ಒಂದು ಕಡೆ ಇಂಜುರಿ, ರೋಹಿತ್ ಶರ್ಮ ಫಾರ್ಮ್, ಸಾಲು ಸಾಲು ಸಮಸ್ಯೆಗಳ ನಡುವೆ ಪಾಕ್ ಪಂದ್ಯಕ್ಕೆ ಮಾಸ್ಟರ್ ಪ್ಲಾನ್ ಮಾಡಿದ ದ್ರಾವಿಡ್. ಏನು ಗೊತ್ತೇ??

ಟಿ20 ವಿಶ್ವಕಪ್ ನಲ್ಲಿ ಬದ್ಧವೈರಿಗಳಾದ ಭಾರತ ಮತ್ತು ಪಾಕಿಸ್ತಾನ್ ಮೈದಾನದಲ್ಲಿ ಮುಖಾಮುಖಿ ಆಗುವುದನ್ನು ನೋಡಲು ಇಡೀ ವಿಶ್ವದ ಕ್ರಿಕೆಟ್ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಪಾಕಿಸ್ತಾನ್ ತಂಡದಲ್ಲಿರುವ ಇಬ್ಬರು ಪ್ರಮುಖ ಪೇಸ್ ಬೌಲರ್ ಗಳಾದ ಶಾಹಿದ್ ಶಾ ಅಫ್ರಿದಿ ಮತ್ತು ನಸೀಮ್ ಶಾ, ಇವರಿಬ್ಬರು ಇರುವ ಶಕ್ತಿಯಿಂದ ಪಾಕಿಸ್ತಾನ್ ತಂಡವು, ಭಾರತವನ್ನು ಸೋಲಿಸುತ್ತೇವೆ ಎನ್ನುವ ಅತಿಯಾದ ಆತ್ಮವಿಶ್ವಾಸದಲ್ಲಿದೆ, ಆದರೆ ಈ ಬಾರಿ ಅದು ನಡೆಯವುದಕ್ಕೆ ಸಾಧ್ಯವಿಲ್ಲ, ಇನ್ನೊಂದು ಬಾರಿ ಪಾಕಿಸ್ತಾನ್ ಎದುರು ಭಾರತ ಸೋಲಬಾರದು ಎನ್ನುವುದಕ್ಕಾಗಿ ಕೋಚ್ ರಾಹುಲ್ ದ್ರಾವಿಡ್ ಅವರು ಮಾಸ್ಟರ್ ಪ್ಲಾನ್ ಮಾಡಿದ್ದಾರೆ.

ಕಳೆದ ವರ್ಷ ಟಿ20 ವರ್ಲ್ಡ್ ಕಪ್ ನಲ್ಲಿ ಭಾರತ ಪಾಕಿಸ್ತಾನ್ ಎದುರು ಸೋತಿತ್ತು, ಆ ಸೋಲಿಗೆ ಪ್ರಮುಖ ಕಾರಣ ಶಾಹಿನ್ ಶಾ ಅಫ್ರಿದಿ. ಈ ವರ್ಷ ನಡೆದ ಏಷ್ಯಾಕಪ್ ನಲ್ಲಿ ಅಫ್ರಿದಿ ಅವರು ತಂಡದಲ್ಲಿ ಇರದೇ ಇದ್ದರು ಸಹ 19 ವರ್ಷದ ಯುವ ಬೌಲರ್ ನಸೀಮ್ ಶಾ ಇಂದಾಗಿ ಭಾರತ ತಂಡವನ್ನು ಪಾಕಿಸ್ತಾನ್ ಮಣಿಸಿತು. ಈ ವಿಚಾರದಲ್ಲಿ ಒಂದು ಸಣ್ಣ ಆತಂಕ ಅಭಿಮಾನಿಗಳಲ್ಲಿ ಸಹ ಇದೆ. ನಮ್ಮ ತಂಡದಲ್ಲಿ ಬ್ಯಾಟಿಂಗ್ ಆರಂಭದಲ್ಲಿ ಕಳಪೆ ಪ್ರದರ್ಶನ, ಹಾಗು ಬೌಲಿಂಗ್ ಮಾಡುವಾಗ ಡೆತ್ ಓವರ್ ಬೌಲಿಂಗ್ ಸಮಸ್ಯೆ ಇಂತಹ ಕೆಲವು ಸಮಸ್ಯೆಗಳು ಇಂದಿಗೂ ಸಹ ಕಾಡುತ್ತಿದೆ. ಹಿಂದೆ ಪಾಕಿಸ್ತಾನ್ ವಿರುದ್ಧ ಸೋತಿರುವುದನ್ನು ಯಾವ ಒಬ್ಬ ಕ್ರಿಕೆಟ್ ಅಭಿಮಾನಿ ಸಹ ಮರೆತಿಲ್ಲ.

ಈ ಬಾರಿ ಭಾರತ ಗೆದ್ದು ಸೇಡು ತೀರಿಸಿಕೊಳ್ಳಬೇಕು ಎಂದು ಎಲ್ಲರೂ ಕಾಯುತ್ತಿದ್ದಾರೆ. ನಮ್ಮ ಭಾರತ ತಂಡದ ಬ್ಯಾಟ್ಸ್ಮನ್ ಗಳು ಪಾಕಿಸ್ತಾನದ ಆ ಇಬ್ಬರು ಬೌಲರ್ ಗಳ ಎದುರು ಕಷ್ಟಪಟ್ಟಿರುವುದನ್ನು ಅಭಿಮಾನಿಗಳು ಮತ್ತು ತಂಡ ಇಬ್ಬರು ನೋಡಿದ್ದು, ಆತಂಕದಲ್ಲಿದ್ದಾರೆ. ಇತ್ತ ಪಾಕಿಸ್ತಾನ್ ತಂಡ ಸಹಜ್ ಅವರಿಬ್ಬರನ್ನು ಅಸ್ತ್ರವಾಗಿ ಬಳಸಿ ಭಾರತ ತಂಡವನ್ನು ಸುಲಭವಾಗಿ ಸೋಲಿಸಬಹುದು ಎಂದುಕೊಂಡಿದ್ದಾರೆ. ಆದರೆ ಅದಕ್ಕೆಲ್ಲಾ ಕೌಂಟರ್ ಪ್ಲಾನ್ ಈಗಾಗಲೆ ತಯಾರಾಗಿದೆ. ಹಾಗಾಗಿ ಕೋಚ್ ರಾಹುಲ್ ದ್ರಾವಿಡ್ ಅವರು, ಪಾಕಿಸ್ತಾನದ ಅಟ್ಯಾಕ್ ಗೆ ಕೌಂಟರ್ ಅಟ್ಯಾಕ್ ರೆಡಿ ಮಾಡಿದ್ದಾರೆ.

ರಿಷಬ್ ಪಂತ್ ಅವರನ್ನು ಆರಂಭಿಕ ಆಟಗಾರನಾಗಿ ಕಣಕ್ಕೆ ಇಳಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ. ಆರಂಭದಲ್ಲಿ ರೈಟ್ ಹ್ಯಾಂಡ್ ಬ್ಯಾಟ್ಸ್ಮನ್ ಮತ್ತು ಲೆಫ್ಟ್ ಹ್ಯಾಂಡ್ ಬ್ಯಾಟ್ಸ್ಮನ್ ಕಾಂಬಿನೇಷನ್ ಇದ್ದರೆ, ವರ್ಕೌಟ್ ಎನ್ನುವ ನಂಬಿಕೆ ದ್ರಾವಿಡ್ ಅವರಿಗೆ ಇರುವ ಕಾರಣ ಈ ಹೊಸ ಪ್ಲಾನ್ ಮಾಡಿದ್ದಾರೆ. ಇದೆಲ್ಲವೂ ಈಗ ರಾಹುಲ್ ದ್ರಾವಿಡ್ ಅವರ ಪ್ಲಾನ್ ನ ಪ್ರಕಾರವೇ ನಡೆದರೆ, ತಂಡದ ಫಿನಿಷರ್ ದಿನೇಶ್ ಕಾರ್ತಿಕ್ ಅವರಿಗೆ ಪ್ಲೇಯಿಂಗ್ 11 ನಲ್ಲಿ ಆಡಲು ಸಾಧ್ಯ ಆಗುವುದಿಲ್ಲ. ದಿನೇಶ್ ಕಾರ್ತಿಕ್ ಅವರು ಬೆಂಚ್ ಗೆ ಸೀಮಿತವಾಗುತ್ತಾರೆ..

ರಿಷಬ್ ಪಂತ್ ಅವರು ಒಂದು ವೇಳೆ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ವಿಶ್ವಕಪ್ ತಂಡಕ್ಕೆ ಎಂಟ್ರಿ ಕೊಟ್ಟರೆ, ಅದರಿಂದಾಗಿ ಪ್ಲೇಯಿಂಗ್11 ನಲ್ಲಿ, ಮ್ಯಾಚ್ ನಲ್ಲಿ ಕೆ.ಎಲ್.ರಾಹುಲ್ ಅವರ ಸ್ಥಾನ ಕೂಡ ಬದಲಾಗುತ್ತದೆ. ರಾಹುಲ್ ಅವರು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಹುದು. ಕಳೆದ ವರ್ಷದಿಂದ ರಿಷಬ್ ಪಂತ್ ಅವರು ಓಪನಿಂಗ್ ಬ್ಯಾಟ್ಸ್ಮನ್ ಆಗಿ ಆಡಿರುವುದು 4 ಸಾರಿ, ಆ ನಾಲ್ಕು ಸಾರಿ ಕೂಡ ಹೇಳಿಕೊಳ್ಳುವಂಥ ಪ್ರದರ್ಶನ ನೀಡಿಲ್ಲ. ಹಾಗಾಗಿ ದ್ರಾವಿಡ್ ಅವರು ರಿಸ್ಕ್ ಯಾಕೆ ತೆಗೆದುಕೊಳ್ಳುತ್ತಿದ್ದರೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪವರ್ ಪ್ಲೇ ನಡೆಯುವಾಗ, ಲೆಫ್ಟ್ ಹ್ಯಾಂಡೆಡ್ ಬ್ಯಾಟ್ಸ್ಮನ್ ಇದ್ದರೆ, ಹೆಚ್ಚು ರನ್ಸ್ ಗಳಿಸಬಹುದು ಎಂದು ದ್ರಾವಿಡ್ ಅವರು ಲೆಕ್ಕಚಾರ ಹಾಕಿದ್ದಾರೆ.

ಸನತ್ ಜಯಸೂರ್ಯ, ಗಿಲ್ ಕ್ರಿಸ್ಟ್ ಇವರೆಲ್ಲರೂ ಸಹ ಲೆಫ್ಟ್ ಹ್ಯಾಂಡ್ ಬ್ಯಾಟ್ಸ್ಮನ್ ಗಳಾಗಿ ಪವರ್ ಪ್ಲೇ ನಲ್ಲಿ ಯಶಸ್ವಿ ಪ್ರದರ್ಶನ ನೀಡಿದ್ದಾರೆ, ಹಾಗಾಗಿ ದ್ರಾವಿಡ್ ಈ ನಿರ್ಧಾರ ಮಾಡಿದ್ದಾರೆ. ಆದರೆ ಪ್ರಸ್ತುತ ರಿಷಬ್ ಪಂತ್ ಇರುವ ಫಾರ್ಮ್ ನೋಡಿದರೆ, ದ್ರಾವಿಡ್ ಅವರ ಈ ಪ್ಲಾನ್ ವರ್ಕೌಟ್ ಆಗುವುದೇ ಡೌಟ್ ಎನ್ನುವ ಹಾಗಿದೆ. ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಈ ರಿಸ್ಕ್ ತೆಗೆದುಕೊಳ್ಳಲು ಸಜ್ಜಾಗಿದ್ದಾರೆ, ಎಲ್ಲಾ ತೀರ್ಮಾನವು, ಅಭ್ಯಾಸ ಪಂದ್ಯಗಳಲ್ಲಿ ರಿಷಬ್ ಪಂತ್ ಅವರ ಪ್ರದರ್ಶನ ಹೇಗಿರುತ್ತದೆ ಎನ್ನುವುದರ ಮೇಲೆ ಡಿಪೆಂಡ್ ಆಗಿರಲಿದೆ.