ಮತ್ತೊಮ್ಮೆ ಆರ್ಸಿಬಿ ಅಭಿಮಾನಿಗಳ ಮನಗೆದ್ದ ಎಬಿಡಿ ! ಟಿ-20ವಿಶ್ವಕಪ್ ಗೆ ವಾಪಸ್ಸು ಬರುವ ಕುರಿತು ತಯಾರಿಯ ಬಗ್ಗೆ ಕೇಳಿದ ಪ್ರಶ್ನೆಗೆ ಎಬಿಡಿ ಉತ್ತರ ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ವಿಶ್ವದ ಖ್ಯಾತ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ ಎಬಿ ಡಿವಿಲಿಯರ್ಸ್ ಹಾಗೂ ಬೆಂಗಳೂರು ತಂಡದ ನಡುವಿನ ಬಾಂಧವ್ಯದ ಬಗ್ಗೆ ನಿಮಗೆ ಹೆಚ್ಚಾಗಿ ಹೇಳುವ ಅವಶ್ಯಕತೆ ಇಲ್ಲ ಎನಿಸುತ್ತದೆ.

ಬೆಂಗಳೂರು ನನ್ನ ಎರಡನೇ ತವರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಎಬಿ ಡಿವಿಲಿಯರ್ಸ್ ರವರನ್ನು ಬೆಂಗಳೂರಿನ ಜನತೆ ಕೂಡ ಬಹಳ ಗೌರವ ನೀಡಿ ಈತ ನಮ್ಮ ಆಟಗಾರ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಹಲವಾರು ಕಾರಣಗಳಿಂದ‌ ಎಬಿ ಡಿವಿಲಿಯರ್ಸ್ ಹಾಗೂ ಆರ್ಸಿಬಿ ತಂಡ ಹಾಗೂ ಅಭಿಮಾನಿಗಳ ನಡುವೆ ಅವಿನಾಭಾವ ಸಂಬಂಧ ಏರ್ಪಟ್ಟಿದೆ. ಇದೀಗ ಇದಕ್ಕೆ ಮತ್ತಷ್ಟು ಪೂರಕವಾಗಿ ಎಬಿ ಡಿವಿಲಿಯರ್ಸ್ ರವರನ್ನು ಪತ್ರಕರ್ತರೊಬ್ಬರು ನೀವು ಮುಂದಿನ ವಿಶ್ವಕಪ್ ನಲ್ಲಿ ನಿಮ್ಮ ನಿವೃತ್ತಿ ವಾಪಸ್ಸು ಪಡೆದು ಕೊಂಡು ಆಟ ಆಡುತ್ತೀರಾ ಎಂಬ ಮಾತುಗಳು ಕೇಳಿಬರುತ್ತಿವೆ, ಇದಕ್ಕೆ ನಿಮ್ಮ ಪ್ರತಿಕ್ರಿಯೆ ಹಾಗೂ ಇದಕ್ಕಾಗಿ ನೀವು ನಡೆಸುತ್ತಿರುವ ತಯಾರಿಯ ಬಗ್ಗೆ ವಿವರಿಸಿ ಎಂದು ಪ್ರಶ್ನೆ ಮಾಡುತ್ತಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಎಬಿ ಡಿವಿಲಿಯರ್ಸ್ ರವರು, ಹೌದು ಮುಂದಿನ ವಿಶ್ವಕಪ್ ಗೆಲ್ಲುವುದು ಮುಖ್ಯ, ಆದರೆ ಅದಕ್ಕಿಂತ ಮುನ್ನ ಆರಂಭವಾಗುವ ಐಪಿಎಲ್ ಟೂರ್ನಿ ಕುರಿತು ಮಾತ್ರ ನಾನು ಇದೀಗ ತಯಾರಿ ನಡೆಸಿದ್ದೇನೆ, ನನ್ನ ಮುಂದಿನ ಬದ್ಧತೆ ಕೇವಲ ಆರ್ಸಿಬಿ ತಂಡ, ಅಲ್ಲಿ ಉತ್ತಮ ಪ್ರದರ್ಶನ ನೀಡಿ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಬೇಕು. ಕೊರೊನ ಪ್ರಭಾವದಿಂದ ಪಂದ್ಯಗಳು ಮುಂದೂಡಲ್ಪಟ್ಟಿರುವುದು ನಿಜ, ಆದರೆ ಪಂದ್ಯ ಯಾವ ಕ್ಷಣದಲ್ಲಿ ಬೇಕಾದರೂ ಆರಂಭವಾದರೂ ನಾನು ಆಟವಾಡಲು ಸಿದ್ಧವಿದ್ದೇನೆ. ಕೇವಲ ಐಪಿಎಲ್ ಮಾತ್ರ ಗಮನದಲ್ಲಿಟ್ಟು ಕೊಂಡು ನಾನು ಸಿದ್ಧತೆ ನಡೆಸಿದ್ದೇನೆ ಹೊರತು ವಿಶ್ವಕಪ್ ಕುರಿತು ಅಲ್ಲ.

ನನ್ನ ಮೊದಲ ಆದ್ಯತೆ ಆರ್ಸಿಬಿ ತಂಡ, ಅಲ್ಲಿ ಉತ್ತಮ ಪ್ರದರ್ಶನ ನೀಡುವುದು ಬಹಳ ಮುಖ್ಯವಾಗಿದೆ. ತಂಡಕ್ಕೆ ಅಗತ್ಯವಿದ್ದ ಅಂತಹ ಸಮಯದಲ್ಲಿ ಉತ್ತಮ ಪ್ರದರ್ಶನ ನೀಡುವುದು ನನ್ನ ಜವಾಬ್ದಾರಿಯಾಗಿದೆ ಎಂದು ಮೊದಲ ಆದ್ಯತೆಯಲ್ಲಿ ಆರ್ಸಿಬಿ ತಂಡವನ್ನು ಆಯ್ಕೆಮಾಡುವ ಮೂಲಕ ಮತ್ತೊಮ್ಮೆ ಅಭಿಮಾನಿಗಳ ಮನ ಗೆದ್ದಿದ್ದಾರೆ.

Facebook Comments

Post Author: RAVI