ವಿಡಿಯೋ ನೋಡಿ ! ಪಂದ್ಯ ಟೈ, ಸೂಪರ್ ಓವರ್ ನಲ್ಲಿ 2 ಎಸೆತಗಳಲ್ಲಿ ಬೇಕು 10 ರನ್ ! ಎರಡು ಭರ್ಜರಿ ಸಿಕ್ಸರ್ ಗಳ ಮೂಲಕ ರೋಹಿತ್ ಶರ್ಮಾ ಮ್ಯಾಚ್ ಫಿನಿಶ್ ಮಾಡಿದ್ದು ಹೇಗೆ ಗೊತ್ತಾ??

ವಿಡಿಯೋ ನೋಡಿ ! ಪಂದ್ಯ ಟೈ, ಸೂಪರ್ ಓವರ್ ನಲ್ಲಿ 2 ಎಸೆತಗಳಲ್ಲಿ ಬೇಕು 10 ರನ್ ! ಎರಡು ಭರ್ಜರಿ ಸಿಕ್ಸರ್ ಗಳ ಮೂಲಕ ರೋಹಿತ್ ಶರ್ಮಾ ಮ್ಯಾಚ್ ಫಿನಿಶ್ ಮಾಡಿದ್ದು ಹೇಗೆ ಗೊತ್ತಾ??

ನಮಸ್ಕಾರ ಸ್ನೇಹಿತರೇ, ಇಂದು ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ನಡೆದ ಮೂರನೇ ಟಿ20 ಪಂದ್ಯ ಟೈ ಆಯಿತು. ಪಂದ್ಯ ಇನ್ನೇನು ಕೈ ಜಾರಿ ಹೋಯಿತು ಎನ್ನುವಷ್ಟರಲ್ಲಿ ಮೊಹಮ್ಮದ್ ಶಮಿ ಅವರು ಕೊನೆಯ ನಾಲ್ಕು ಎಸೆತಗಳಲ್ಲಿ ಕೇವಲ ಎರಡು ರನ್ಗಳು ನೀಡುವ ಮೂಲಕ ಪಂದ್ಯ ಟೈ ಮಾಡಿಸಿ ಭಾರತಕ್ಕೆ ಗೆಲ್ಲುವ ಆಸೆಯನ್ನು ಮುಂದಿಟ್ಟರು.

ಇನ್ನು ಸೂಪರ್ ಓವರ್ನಲ್ಲಿ ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಆರಂಭಿಕ ಬ್ಯಾಟ್ಸ್ಮನ್ ಮಾರ್ಟಿನ್ ಗಪ್ಟಿಲ್ ರವರು ವಿಶ್ವದಲ್ಲಿಯೇ ಅದ್ಭುತ ಬೌಲರ್ ಎನಿಸಿಕೊಂಡಿರುವ ಜಸ್‌ಪ್ರೀತ್ ಬುಮ್ರಾ ರವರ ಓವರ್ ನಲ್ಲಿ ಬರೋಬ್ಬರಿ 17 ರನ್ ಗಳಿಸಿ ಭಾರತಕ್ಕೆ 18 ರನ್ ಗಳ ಟಾರ್ಗೆಟ್ ನೀಡಿದರು. ಮೊದಲ ಎರಡು ಎಸೆತಗಳಲ್ಲಿ ಮೂರು ರನ್ ಗಳಿಸಿದ ಶರ್ಮಾ, ವಿಶೇಷವಾಗಿ ಸೂಪರ್ ಓವರ್‌ನಲ್ಲಿ ತಮ್ಮ ತಂಡಕ್ಕೆ ಉತ್ತಮ ಆರಂಭವನ್ನು ನೀಡಲಿಲ್ಲ. ಲೋಕೇಶ್ ರಾಹುಲ್ ನ್ಯೂಜಿಲೆಂಡ್‌ನ ಸೀಮರ್ ಟಿಮ್ ಸೌಥೀ ಅವರ ಮೊದಲ ಎಸೆತವನ್ನು ಬೌಂಡರಿಗೆ ಕಳುಹಿಸಿ ಎರಡನೇ ಎಸೆತದಲ್ಲಿ ಸಿಂಗಲ್ ರನ್ ತೆಗೆದುಕೊಂಡಾಗ,ಕೊನೆಯದಾಗಿ ಭಾರತ ತಂಡ ಗೆಲ್ಲಬೇಕು ಎಂದರೇ ಕೊನೆಯ ಎರಡು ಎಸೆತಗಳಲ್ಲಿ 10 ರನ್ಗಳ ಅಗತ್ಯವಿತ್ತು.

ಆದರೆ ಮೊದಲ ಎರಡು ಎಸೆತಗಳ ಬಗ್ಗೆ ಅಚಾತುರ್ಯ ತೋರಿದ ರೋಹಿತ್ ಶರ್ಮ ರವರು ಕೊನೆಯ ಎರಡು ಎಸೆತಗಳಲ್ಲಿ ಸತತ ಎರಡು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಜಯ ತಂದುಕೊಟ್ಟರು. ಮೇಲಿನ ಟ್ವೀಟ್ ನಲ್ಲಿ ವಿಡಿಯೋ ಸೇರಿಸಲಾಗಿದೆ ಒಮ್ಮೆ ನೋಡಿ.