Kannada cricket: ಪಂತ್: ದಿನೇಶ್ ಇಬ್ಬರು ತಂಡದಲ್ಲಿ ಆಡಲೇಬೇಕು: ವಿಶ್ವಕಪ್ ಶುರುವಾದರೂ ದ್ರಾವಿಡ್, ರೋಹಿತ್ ಗೆ ಮುಗಿಯದ ಟೆನ್ಶನ್; ಏನಾಗಿದೆ ಗೊತ್ತೇ??

ಟಿ20 ವಿಶ್ವಕಪ್ ನಲ್ಲಿ ಭಾರತ ತಂಡ ತಮ್ಮ ಮೊದಲ ಪಂದ್ಯವನ್ನಾಡಲು ಉಳಿದಿರುವುದು 2 ದಿನಗಳು ಮಾತ್ರ. ಭಾನುವಾರ ಅಕ್ಟೋಬರ್ 23ರಂದು ಮೊದಲ ಪಂದ್ಯವನ್ನು ಪಾಕಿಸ್ತಾನ್ ವಿರುದ್ಧ ಆಡಲಿದೆ ಭಾರತ. ಬದ್ಧವೈರಿಗಳ ನಡುವೆ ನಡೆಯುವ ಈ ರೋಚಕ ಪಂದ್ಯವನ್ನು ಕಣ್ತುಂಬಿಕೊಳ್ಳಲು ವಿಶ್ವಾದ್ಯಂತ ಕ್ರಿಕೆಟ್ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಕೋಚ್ ರಾಹುಲ್ ದ್ರಾವಿಡ್ ಮತ್ತು ಕ್ಯಾಪ್ಟನ್ ರೋಹಿತ್ ಶರ್ಮಾ ಇಬ್ಬರು ಸಹ ಭಾರತ ಗೆಲುವಿನಿಂದಲೇ ಟೂರ್ನಿ ಆರಂಭಿಸಬೇಕು ಎಂದು ಪಣ ತೊಟ್ಟಿದ್ದರು ಸಹ, ಇನ್ನೇನು ಮ್ಯಾಚ್ ಶುರುವಾಗಲು ಕೆಲವೇ ಸಮಯ ಇದ್ದರು, ಪ್ಲೇಯಿಂಗ್ 11 ವಿಚಾರದಲ್ಲಿ ಕೆಲವು ಗೊಂದಲಗಳು ಈಗಲೂ ಇದೆ..

ಟೀಮ್ ಇಂಡಿಯಾ ಸ್ಕ್ವಾಡ್ ನಲ್ಲಿ ಇಬ್ಬರು ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಗಳಿದ್ದು, ಅವರಲ್ಲಿ ಪ್ಲೇಯಿಂಗ್ 11 ಗೆ ಯಾರನ್ನು ಆಯ್ಕೆ ಮಾಡುವುದು ಎನ್ನುವ ತಲೆನೋವಿಗೆ ಇನ್ನು ಸರಿಯಾದ ಉತ್ತರ ಸಿಕ್ಕಿಲ್ಲ. ಒಂದು ಕಡೆ ಅನುಭವಿ ಆಟಗಾರ, ಕಿಲ್ಲರ್ ಫಿನಿಷರ್ ದಿನೇಶ್ ಕಾರ್ತಿಕ್ ಅವರು, ಮತ್ತೊಂದು ಕಡೆ ಯುವ ಆಟಗಾರ ರಿಷಬ್ ಪಂತ್, ಇವರ ನಡುವೆ ಪ್ಲೇಯಿಂಗ್ 11 ನಲ್ಲಿ ಆಡುವುದು ಯಾರು ಎನ್ನುವ ಪ್ರಶ್ನೆಗೆ ಭಾರತದ ಮಾಜಿ ಆಟಗಾರ ಸುನೀಲ್ ಗವಾಸ್ಕರ್ ಅವರು ಉತ್ತರ ನೀಡಿದ್ದಾರೆ. ಗವಾಸ್ಕರ್ ಅವರು ಹೇಳಿರುವ ಹಾಗೆ ಮಾಡಿದರೆ, ದಿನೇಶ್ ಕಾರ್ತಿಕ್ ಮತ್ತು ರಿಷಬ್ ಪಂತ್ ಇಬ್ಬರು ಕೂಡ ಪ್ಲೇಯಿಂಗ್ 11 ನಲ್ಲಿ ಸ್ಥಾನ ಪಡೆಯಬಹುದು.. ಅದು ಹೇಗೆ ಎಂದು ತಿಳಿಸುತ್ತೇವೆ ನೋಡಿ..

ಈ ವಿಚಾರದ ಬಗ್ಗೆ ಮಾತನಾಡಿರುವ ಸುನೀಲ್ ಗವಾಸ್ಕರ್ ಅವರು, “ಟೀಮ್ ಇಂಡಿಯಾ ಬೌಲರ್ ಗಳಿಗೆ ಪ್ರಾಮುಖ್ಯತೆ ನೀಡಿ ಆಯ್ಕೆಮಾಡಿದರೆ, ರಿಷಬ್ ಪಂತ್ ಅವರಿಗೆ ಪ್ಲೇಯಿಂಗ್ 11ನಲ್ಲಿ ಸ್ಥಾನ ಸಿಗದೆ ಇರಬಹುದು. ಒಂದು ವೇಳೆ 5ನೇ ಬೌಲರ್ ಆಗಿ ಹಾರ್ದಿಕ್ ಪಾಂಡ್ಯ ಅವರನ್ನು ಆಯ್ಕೆಮಾಡಿದರೆ, ರಿಷಬ್ ಪಂತ್ ಅವರಿಗೆ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಸಿಗುತ್ತದೆ, ಹಾಗೂ 7ನೇ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್ ಬ್ಯಾಟಿಂಗ್ ಮಾಡಬಹುದು. ಇನ್ನುಳಿದ ಹಾಗೆ 4 ಬೌಲರ್ ಗಳು ಇರುತ್ತಾರೆ. ಈ ಅವಕಾಶ ಇದೆ, ಅದಕ್ಕಾಗಿ ನಾವು ಕಾಯಬೇಕು. ಒಳ್ಳೆ ಫಾರ್ಮ್ ನಲ್ಲಿರುವ ಲೆಫ್ಟ್ ಹ್ಯಾಂಡ್ ಬ್ಯಾಟ್ಸ್ಮನ್ ಅನ್ನು ಪ್ಲೇಯಿಂಗ್ 11ಗೆ ಸೇರಿಸಿಕೊಳ್ಳುವ ಯೋಜನೆ ಮ್ಯಾನೇಜ್ಮೆಂಟ್ ಗೆ ಇರುತ್ತದೆ. ರಿಷಬ್ ಎಷ್ಟು ಓವರ್ ಆಡುತ್ತಾರೆ? ಮೂರ್ನಾಲ್ಕು ಓವರ್ ಆಡಬಹುದೇ? ಮ್ಯಾನೇಜ್ಮೆಂಟ್ ಹೇಗೆ ನಿರ್ಧಾರ ಮಾಡುತ್ತದೆ ಎಂದು ಕಾದು ನೋಡಬೇಕಿದೆ..” ಎಂದು ಹೇಳಿದ್ದಾರೆ ಸುನೀಲ್ ಗವಾಸ್ಕರ್ ಅವರು.