ ಗೊಜ್ಜು ಮಾಡಲು ಬೇಕಾಗುವ ಸಾಮಗ್ರಿಗಳು:

100 – 150 ಗ್ರಾಂ ಹುಣಸೆಹಣ್ಣು, 3 ಚಮಚ ಬಿಳಿ ಎಳ್ಳು, ಅರ್ಧ ಬಟ್ಟಲು ಬೆಲ್ಲ, 1 ಚಮಚ ಜೀರಿಗೆ, 20 – 25 ಕಾಳು ಕಾಳುಮೆಣಸು, 8 – 10 ಬ್ಯಾಡಿಗೆ ಮೆಣಸಿನಕಾಯಿ ,ಒಂದೂವರೆ ಚಮಚ ಧನಿಯಾ ,1 ಚಮಚ ಹುರಿಗಡಲೆ, 1 ಚಮಚ ಕಡಲೆಬೇಳೆ, ಅರ್ಧ ಚಮಚ ಮೆಂತ್ಯ, ಸ್ವಲ್ಪ ಎಳ್ಳೆಣ್ಣೆ, 2ಚಮಚ ಉದ್ದಿನಬೇಳೆ, ರುಚಿಗೆ ತಕ್ಕಷ್ಟು ಉಪ್ಪು, 2 – 3 ಒಣಮೆಣಸಿನಕಾಯಿ, ಅರ್ಧ ಚಮಚ ಸಾಸಿವೆ, ಸ್ವಲ್ಪ ಕರಿಬೇವು, ಪುಳಿಯೋಗರೆ ಗೊಜ್ಜಿಗೆ ಬೇಕಾದಷ್ಟು ಕಡಲೇಬೀಜ, ಅರ್ಧ ಚಮಚ ಉದ್ದಿನಬೇಳೆ, 1 ಚಮಚ ಕಡಲೆಬೇಳೆ,ಸ್ವಲ್ಪ ಹಿಂಗೂ, ಎಣ್ಣೆ.

ಮೇಲುಕೋಟೆ ಅಯ್ಯಂಗಾರ್ ಪುಳಿಯೋಗರೆ ಗೊಜ್ಜು ಮಾಡುವ ವಿಧಾನ:
ಮೊದಲಿಗೆ ಗ್ಯಾಸ್ ಮೇಲೆ ಒಂದು ಪಾತ್ರೆಯನ್ನು ಇಟ್ಟು ಅದಕ್ಕೆ ರಾತ್ರಿ ನೆನೆಸಿದ ಹುಣಸೆಹಣ್ಣಿನ ರಸವನ್ನು ಹಾಕಿ, ಸ್ವಲ್ಪ ಗಟ್ಟಿಯಾಗುವವರೆಗೂ ಬೇಯಲು ಇಡಿ. ಹುಣಸೆ ಹಣ್ಣಿನ ರಸ ಗಟ್ಟಿಯಾಗಲು 10 – 15 ನಿಮಿಷ ಆಗುತ್ತದೆ.ಈ ಸಮಯದಲ್ಲಿ ಪುಳಿಯೋಗರೆ ಪುಡಿ ಮಾಡಿಕೊಳ್ಳಿ.

ಮತ್ತೊಂದು ಕಡೆ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ ಉದ್ದಿನಬೇಳೆ ಕಡಲೆಬೇಳೆ ಮೆಂತ್ಯ ವನ್ನು ಹಾಕಿ ಹದವಾಗಿ ಫ್ರೈ ಮಾಡಿಕೊಂಡು ಒಂದು ಬಟ್ಟಲಿಗೆ ಹಾಕಿ ಪಕ್ಕಕ್ಕಿಡಿ. ನಂತರ ಮತ್ತೆ ಅದೇ ಬಾಣಲೆಗೆ ಧನಿಯಾ, ಜೀರಿಗೆ, ಕಾಳುಮೆಣಸನ್ನು ಹಾಕಿ ಕಡಿಮೆ ಉರಿಯಲ್ಲಿ ಫ್ರೈ ಮಾಡಿಕೊಂಡು ಅದೇ ಬಟ್ಟಲಿಗೆ ಹಾಕಿಕೊಳ್ಳಿ. ಮತ್ತೆ ಅದೇ ಬಾಣಲಿಗೆ ಹುರಿಗಡಲೆ, ಬಿಳಿಎಳ್ಳು ಹಾಕಿ ಫ್ರೈ ಮಾಡಿಕೊಂಡು ಬಟ್ಟಲಿಗೆ ಹಾಕಿಕೊಳ್ಳಿ.ಮತ್ತೆ ಅದೇ ಬಾಣಲಿಗೆ ಬ್ಯಾಡಿಗೆ ಮೆಣಸಿನಕಾಯಿಯನ್ನು ಹಾಕಿ ಟ್ರೈ ಮಾಡಿಕೊಂಡು ಬಟ್ಟಲಿಗೆ ಹಾಕಿ ತಣ್ಣಗಾಗಲು ಬಿಡಿ. ತಣ್ಣಗಾದ ನಂತರ ಒಂದು ಮಿಕ್ಸಿ ಜಾರಿಗೆ ಹುರಿದ ಎಲ್ಲಾ ಪದಾರ್ಥಗಳನ್ನು ಹಾಕಿ ಪುಡಿ ಮಾಡಿದರೆ ಪುಳಿಯೋಗರೆ ಪುಡಿ ರೆಡಿಯಾಗುತ್ತದೆ.

ಹುಣಸೆಹಣ್ಣಿನ ರಸ ಸ್ವಲ್ಪ ಗಟ್ಟಿಯಾದ ನಂತರ,ಅದಕ್ಕೆ ಸ್ವಲ್ಪ ಬೆಲ್ಲವನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಹುಣಸೆ ಹಣ್ಣಿನ ರಸಕ್ಕೆ ಬೇಕಾಗುವಷ್ಟು ಹುರಿದು ಮಾಡಿದ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ತೆಗೆದುಕೊಂಡ ಎಳ್ಳೆಣ್ಣೆ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿದರೆ ಪುಳಿಯೋಗರೆ ಗೊಜ್ಜು ರೆಡಿಯಾಗುತ್ತದೆ.

ತದನಂತರ, ಒಂದು ಬಾಣಲೆಯಲ್ಲಿ ಇಟ್ಟುಕೊಂಡು 3 – 4 ಚಮಚದಷ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಅದಕ್ಕೆ ಸಾಸುವೆ, ಇಂಗು, ಕಡಲೆಬೀಜ, ಕಡಲೇಬೇಳೆ, ಉದ್ದಿನಬೇಳೆ ಮೆಣಸಿನಕಾಯಿ, ಕರಿಬೇವು ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಮಾಡಿದ ಪುಳಿಯೋಗರೆ ಗೊಜ್ಜನ್ನು ಹಾಕಿ ಮಿಕ್ಸ್ ಮಾಡಿದರೆ ಮೇಲುಕೋಟೆ ಅಯ್ಯಂಗಾರ್ ಪುಳಿಯೋಗರೆ ಗೊಜ್ಜು ಸವಿಯಲು ಸಿದ್ಧ.