ಕಸದ ತೊಟ್ಟಿಯಲ್ಲಿದ ಹೆಣ್ಣು ಮಗು ಈಗ ಏನು ಮಾಡುತ್ತಿದ್ದಾರೆ ಗೊತ್ತಾ??

ಅದೇಕೋ ಹಲವಾರು ವರ್ಷಗಳು ಕಳೆದರೂ, ಜನರು ಎಷ್ಟೇ ಬುದ್ದಿವಂತರರಾದರೂ ಸಹ ಇನ್ನೂ ಕೆಲವು ಪೋಷಕರು ಹೆಣ್ಣು ಮಕ್ಕಳನ್ನು ತಮ್ಮ ಕುಟುಂಬಕ್ಕೆ ಭಾರವಾಗುತ್ತಾರೆ ಎಂದು ಭಾವಿಸುತ್ತಾರೆ. ಜನರು ಇಷ್ಟೆಲ್ಲಾ ವಿದ್ಯಾವಂತರಾಗಿರುವ ಸಮಯದಲ್ಲೂ ಸಹ ಹೆಣ್ಣುಮಕ್ಕಳು ಇಂದಿಗೂ ಕೆಲವು ಪೋಷಕರಿಗೆ ತಲೆನೋವಾಗಿ ಪರಿಣಮಿಸುತ್ತಾರೆ ಎಂಬ ಮನೋಭಾವಣೆಗಳು ದೂರವಾಗಿಲ್ಲ. ಹೆಣ್ಣನ್ನು ಪೂಜಿಸುವ ಈ ದೇಶದಲ್ಲಿ ಹೆಣ್ಣು ಮಕ್ಕಳು ಹುಟ್ಟಿದರೆ ಕಸದ ತೊಟ್ಟಿಗೆ ಬಿಸಾಡಿ ಹೋಗುವ ಜನ ಇನ್ನೂ ಇದ್ದಾರೆ. ಇದೇ ರೀತಿ ಹಲವಾರು ವರ್ಷಗಳ ಹಿಂದೆ ಕಸದ ತೊಟ್ಟಿಯಲ್ಲಿ ಬಿದ್ದಿದ್ದ ನವಜಾತ ಶಿಶುವನ್ನು ಕಂಡ ಸ್ಥಳೀಯರು ಸಂರಕ್ಷಣಾ ಕೇಂದ್ರಕ್ಕೆ ಒಪ್ಪಿಸಿದ್ದರು. ತದನಂತರ ಈಗಾಗಲೇ ತಮಗೆ ಮೂವರು ಮಕ್ಕಳಿದ್ದರೂ ಸಹ ಮಿಥುನ್ ಚಕ್ರವರ್ತಿ ಹಾಗೂ ಯೋಗಿತಾ ಬಾಲಿ ದಂಪತಿಗಳು ಹೆಣ್ಣು ಮಗುವನ್ನು ದತ್ತು ಪಡೆದುಕೊಂಡು ಸ್ವಂತ ಮಕ್ಕಳಿಗಿಂತ ಹೆಚ್ಚಾಗಿ ನಿಶಾನಿ ಎಂದು ಹೆಸರಿಟ್ಟು ಪ್ರೀತಿಯನ್ನು ದಾರೆ ಎಳೆಯುತ್ತಾರೆ.

ಬಾಲಿವುಡ್ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಮಿಥುನ್ ಚಕ್ರವರ್ತಿ ರವರ ದತ್ತು ಪುತ್ರಿ ನಿಶಾ ನೀರ್ ಅವರು ಇದೀಗ ಬಣ್ಣದ ಲೋಕಕ್ಕೆ ಎಂಟ್ರಿ ಕೊಡಲು ಸಿದ್ದವಾಗಿದ್ದಾರೆ. ಈಗಾಗಲೇ ಸಕಲ ತರಬೇತಿಗಳನ್ನು ವಿದೇಶದಲ್ಲಿ ಪಡೆದುಕೊಂಡಿರುವ ದಿಶಾನಿ ರವರು ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈಗಾಗಲೇ ಬಾಲಿವುಡ್ ಅಂಗಳದಲ್ಲಿ ನಿಶಾ ನೀರ್  ರವರ ಆಗಮನಕ್ಕೆ ವೇದಿಕೆ ಸಿದ್ಧವಾಗಿದೆ. ಅಂದು ಕಸದ ಬುಟ್ಟಿಯಲ್ಲಿ ಸಿಕ್ಕಿದ ಶಿಶು ಇಂದು ಬಾಲಿವುಡ್ ಅಂಗಳದಲ್ಲಿ ಮಿಂಚಲು ಸಿದ್ಧವಾಗಿದೆ. ತಮಗೆ ಅಷ್ಟರಲ್ಲಾಗಲೇ ಮೂವರು ಮಕ್ಕಳಿದ್ದರೂ ಸಹ  ದತ್ತು ತೆಗೆದುಕೊಂಡು ಸ್ವಂತ ಮಗಳ ಹಾಗೆ ಸಾಕಿ ಬೆಳೆಸಿದ ಮಿಥುನ್ ಚಕ್ರವರ್ತಿ ದಂಪತಿಗಳಿಗೆ ಧನ್ಯವಾದಗಳು

Facebook Comments

Post Author: RAVI