ಶಹಬಾಸ್ ಸರ್: ಸುಷ್ಮಾ ರವರ ಹಾದಿಯಲ್ಲಿ ಗೌತಮ್ ! ಪಾಕಿಸ್ತಾನದ ಪುಟ್ಟ ಬಾಲಕಿ ಗೆ ಸಹಾಯ ಮಾಡಿ ಕವನ ಬರೆದು ಸ್ವಾಗತ ಮಾಡಿದ್ದು ಹೇಗೆ ಗೊತ್ತಾ??

ಇತ್ತೀಚಿಗಷ್ಟೇ ನಮ್ಮೆಲ್ಲರನ್ನು ಅಗಲಿ ಸ್ವರ್ಗ ಸೇರಿಕೊಂಡಿರುವ ಸುಷ್ಮಾ ಸ್ವರಾಜ್ ಅವರ ಬಗ್ಗೆ ನಿಮಗೆಲ್ಲರಿಗೂ ತಿಳಿದೇ ಇದೆ. ನರೇಂದ್ರ ಮೋದಿ ರವರ ಸರ್ಕಾರದಲ್ಲಿ ವಿದೇಶಾಂಗ ಸಚಿವೆಯಾಗಿ ಕಾರ್ಯ ನಿರ್ವಹಿಸಿದ ಸುಷ್ಮಾ ಸ್ವರಾಜ್ ಅವರು ಇಡೀ ವಿಶ್ವಕ್ಕೆ ಮಾದರಿಯಾಗಿ ನಿಂತಿದ್ದರು. ನೀವು ಯಾವುದೇ ದೇಶದ ಪ್ರಜೆಗಳೇ ಆಗಿರಲಿ ಭಾರತೀಯ ಸರ್ಕಾರದಿಂದ ಯಾವುದೇ ಕಾರ್ಯಗಳು ನಿಮಗೆ ಆಗಬೇಕಾಗಿರಲಿ ನೀವು ಕಷ್ಟದಲ್ಲಿ ಇದ್ದೀರಿ ಎಂದು ತಿಳಿದ ತಕ್ಷಣ ಸುಷ್ಮಾ ಸ್ವರಾಜ್ ಅವರ ಹೃದಯ ನಿಮಗೆ ಸ್ಪಂದಿಸುತ್ತಿತ್ತು. ಕ್ಷಣ ಮಾತ್ರದಲ್ಲಿ ನಿಮಗೆ ಕಾನೂನು ರೀತಿಯಲ್ಲಿ ಸಹಾಯ ಮಾಡಿ ಎಲ್ಲರ ಕಷ್ಟವನ್ನು ನಿವಾರಣೆ ಮಾಡಿ ಸಂತೋಷ ಪಡುತ್ತಿದ್ದರು ಸುಷ್ಮ ಸ್ವರಾಜ್. ಅದರಲ್ಲಿಯೂ ವಿದೇಶಗಳಲ್ಲಿ ಯಾವುದೇ ಭಾರತೀಯರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದ ತಕ್ಷಣ ಕಾರ್ಯ ಪ್ರವೃತ್ತರಾಗುತಿದ್ದ ಸುಷ್ಮಾ ಸ್ವರಾಜ್ ಅವರು ಎಲ್ಲಾ ಭಾರತೀಯರು ಯಾವುದೇ ತೊಂದರೆ ಇಲ್ಲದೆ ಭಾರತದ ಗಡಿ ದಾಟುವವರೆಗೂ ನಿದ್ದೆ ಊಟ ಬಿಟ್ಟು ಕೆಲಸ ಮಾಡುತ್ತಿದ್ದರು. ಇಂಥವರನ್ನು ಭಾರತೀಯರು ಕೇವಲ ಕೆಲವೇ ಕೆಲವು ದಿನಗಳ ಹಿಂದಷ್ಟೇ ಕಳೆದುಕೊಂಡು ಅನಾಥರಾಗಿದ್ದರು.

ಆದರೆ ಇದೀಗ ಇವರ ಹಾದಿಯಲ್ಲಿ ಮತ್ತೊಬ್ಬ ಬಿಜೆಪಿ ಸಂಸದ ನಡೆಯುತ್ತಿದ್ದಾರೆ. ಒಂದು ವೇಳೆ ಸುಷ್ಮ ಸ್ವರಾಜ್ ರವರು ಇಂದು ನಮ್ಮ ಜೊತೆ ಇದ್ದರೆ ಅವರು ಯಾವ ರೀತಿಯ ಕಾರ್ಯ ಪ್ರವೃತ್ತಿಯಿಂದ ಸಮಸ್ಯೆಗಳನ್ನು ನಿರ್ವಹಣೆ ಮಾಡುತ್ತಿದ್ದರೋ ಅದೇ ರೀತಿಯ ನಡೆಯನ್ನು ಇದೀಗ ಬಿಜೆಪಿ ಸಂಸದರಾಗಿರುವ ಭಾರತ ತಂಡದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರು ಅನುಸರಿಸಿದ್ದಾರೆ. ಈ ವಿಷಯ ಇದೀಗ ಹೊರಬಂದಿದ್ದು ಗೌತಮ್ ಗಂಭೀರ್ ಅವರ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ಸದಾ ದೇಶದ ವಿರುದ್ಧ ಮಾತನಾಡಿ ಪಾಕಿಸ್ತಾನದ ವಿರುದ್ಧ ಕಿಡಿ ಕಾರುವ ಗೌತಮ್ ಗಂಭೀರ್ ಅವರು ಇಂದು ಪಾಕಿಸ್ತಾನದ ಪುಟ್ಟ ಬಾಲಕಿಯ ಸಮಸ್ಯೆಗೆ ಸ್ಪಂದಿಸಿ ನೆರವು ನೀಡಿರುವುದು ಭಾರಿ ಪ್ರಶಂಸೆಗೆ ಒಳಗಾಗಿದೆ. ವಿಪರ್ಯಾಸವೆಂದರೆ ಈ ರೀತಿಯ ಸುದ್ದಿಗಳು ಯಾವ ಮಾಧ್ಯಮಗಳಲ್ಲಿಯೂ ಪ್ರಸಾರವಾಗುತ್ತಿಲ್ಲ.

ಹೌದು,ಇತ್ತೀಚೆಗೆ ಪಾಕಿಸ್ತಾನದ ಆರು ವರ್ಷದ ಪುಟ್ಟ ಬಾಲಕಿಗೆ ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಂಡಿದೆ. ಇಡೀ ಪಾಕಿಸ್ತಾನ ದೇಶದಲ್ಲಿ ಹೃದಯ ಸಂಬಂಧಿತ ಕಾಯಿಲೆಗೆ ಚಿಕಿತ್ಸೆ ದೊರೆಯದೆ ಪುಟ್ಟ ಬಾಲಕಿ ಪರದಾಡಿದ್ದಾರೆ. ಈ ಹೃದಯ ಸಂಬಂಧಿ ಸಮಸ್ಯೆಗೆ ಭಾರತ ದೇಶದಲ್ಲಿ ಚಿಕಿತ್ಸೆ ನೀಡುವ ಕಾರಣ ಕಾನೂನಿನ ಪ್ರಕಾರ ಈ ಪುಟ್ಟ ಬಾಲಕಿಯ ಕುಟುಂಬ ವೀಸಾ ಕೋರಿ ಭಾರತದ ನೆರವು ಕೋರಿದ್ದಾರೆ. ಆದರೆ ಇತ್ತೀಚಿಗೆ ಭಾರತ ಹಾಗೂ ಪಾಕಿಸ್ತಾನದ ಸಂಬಂಧ ಹದಗೆಟ್ಟಿರುವ ಕಾರಣ ಏಕಾಏಕಿ ಪುಟ್ಟ ಬಾಲಕಿಯ ವೀಸಾ ತಿರಸ್ಕರಿಸಿ ಅಧಿಕಾರಿಗಳು ತಪ್ಪೆಸಗಿದ್ದಾರೆ. ಈ ವಿಷಯ ಅದೇಗೋ ಗೌತಮ್ ಗಂಭೀರ್ ಅವರನ್ನು ತಲುಪಿದೆ. ವಿಷಯ ತಿಳಿದ ಕೂಡಲೇ ಗೌತಮ್ ಗಂಭೀರ್ ಅವರು ಮುತುವರ್ಜಿ ವಹಿಸಿ ಭಾರತದ ವಿದೇಶಾಂಗ ಸಚಿವರಾಗಿರುವ ಜೈ ಶಂಕರ್ ರವರಿಗೆ ಪತ್ರ ಬರೆದು ಮನವಿ ಮಾಡಿ ಬಾಲಕಿಯ ಸಂಪೂರ್ಣ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಇನ್ನು ಗೌತಮ್ ಗಂಭೀರ್ ರವರ ಮನವಿಗೆ ಪ್ರತಿಕ್ರಿಯೆ ನೀಡಿರುವ ಜೈಶಂಕರ್ ರವರು ಬಾಲಕಿ ಸೇರಿದಂತೆ ಕುಟುಂಬದವರಿಗೆ ಭಾರತಕ್ಕೆ ಬರಲು ಅಗತ್ಯ ವೀಸಾ ನೀಡಿದ್ದಾರೆ.

ಇದೇ ವಿಷಯವನ್ನು ಇಂದು ಬಹಿರಂಗಪಡಿಸಿರುವ ಗೌತಮ್ ಗಂಭಿರ್ ನಾನು ಸದಾ ಪಾಕಿಸ್ತಾನದ ವಿರುದ್ಧ ಧ್ವನಿ ಎತ್ತುತ್ತೇನೆ, ಆದರೆ ಪಾಕಿಸ್ತಾನದ ಆರು ವರ್ಷದ ಪುಟ್ಟ ಬಾಲಕಿಗೆ ಭಾರತದಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದರೇ ಅದಕ್ಕಿಂತ ಮಹತ್ವದ ಹಾಗೂ ಸಂತಸದ ಸಂಗತಿ ಮತ್ತೊಂದಿಲ್ಲ. ಹಾಗಾಗಿ ನಾನು ವಿದೇಶಾಂಗ ಸಚಿವರ ಬಳಿ ಮನವಿಯನ್ನು ಮಾಡಿಕೊಂಡೆ. ಇದಕ್ಕೆ ಜೈಶಂಕರ್ ಅವರು ಕೂಡಲೇ ಸ್ಪಂದಿಸಿ ವೀಸಾ ನೀಡಿದರು, ಇದಕ್ಕಾಗಿ ನಾನು ನರೇಂದ್ರ ಮೋದಿ, ಅಮಿತ್ ಶಾ ಹಾಗೂ ವಿದೇಶಾಂಗ ಸಚಿವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದಿದ್ದಾರೆ. ಇನ್ನು ಪುಟ್ಟ ಬಾಲಕಿಯನ್ನು ಸ್ವಾಗತಿಸಿ ಕವನವನ್ನು ರಚಿಸಿರುವ ಗೌತಮ್ ಗಂಭೀರ್ ಅವರು, ಗಡಿಯಾಚೆಗಿಂದ ಪುಟಾಣಿ ಹೃದಯ ನನ್ನನ್ನು ಸಂಪರ್ಕ ಮಾಡಿ ಸಹಾಯವನ್ನು ಯಾಚಿಸಿದಾಗ ನನ್ನ ಹೃದಯ ಎಲ್ಲಾ ಅಡೆತಡೆಗಳನ್ನು ದ್ವೇಷಾಸೂಯೆಗಳನ್ನು ಮರೆತು ಸ್ಪಂದನೆ ನೀಡಿದೆ. ಹೆಜ್ಜೆಯ ಮೇಲೆ ಹೆಜ್ಜೆಯನ್ನಿಟ್ಟು ಭರತ ಭೂಮಿಯ ಮೇಲೆ ಕಾಲಿರಿಸಿದ ಬಾಲಕಿ ತನ್ನ ಜೊತೆಗೆ ಪ್ರೀತಿಯ ಸವಿಯನ್ನು ಹೊತ್ತುಕೊಂಡು ತಂದಿದ್ದಾಳೆ. ನನಗಂತೂ ನನ್ನ ಪುತ್ರಿ ಮನೆಗೆ ಬಂದಂತೆ ಭಾಸವಾಯಿತು ಎಂದು ಟ್ವೀಟ್ ಮಾಡಿದ್ದಾರೆ.

Post Author: Ravi Yadav