ಅಖಾಡಕ್ಕಿಳಿದ ವಾಯುಪಡೆ ! ಚೀನಾ ಮತ್ತೊಮ್ಮೆ ಅಸಲಿ ಮುಖ ತೋರಿಸಿದ ಕೆಲವೇ ಗಂಟೆಗಳಲ್ಲಿ ಆಟ ಆರಂಭಿಸಿದ ವಾಯುಪಡೆ.

ಅಖಾಡಕ್ಕಿಳಿದ ವಾಯುಪಡೆ ! ಚೀನಾ ಮತ್ತೊಮ್ಮೆ ಅಸಲಿ ಮುಖ ತೋರಿಸಿದ ಕೆಲವೇ ಗಂಟೆಗಳಲ್ಲಿ ಆಟ ಆರಂಭಿಸಿದ ವಾಯುಪಡೆ.

ನಮಸ್ಕಾರ ಸ್ನೇಹಿತರೇ, ಇದೀಗ ಕೇಂದ್ರ ಸರ್ಕಾರ ಭಾರತೀಯ ಭೂ ಸೇನೆ, ವಾಯುಪಡೆ ಹಾಗೂ ನೌಕಾ ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿ ಆದೇಶ ಹೊರಡಿಸಿದ ನಂತರ ಕೆಲವೇ ಕೆಲವು ಗಂಟೆಗಳಲ್ಲಿ ವಾಯುಪಡೆ ಹೈ ಅಲರ್ಟ್ ಘೋಷಿಸಿದೆ.

ಹೌದು ಸ್ನೇಹಿತರೇ, ಕೆಲವೇ ಕೆಲವು ಗಂಟೆಗಳ ಹಿಂದಷ್ಟೇ (ನಿನ್ನೆ ತಡ ರಾತ್ರಿ) ಭಾರತದ ಜೊತೆ ನಾವು ಶಾಂತಿ ಬಯಸುತ್ತೇವೆ. ಭಾರತೀಯ ಸೈನಿಕರು ಗಡಿ ದಾಟಿ ಬಂದ ಕಾರಣ ಈ ಘಟನೆ ನಡೆದಿದೆ, ನಮ್ಮದು ಏನು ತಪ್ಪಿಲ್ಲ ಎಂದು ಚೀನಾದ ವಿದೇಶಿ ವಕ್ತಾರ ಹೇಳಿಕೆ ನೀಡಿದ್ದರು. ಆದರೆ ಇದಾದ ಕೆಲವು ಗಂಟೆಗಳ ಬಳಿಕ ಚೀನಾ ತನ್ನ ಅಸಲಿ ಮುಖವನ್ನು ಪ್ರದರ್ಶನ ಮಾಡಿದ್ದು, ಗಡಿಯಲ್ಲಿ ಭಾರಿ ಹೆಲಿಕ್ಯಾಪ್ಟರ್ ಗಳು ಹಾಗೂ ಸೇನಾ ಜಮಾವಣೆ ಮಾಡುತ್ತಿದೆ. ಇದರ ಬೆನ್ನಲ್ಲೇ ಭಾರತೀಯ ವಾಯುಪಡೆಗೆ ಗ್ರೀನ್ ಸಿಗ್ನಲ್ ಅನ್ನು ಕೇಂದ್ರ ಸರ್ಕಾರ ನೀಡಿದ ಕಾರಣ ಅಖಾಡಕ್ಕೆ ಇಳಿದಿದೆ.

ಈ ಆದೇಶ ಹೊರಡಿಸಿದ ಕೆಲವೇ ಕೆಲವು ಗಂಟೆಗಳಲ್ಲಿ ಭಾರತದ ಹೆಲಿಕ್ಯಾಪ್ಟರ್ ಗಳು ಹಾಗೂ ಫೈಟರ್ ಜೆಟ್ ಗಳು ಭಾರತದ ಗಡಿಯುದ್ಧಕ್ಕೂ ಹಾರಾಟ ನಡೆಸಲು ಆರಂಭಿಸಿವೆ. ಮೂಲಗಳ ಪ್ರಕಾರ ಧ್ರುವ ಹೆಲಿಕಾಪ್ಟರ್ಗಳು ಈಗಾಗಲೇ ಗಡಿಯಲ್ಲಿ ಹಾರಾಟ ಆರಂಭಿಸಿದ್ದು, ಗಸ್ತು ಕಾರ್ಯದಲ್ಲಿ ನಿರತವಾಗಿವೆ. ಯಾವುದೇ ಸವಾಲನ್ನು ಎದುರಿಸಲು ಸಿದ್ಧರಿರುವುದಾಗಿ ಬಿಪಿನ್ ರಾವತ್ ರವರು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. ಒಟ್ಟಿನಲ್ಲಿ ಕ್ಷಣ ಕ್ಷಣಕ್ಕೂ ಗಡಿಯಲ್ಲಿ ಕಾವು ಏರುತ್ತಿದ್ದು ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.