ಕೊಹ್ಲಿ, ದ್ರಾವಿಡ್, ಗಂಗೂಲಿ, ಗವಾಸ್ಕರ್ ಎಲ್ಲರನ್ನೂ ಮೀರಿಸಿ ಹೊಸ ದಾಖಲೆ ಬರೆಯಲು ಮುಂದಾದ ಅಗರ್ವಾಲ್ ! ಏನು ಗೊತ್ತಾ?

ಕೊಹ್ಲಿ, ದ್ರಾವಿಡ್, ಗಂಗೂಲಿ, ಗವಾಸ್ಕರ್ ಎಲ್ಲರನ್ನೂ ಮೀರಿಸಿ ಹೊಸ ದಾಖಲೆ ಬರೆಯಲು ಮುಂದಾದ ಅಗರ್ವಾಲ್ ! ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನ್ಯೂಜಿಲೆಂಡ್ ನೆಲದಲ್ಲಿ ನಡೆಯುತ್ತಿರುವ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಬ್ಯಾಟ್ಸ್ಮನ್ಗಳು ವೈಫಲ್ಯ ಕಂಡಿದ್ದಾರೆ. ಇದರ ನಡುವೆಯೇ ಮೊದಲ ಇನಿಂಗ್ಸ್ನಲ್ಲಿ 34 ಹಾಗೂ ಎರಡನೇ ಇನಿಂಗ್ಸ್ನಲ್ಲಿ 58 ರನ್ ಗಳಿಸಿರುವ ಅಗರ್ವಾಲ್ ರವರು ಕೊಂಚ ಮಟ್ಟಿಗೆ ಉತ್ತಮ ಪ್ರದರ್ಶನ ನೀಡಿದ್ದಾರೆ.

ಇದುವರೆಗೂ ಆಡಿರುವ 10 ಟೆಸ್ಟ್ ಪಂದ್ಯಗಳಿಂದ 15 ಇನ್ನಿಂಗ್ಸ್ ಗಳಲ್ಲಿ ಬ್ಯಾಟಿಂಗ್ ಮಾಡಿರುವ ಬಲಗೈ ಬ್ಯಾಟ್ಸ್ಮನ್ ಮಯಂಕ್ ಅಗರ್ವಾಲ್ ರವರು ಇನ್ನು ಮುಂದಿನ ಮೂರು ಇನಿಂಗ್ಸ್ ಗಳಲ್ಲಿ ಕೇವಲ 36 ರನ್ ಗಳನ್ನು ಗಳಿಸಿದರೇ ದಾಖಲೆಯೊಂದನ್ನು ತನ್ನ ಹೆಸರಿಗೆ ಬರೆಸಿಕೊಳ್ಳಲಿದ್ದಾರೆ. ಅಷ್ಟಕ್ಕೂ ಅದು ಏನು ಗೊತ್ತಾ? ತಿಳಿಯಲು ಕೆಳಗಡೆ ಓದಿ.

ಅತಿ ಕಡಿಮೆ ಇನ್ನಿಂಗ್ಸ್ ಗಳಲ್ಲಿ ಸಾವಿರ ಟೆಸ್ಟ್ ರನ್ ಗಳಿಸಿರುವ ಭಾರತೀಯ ಬ್ಯಾಟ್ಸ್ ಮನ್ ಗಳ ಪೈಕಿ ಇದೀಗ ಮಾಜಿ ನಾಯಕ ವಿನೋದ್ ಕಾಂಬ್ಳಿ ಅವರು 14 ಇನ್ನಿಂಗ್ಸ್ ಗಳಲ್ಲಿ ಸಾವಿರ ರನ್ ಸಾಧನೆ ಮಾಡಿ ಮೊದಲನೇ ಸ್ಥಾನದಲ್ಲಿದ್ದಾರೆ. ಇನ್ನುಳಿದಂತೆ ಪೂಜಾರ 18, ಸುನಿಲ್ ಗವಾಸ್ಕರ್ 21, ಮಂಜ್ರೇಕರ್ 23, ರಾಹುಲ್ ದ್ರಾವಿಡ್ 23 ಹಾಗೂ ಸೌರವ್ ಗಂಗೂಲಿ ರವರು 23 ಇನಿಂಗ್ಸ್ ಗಳಲ್ಲಿ ಸಾವಿರ ರನ್ ಗಳಿಸಿದ್ದಾರೆ. ಒಂದು ವೇಳೆ ಮುಂದಿನ ಮೂರು ಇನ್ನಿಂಗ್ಸ್ ಗಳಲ್ಲಿ 36 ರನ್ ಗಳಿಸಿದರೇ ಮಯಂಕ್ ಅಗರ್ವಲ್ ರವರು ಎರಡನೇ ಸ್ಥಾನಕ್ಕೆ ತಲುಪಲಿದ್ದಾರೆ. ಮೊದಲನೇ ಸ್ಥಾನದಲ್ಲಿ ವಿನೋದ್ ಕಾಂಬ್ಳಿ ರವರು ಭದ್ರವಾಗಿದ್ದಾರೆ, ಯಾಕೆಂದರೆ ಈಗಾಗಲೇ ಮಯಂಕ್ ಅಗರ್ವಲ್ ರವರು 15 ಇನ್ನಿಂಗ್ಸ್ ಗಳಲ್ಲಿ ಆಟವಾಡಿದ್ದಾರೆ.