ಎಲ್ಲರನ್ನೂ ಒಮ್ಮೆಲೆ ಭಾವನಾತ್ಮಕವಾಗಿ ಮಾಡಿದ ಸ್ಮೃತಿ ಮಂಧನ ! ವಿಶ್ವಕಪ್ ಸೋಲಿನ ಬಳಿಕ ಮೊದಲ ಪೋಸ್ಟ್ ನಲ್ಲಿ ಹೇಳಿದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಭಾರತೀಯ ವನಿತೆಯರು ಟಿ-20 ವಿಶ್ವಕಪ್ ಫೈನಲ್ನಲ್ಲಿ ಆಸ್ಟ್ರೇಲಿಯ ತಂಡದ ವಿರುದ್ಧ ಸೋಲನ್ನು ಕಂಡಿದ್ದಾರೆ. ಇದೇ ಮೊಟ್ಟಮೊದಲ ಬಾರಿಗೆ ಐಸಿಸಿ ಟೂರ್ನಮೆಂಟ್ ನಲ್ಲಿ ಫೈನಲಿಗೆ ತಲುಪಿದ್ದ ಭಾರತೀಯ ವನಿತೆಯರು ಕೊನೆಯ ಪಂದ್ಯದಲ್ಲಿ ಗೆಲುವು ಕಾಣುವಲ್ಲಿ ವಿಫಲರಾದರು.

ಆದರೆ ಯಾರೊಬ್ಬರೂ ಕೂಡ ವನಿತೆಯರನ್ನು ಕಿಂಚಿತ್ತು ಕೂಡ ಟೀಕೆ ಮಾಡಲಿಲ್ಲ, ಬದಲಾಗಿ ವನಿತೆಯರ ಬೆಂಬಲಕ್ಕೆ ನಿಂತು ನೀವು ಈಗಾಗಲೇ ನಮ್ಮನ್ನು ಹೆಮ್ಮೆಪಡುವಂತೆ ಮಾಡಿದ್ದೀರಿ, ಖಂಡಿತ ಮುಂದೊಂದು ದಿನ ನೀವು ಪ್ರಶಸ್ತಿ ಗೆಲ್ಲುತ್ತೀರಿ ಎಂದು ಹುರಿದುಂಬಿಸಿದರು. ಈ ಎಲ್ಲಾ ವಿದ್ಯಮಾನಗಳ ಬಳಿಕ ಇದೀಗ ಭಾರತೀಯ ವನಿತೆಯರು ಆಸ್ಟ್ರೇಲಿಯಾ ದೇಶದಿಂದ ವಾಪಸಾಗಿದ್ದಾರೆ. ಇದೀಗ ಪ್ರತಿಕ್ರಿಯೆ ನೀಡಿರುವ ಸ್ಮೃತಿ ಮಂದನಾ ರವರು,

ಫೈನಲ್ ಪಂದ್ಯದಲ್ಲಿ ನಮ್ಮ ಆಟವನ್ನು ನೋಡಲು ನೆರೆದಿದ್ದ ಸಾವಿರಾರು ಜನರಿಗೂ ಹಾಗೂ ಭಾರತದಿಂದ ನಮ್ಮನ್ನು ಬೆಂಬಲಿಸಿದ ಶತಕೋಟಿ ಜನರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ, ದಯವಿಟ್ಟು ನಮ್ಮನ್ನು ಕ್ಷಮಿಸಿಬಿಡಿ ಫಲಿತಾಂಶ ನಮ್ಮ ಪರವಾಗಿ ಬರಲಿಲ್ಲ, ದಯವಿಟ್ಟು ನಮ್ಮನ್ನು ಕ್ಷಮಿಸಿ. ನೀವು ನನಗೆ ಹಾಗೂ ನನ್ನ ತಂಡಕ್ಕೆ ನೀಡಿದ ಬೆಂಬಲ ಅತ್ಯದ್ಭುತ, ನಿಮ್ಮ ಬೆಂಬಲ ದಯವಿಟ್ಟು ಹೀಗೆ ಮುಂದುವರೆಯಲಿ, ನಿಮ್ಮ ಬೆಂಬಲವೇ ನಮ್ಮನ್ನು ಮುನ್ನಡೆಸುವ ಸಾಧನ. ಖಂಡಿತ ಮುಂದೊಂದು ದಿನ ಪ್ರಶಸ್ತಿ ಗೆಲ್ಲಲು ಮತ್ತಷ್ಟು ಶ್ರಮವಹಿಸಿ ಪ್ರಯತ್ನ ಪಡುತ್ತೇವೆ.

ಇಡೀ ವಿಶ್ವಕಪ್ನಲ್ಲಿ ನನ್ನ ತಂಡ ಹಾಗೂ ತಂಡದ ಪರವಾಗಿ ಕೆಲಸ ನಿರ್ವಹಿಸಿದ ಸಹಾಯಕ ಸಿಬ್ಬಂದಿಗಳು ಸೇರಿದಂತೆ ಶ್ರಮವಹಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು, ಖಂಡಿತವಾಗಲೂ ನಾನು ನಿಮಗೆ ಭರವಸೆ ನೀಡುತ್ತಿದ್ದೇನೆ ಮುಂದೊಂದು ದಿನ ಮತ್ತಷ್ಟು ಶ್ರಮವಹಿಸಿ ನಾವು ಮತ್ತಷ್ಟು ಬಲವಾಗಿ ಕಂಬ್ಯಾಕ್ ಮಾಡುತ್ತೇವೆ ಎಂದು ಪೋಸ್ಟ್ ಮಾಡಿದ್ದಾರೆ.

Post Author: Ravi Yadav