ವಿಶ್ವಕ್ರಿಕೆಟ್ ನಲ್ಲಿಯೇ ಅದ್ಭುತ ಎಸೆತದ ಮೂಲಕ ಡಿಕಾಕ್ ರವರನ್ನು ಕ್ಲೀನ್ ಬೋಲ್ಡ್ ಮಾಡಿದ ಸ್ಟಾರ್ಕ್ !

ವಿಶ್ವಕ್ರಿಕೆಟ್ ನಲ್ಲಿಯೇ ಅದ್ಭುತ ಎಸೆತದ ಮೂಲಕ ಡಿಕಾಕ್ ರವರನ್ನು ಕ್ಲೀನ್ ಬೋಲ್ಡ್ ಮಾಡಿದ ಸ್ಟಾರ್ಕ್ !

ನಮಸ್ಕಾರ ಸ್ನೇಹಿತರೇ, ಆಸ್ಟ್ರೇಲಿಯಾ ಹಾಗೂ ಸೌತ್ ಆಫ್ರಿಕಾ ತಂಡಗಳ ನಡುವೆ ನಡೆಯುತ್ತಿರುವ ಟಿ20 ಸರಣಿಯಲ್ಲಿ ಮೊದಲ ಪಂದ್ಯದಲ್ಲಿಯೇ ಹಲವಾರು ಅಪರೂಪದ ಘಟನೆಗಳು ಕಂಡುಬಂದಿವೆ.

ಅದರಲ್ಲಿಯೂ ಮೊದಲ ಓವರ್ ನ ಮೂರನೇ ಎಸೆತದಲ್ಲಿ ಆಸ್ಟ್ರೇಲಿಯಾದ ವೇಗದ ಬೌಲರ್ ಸ್ಟಾರ್ಕ್ ಅವರು 141 ಕಿಲೋಮೀಟರ್ ವೇಗದಲ್ಲಿ ಬೌಲಿಂಗ್ ಮಾಡಿದ ಎಸೆತ ಕಂಡು ಮೈದಾನದಲ್ಲಿ ಕಿಕ್ಕಿರಿದು ತುಂಬಿದ್ದ ಜನ ಚಪ್ಪಾಳೆಗಳ ಸುರಿಮಳೆ ಸುರಿಸಿದರೇ, ಕಮೆಂಟೇಟರ್ ಗಳಂತೂ ಸ್ಟಾರ್ ರವರ ಅದ್ಭುತ ಬಾಲ್ ಗೆ ಒಂದು ಕ್ಷಣ ದಂಗಾಗಿ ನಿಂತರು. ಅದ್ಭುತ ಔಟ್ ಸ್ಪಿಂಗರ್ ಎಸೆತದ ಟ್ವೀಟ್ ಕೆಳಗಡೆ ಇದ್ದು ನೀವೇ ನೋಡಿ.

ಪಂದ್ಯದ ಫಲಿತಾಂಶ: ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಸೌತ್ ಆಫ್ರಿಕಾ ತಂಡವು ಆಸ್ಟ್ರೇಲಿಯಾ ತಂಡವನ್ನು 196 ರನ್ ಗಳಿಸಲು ಅವಕಾಶ ನೀಡಿತ್ತು. ಈ ಗುರಿ ಬೆನ್ನತ್ತಿದ ಆಫ್ರಿಕಾ ಖಂಡವು ಬ್ಯಾಟಿಂಗ್ ಆದಕಾರಣ ಗುರಿ ಸುಲಭವಾಗಿ ಬೆನ್ನತ್ತ ಬಹುದು ಎಂದು ಲೆಕ್ಕಾಚಾರ ಹಾಕಿಕೊಂಡು ಕಣಕ್ಕೆ ಇಳಿದಿತ್ತು. ಆದರೆ ಆಸ್ಟ್ರೇಲಿಯಾದ ಕರಾರುವಕ್ ಬೌಲಿಂಗ್ ಗೆ ಸೌತ್ ಆಫ್ರಿಕಾ ತಂಡವು ಕೇವಲ 89 ರನ್ಗಳಿಗೆ ತನ್ನ ಇನ್ನಿಂಗ್ಸ್ ಆಟವನ್ನು ಮುಗಿಸಿತು. ಆಸ್ಟ್ರೇಲಿಯ ತಂಡವು ಮೊದಲನೇ ಪಂದ್ಯದಲ್ಲಿ ಗೆಲ್ಲುವ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.