ಭಾರತಕ್ಕ ವಿಶ್ವಕಪ್ ಗೂ ಮುನ್ನವೇ ಮತ್ತೊಂದು ಶಾಕ್?? ಬುಮ್ರಾ ನಂತರ ಮತ್ತೊಬ್ಬ ಸ್ಟಾರ್ ಪ್ಲೇಯರ್ ಔಟ್?? ಹೊಸ ತಲೆನೋವು ಶುರು.

ಭಾರತ ಕ್ರಿಕೆಟ್ ತಂಡಕ್ಕೆ ಒಂದರ ನಂತಆ ಮತ್ತೊಂದು ಆತಂಕ ಮತ್ತು ಆಘಾತ ಆಗುತ್ತಲೇ ಇದೆ. ಮೊದಲಿಗೆ ಭಾರತದ ಚಾಣಾಕ್ಷ ಆಲ್ ರೌಂಡರ್ ರವೀಂದ್ರ ಜಡೇಜಾ ಅವರು ಇಂಜುರಿ ಸಮಸ್ಯೆಯಿಂದ ಏಷ್ಯಾಕಪ್ ಟೂರ್ನಿ ಇಂದ ಹೊರಗುಳಿದರು, ವಿಶ್ವಕಪ್ ಇಂದಲೂ ಹೊರಗುಳಿಯುವ ಹಾಗೆ ಆಗಿದೆ. ನಂತರ ಜಸ್ಪ್ರೀತ್ ಬುಮ್ರ ಅವರು ಸಹ ಬೆನ್ನು ನೋವಿನ ಕಾರಣದಿಂದ ವರ್ಲ್ಡ್ ಕಪ್ ಇಂದ ಹೊರಗುಳಿದಿದ್ದಾರೆ, ಇದೀಗ ಮತ್ತೊಬ್ಬ ಆಟಗಾರ ಅರ್ಷದೀಪ್ ಸಿಂಗ್ ಅವರು ನಿನ್ನೆಯ ಭಾರತ ವರ್ಸಸ್ ಸೌತ್ ಆಫ್ರಿಕಾ ಮೂರನೇ ಟಿ20 ಪಂದ್ಯದಿಂದ ಹೊರಗುಳಿದಿದ್ದಾರೆ. ಇದು ಎಲ್ಲರ ಆತಂಕಕ್ಕೆ ಕಾರಣವಾಗಿದೆ..

ಬುಮ್ರ ಅವರು ಹೊರಗುಳಿದಿದ್ದು, ಅವರ ಬದಲಾಗಿ ವಿಶ್ವಕಪ್ ನಲ್ಲಿ ಯಾರು ಆಡುತ್ತಾರೆ ಎನ್ನುವು ಪ್ರಶ್ನೆಗೆ ಇನ್ನು ಉತ್ತರ ಸಿಕ್ಕಿಲ್ಲ, ಇದೀಗ ಅರ್ಷದೀಪ್ ಸಿಂಗ್ ಅವರು ನಿನ್ನೆಯ ಪಂದ್ಯದಿಂದ ದೂರ ಉಳಿದಿರುವುದು ಕಳವಳವನ್ನು ಇನ್ನು ಹೆಚ್ಚು ಮಾಡಿದೆ. ಆದರೆ ರೋಹಿತ್ ಶರ್ಮಾ ಅವರು ಇದರ ಬಗ್ಗೆ ಮಾತನಾಡಿ, ಅರ್ಷದೀಪ್ ಸಿಂಗ್ ಅವರಿಗೆ ಬೆನ್ನು ನೋವು ಇರುವ ಕಾರಣ, ಮುನ್ನೆಚ್ಚರಿಕೆ ಕ್ರಮವಾಗಿ ಅವರಿಗೆ ವಿಶ್ರಾಂತಿ ನೀಡಲಾಗಿದೆ, ಗಂಭೀರವಾದ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ. ಆದರೆ ಬುಮ್ರ ಅವರು ಸೌತ್ ಆಫ್ರಿಕಾ ವಿರುದ್ಧದ ಮೊದಲ ಪಂದ್ಯ ಮಿಸ್ ಮಾಡಿಕೊಂಡಾಗಲು ಬುಮ್ರ ಅವರು ಇದನ್ನೇ ಹೇಳಿದ್ದರು, ಕೊನೆಗೆ ಬುಮ್ರ ಅವರು ವರ್ಲ್ಡ್ ಕಪ್ ಮಿಸ್ ಮಾಡಿಕೊಳ್ಳುವ ಹಾಗೆ ಆಗಿದೆ.

ಇತ್ತ ಮೊಹಮ್ಮದ್ ಶಮಿ ಅವರು ತಂಡಕ್ಕೆ ಸೇರಿಕೊಳ್ಳುತ್ತಾರೆ ಎನ್ನಲಾಗಿದ್ದು, ಈ ವಾರಾಂತ್ಯದಲ್ಲಿ ಬೆಂಗಳೂರಿನ ಎನ್.ಸಿ.ಎನಲ್ಲಿ ಹೃದಯ ಮತ್ತು ರಕ್ತನಾಳದ ಪರೀಕ್ಷೆಗೆ ಒಳಗಾಗಲಿದ್ದಾರೆ. ಅದರಲ್ಲಿ ಉತ್ತೀರ್ಣರಾದರೆ ಮಾತ್ರ ವಿಶ್ವಕಪ್ ತಂಡವನ್ನು ಸೇರಿಕೊಳ್ಳುತ್ತಾರೆ. ಶಮಿ ಅವರ ಆರೋಗ್ಯದ ಬಗ್ಗೆ ಇನ್ನು ಸರಿಯಾದ ಮಾಹಿತಿ ಸಿಕ್ಕಿಲ್ಲ. ಬುಮ್ರ ಅವರ ಅನುಪಸ್ಥಿತಿಯಲ್ಲಿ ಅರ್ಷದೀಪ್ ಸಿಂಗ್ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದರು, ಆದರೆ ಈಗ ಪರಿಸ್ಥಿತಿ ಏನಾಗುತ್ತದೆ ಎಂದು ಎಲ್ಲರಲ್ಲೂ ಆತಂಕ ಹೆಚ್ಚಾಗಿದೆ. ಅರ್ಷದೀಪ್ ಸಿಂಗ್ ಅವರಿಗೂ ಬೆನ್ನು ನೋವಿನ ಸಮಸ್ಯೆ ಶುರುವಾಗಿದ್ದು, ಅವಈ ಆರೋಗ್ಯದ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಮುಂದಿನ ದಿನಗಳಲ್ಲಿ ಸಿಗಲಿದೆ.