ನಿಟ್ಟುಸಿರು ಬಿಡಿ, ಕರ್ನಾಟಕಕ್ಕೆ ಹೊಸ ಭರವಸೆ ನೀಡಿದ ವೈದ್ಯರು ! ಕೋರೋನ ಅಂತ್ಯಕ್ಕೆ ಇದೇ ರಾಮಬಾಣ

ನಿಟ್ಟುಸಿರು ಬಿಡಿ, ಕರ್ನಾಟಕಕ್ಕೆ ಹೊಸ ಭರವಸೆ ನೀಡಿದ ವೈದ್ಯರು ! ಕೋರೋನ ಅಂತ್ಯಕ್ಕೆ ಇದೇ ರಾಮಬಾಣ

ನಮಸ್ಕಾರ ಸ್ನೇಹಿತರೇ, ವಿಶ್ವದ ಎಲ್ಲೆಡೆ ಇದೀಗ ಕೋರೋನ ವೈರಸ್ ತಾಂಡವವಾಡುತ್ತಿದೆ. ಸಕಲ ಆರೋಗ್ಯ ಸೌಲಭ್ಯಗಳನ್ನು ಹೊಂದಿರುವ ಬಲಾಢ್ಯ ರಾಷ್ಟ್ರಗಳು ಕೂಡ ಕೋರೋನ ವೈರಸ್ನಿಂದ ತತ್ತರಿಸಿವೆ.

ಭಾರತ ದೇಶದಲ್ಲಿ ಕೂಡ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಆತಂಕ ಮೂಡಿಸುತ್ತಿರುವ ಸಂದರ್ಭದಲ್ಲಿಯೇ ಕರ್ನಾಟಕಕ್ಕೆ ಹೊಸ ಭರವಸೆ ಸಿಕ್ಕಿದೆ. ಹೌದು ಕೇರಳ ರಾಜ್ಯದಲ್ಲಿ ಪ್ಲಾಸ್ಮಾ ಥೆರಪಿ ಯಶಸ್ವಿಗೊಂಡ ನಂತರ ದೆಹಲಿ ರಾಜ್ಯಕ್ಕೆ ಕೇಂದ್ರ ಅನುಮತಿ ನೀಡಿತ್ತು. ಇದಾದ ಬಳಿಕ ಇದೀಗ ಕರ್ನಾಟಕಕ್ಕೆ ಪ್ಲಾಸ್ಮ ಥೆರಪಿ ಆರಂಭಿಸಲು ಅವಕಾಶ ನೀಡಿದ ನಾಲ್ಕು ದಿನಗಳಲ್ಲಿ ಭರವಸೆಯ ಫಲಿತಾಂಶ ಹೊರ ಬಿದ್ದಿದೆ.

ಹೌದು, ಇದೀಗ ಬಂದಿರುವ ಸುದ್ದಿಯ ಪ್ರಕಾರ ವೆಂಟಿಲೇಟರ್ ಸಹಾಯ ದಲ್ಲಿದ್ದ ಇಬ್ಬರು ಸೋಂಕಿತರು ಪ್ಲಾಸ್ಮ ಥೆರಪಿ ಯಿಂದ ಸಹಜ ಸ್ಥಿತಿಗೆ ಮರಳಿದ್ದಾರೆ ಎಂದು ಸುವರ್ಣ ನ್ಯೂಸ್ ವರದಿ ಮಾಡಿದೆ. ಕೇವಲ ನಿನ್ನೆಯಷ್ಟೇ ಗುಣಮುಖರಾದವರಿಂದ ಪ್ಲಾಸ್ಮಾ ಪಡೆದು ಕೊಳ್ಳಲಾಗಿತ್ತು, ಇದಾದ ಕೆಲವೇ ಕೆಲವು ಗಂಟೆಗಳಲ್ಲಿ ಫಲಿತಾಂಶ ಹೊರ ಬಿದ್ದಿದ್ದು ಕರ್ನಾಟಕಕ್ಕೆ ಇದೀಗ ಹೊಸ ಭರವಸೆ ಸಿಕ್ಕಿದೆ. ಒಂದು ವೇಳೆ ಕರ್ನಾಟಕದಲ್ಲಿಯೂ ಕೂಡ ಪ್ಲಾಸ್ಮಾ ಥೆರಪಿ ಕೇರಳ ರಾಜ್ಯದಂತೆ ಭಾರಿ ಯಶಸ್ಸು ಕಂಡರೆ ಇಡೀ ದೇಶದಲ್ಲಿ ಪ್ಲಾಸ್ಮಾ ಥೆರಪಿ ಆರಂಭಿಸುವ ಸಾಧ್ಯತೆಗಳು ಹೆಚ್ಚಾಗಿವೆ.