ಭಾರತದ 2 ನೇ ಶ್ರೀಮಂತ ವ್ಯಕ್ತಿ ಏಕಾಏಕಿ 17 ನೇ ಸ್ಥಾನಕ್ಕೆ ಕುಸಿಯಲು ಕಾರಣ ಕೇಳಿದರೆ ಸೆಲ್ಯೂಟ್ ಹೊಡೆಯುತ್ತೀರಾ !! ವಿಪ್ರೋ ಅಧ್ಯಕ್ಷರ ಸಂಪತ್ತು ಕುಸಿಯಲು ಕಾರಣವೇನು ಗೊತ್ತಾ??

ಅಜೀಮ್ ಪ್ರೇಮ್‌ಜಿ ರವರ ಬಗ್ಗೆ ಈಗಾಗಲೇ ನಿಮಗೆಲ್ಲರಿಗೂ ತಿಳಿದೇ ಇದೆ. ಸದಾ ತಮ್ಮನ್ನು ತಾವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಅಜೀಮ್ ಪ್ರೇಮ್‌ಜಿ ರವರು, ದಾನ ಮಾಡುವುದರಲ್ಲಿ ಎತ್ತಿದ ಕೈ. ಅದೇ ಕಾರಣಕ್ಕಾಗಿ ದೇಶದ ಅತಿ ಶ್ರೀಮಂತ ಎಂಬ ಪಟ್ಟಕ್ಕೆ ಏರಲು ಇವರಿಗೆ ಸಾಧ್ಯವಾಗುತ್ತಿಲ್ಲ. ಬಂದ ಹಣವನ್ನು ಸದಾ ಸಮಾಜಮುಖಿ ಕಾರ್ಯಗಳಲ್ಲಿ ಬಳಸುತ್ತಾರೆ, ಇದರಿಂದ ದಿನೇ ದಿನೇ ಇವರ ಸಂಪತ್ತು ಕರಗುತ್ತದೆ ಎಂದು ನಿಮಗೆಲ್ಲರಿಗೂ ತಿಳಿದೇ ಇರುತ್ತದೆ. ಆದರೂ ಸಹ ಇಷ್ಟು ವರ್ಷ ಅಜೀಮ್ ಪ್ರೇಮ್‌ಜಿ ರವರು ದೇಶದ ಶ್ರೀಮಂತರ ಪಟ್ಟಿಯಲ್ಲಿ ಕನಿಷ್ಠ ಹತ್ತರ ಒಳಗೆ ಸ್ಥಾನ ಪಡೆಯುತ್ತಿದ್ದರು. ಕಳೆದ ವರ್ಷವೂ ಸಹ ಇದೇ ರೀತಿ ಊಹಿಸಿದಂತೆ ಅಂಬಾನಿ ನಂತರದ ಸ್ಥಾನ ಅಂದರೇ ದೇಶದ ಎರಡನೇ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಬಹುಶಃ ಇದು ಅಜೀಮ್ ಪ್ರೇಮ್‌ಜಿ ರವರಿಗೆ ಸಂತೋಷ ನೀಡಿದಂತೆ ಕಾಣುತಿಲ್ಲ.

ಅದೇ ಕಾರಣಕ್ಕಾಗಿ ಇದೀಗ ಬಿಡುಗಡೆಗೊಂಡ ದೇಶದ ಶ್ರೀಮಂತರ ಪಟ್ಟಿಯಲ್ಲಿ 17 ಸ್ಥಾನ ಪಡೆದುಕೊಂಡಿದ್ದಾರೆ. ಇದರಿಂದ ತಮಗೆ ಬಹಳ ಸಂತೋಷವಾಗಿದೆ ಎಂದು ಹೇಳಿಕೊಂಡಿದ್ದಾರೆ. ಅದೇನಪ್ಪ ಆಸ್ತಿ ಕಳೆದು ಕೊಂಡರೆ ಯಾಕೆ ಸಂತೋಷ ಎನ್ನುತ್ತೀರಾ? ಕಾರಣ ತಿಳಿದರೇ ಪ್ರಶ್ನೆ ಮಾಡುವುದಲ್ಲ ಬದಲಾಗಿ ಸಲ್ಯೂಟ್ ಹೊಡೆಯುತ್ತೀರಾ.ಅಜೀಮ್ ಪ್ರೇಮ್‌ಜಿ ರವರ ಒಟ್ಟು ಆಸ್ತಿಯ ಮೌಲ್ಯ ಬರೋಬ್ಬರಿ 21 ಬಿಲಿಯನ್ ಗಳಾಗಿತ್ತು. ಆದರೆ ಈ ಬಾರಿ ಕೇವಲ 7.೨ ಬಿಲಿಯನ್ ಗಳಿಗೆ ಇಳಿದಿದೆ ಯಾಕೆಂದರೆ ಅಜೀಮ್ ಪ್ರೇಮ್‌ಜಿ ರವರು ತಮ್ಮ ಆಸ್ತಿಯ ಬಹುಪಾಲು ಮೌಲ್ಯವನ್ನು ದಾನದ ರೂಪದಲ್ಲಿ ಚಾರಿಟಿಗಳಿಗೆ ನೀಡಿದ್ದಾರೆ. ಈ ವಿಷಯ ಇದೀಗ ಬಹಿರಂಗಗೊಂಡಿದ್ದು ಅಜೀಮ್ ಪ್ರೇಮ್‌ಜಿ ರವರ ಈ ನಡೆಗೆ ಬಾರಿ ಪ್ರಶಂಸೆಗಳು ವ್ಯಕ್ತವಾಗಿವೆ. ಹಣ ಹೆಚ್ಚು ಇದ್ದಷ್ಟು ಮತ್ತಷ್ಟು ಆಸೆ ಪಡುವ ಜನರ ನಡುವೆ ಅಜೀಮ್ ಪ್ರೇಮ್‌ಜಿ ರವರು ಪ್ರತ್ಯೇಕ ಸ್ಥಾನದಲ್ಲಿ ನಿಂತಿದ್ದಾರೆ.

Facebook Comments

Post Author: Ravi Yadav