ಅಪ್ಪಿ ತಪ್ಪಿ ಸರಣಿ ಸೋತರೆ, ರೋಹಿತ್ ಆ ಮೂರು ಕಠಿಣ ನಿರ್ಧಾರ ತೆಗೆದುಕೊಳ್ಳಲೇಬೇಕು. ಇಲ್ಲ ಅಂದ್ರೆ, ಸೋಲು ಫಿಕ್ಸ್ ಫಿಕ್ಸ್ ಫಿಕ್ಸ್. ಯಾವ್ಯಾವು ಗೊತ್ತೇ??

ಭಾರತ ವರ್ಸಸ್ ಆಸ್ಟ್ರೇಲಿಯಾ ಸರಣಿಯ ಮೂರನೆಯ ಹಾಗೂ ಕೊನೆಯ ಪಂದ್ಯ ಇಂದು ಹೈದರಾಬಾದ್ ನಲ್ಲಿ ನಡೆಯಲಿದೆ. ಇಂದು ಸಂಜೆ ಮ್ಯಾಚ್ ಶುರುವಾಗಲಿದ್ದು, ಇಂದಿನ ಪಂದ್ಯ ಗೆಲ್ಲುವ ತಂಡ ಸಿ ಸರಣಿಯ ಗೆಲುವನ್ನು ಸಾಧಿಸುತ್ತದೆ. ಭಾರತ ತಂಡ ಇಂದಿನ ಪಂದ್ಯ ಗೆಲ್ಲಲೇಬೇಕು ಎಂದು ಕೆಲವು ಹೊಸ ಯೋಜನೆಗಳನ್ನು ಹಾಕಿಕೊಳ್ಳುತ್ತಿದೆ. ಇಂದಿನ ಪಂದ್ಯ ಗೆಲ್ಲಲು ಕ್ಯಾಪ್ಟನ್ ರೋಹಿತ್ ಶರ್ಮಾ ಅವರು ಕಠಿಣವಾದ ಈ ಮೂರು ನಿರ್ಧಾರಗಳನ್ನು ಮಾಡಲೇಬೇಕು. ಇಲ್ಲದೆ ಹೋದರೆ ಪಂದ್ಯದಲ್ಲಿ ಭಾರತ ತಂಡ ಸೋಲು ಕಾಣುವುದು ಖಚಿತ ಎನ್ನಲಾಗುತ್ತಿದೆ. ರೋಹಿತ್ ಅವರು ಮಾಡಬೇಕಿರುವ ಆ ಮೂರು ಕಠಿಣ ನಿರ್ಧಾರಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಚಾಹಲ್ ಅಥವಾ ಅಶ್ವಿನ್ ಇಬ್ಬರಲ್ಲಿ ಒಬ್ಬರನ್ನು ಆಡಿಸಬೇಕು :- ಪ್ಲೇಯಿಂಗ್ 11 ನಲ್ಲಿ ಸ್ಪಿನ್ನರ್ ಬಗ್ಗೆ ನೋಡುವುದಾದರೆ, ಯುಜವೇಂದ್ರ ಚಾಹಲ್ ಅವರು ಕಳೆದ ಎರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ, 12.46 ಎಕಾನಮಿಯಲ್ಲಿ 4.2 ಓವರ್ ಗಳಲ್ಲಿ 54 ರನ್ ಬಿಟ್ಟುಕೊಟ್ಟಿದ್ದಾರೆ. ಇತ್ತ ಅಶ್ವಿನ್ ಅವರಿಗೆ ಆಡುವ ಅವಕಾಶ ಸಿಕ್ಕಿಲ್ಲ. ಹಾಗಾಗಿ ಈ ಬಾರಿ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರಿಗೆ ಅವಕಾಶ ನೀಡುವುದು ಉತ್ತಮ. ಇನ್ನು ಸ್ಪಿನ್ನರ್ ಆಗಿ ಅಕ್ಷರ್ ಪಟೇಲ್ ಅವರ ಆಯ್ಕೆಯಾಗಿದ್ದು, ಪ್ಲೇಯಿಂಗ್ 11 ನಲ್ಲಿ ಇವರು ಇರುವುದು ಪಕ್ಕಾ ಎನ್ನಲಾಗುತ್ತಿದೆ.

ಹರ್ಷಲ್ ಪಟೇಲ್ ಬದಲಾಗಿ ದೀಪಕ್ ಚಹರ್ :- ಇಂಜುರಿ ಇಂದ ಗುಣಮುಖವಾಗಿ ಬಂದ ನಂತರ ಹರ್ಷಲ್ ಪಟೇಲ್ ಅವರು ಉತ್ತಮವಾದ ಫಾರ್ಮ್ ನಲ್ಲಿಲ್ಲ. ಎರಡನೇ ಮ್ಯಾಚ್ ನಲ್ಲಿ 2 ಓವರ್ ಗಳಲ್ಲಿ 32 ರನ್ ನೀಡಿದರು. ಹಾಗಾಗಿ ಈ ಸಮಯದಲ್ಲಿ ಹರ್ಷಲ್ ಪಟೇಲ್ ಅವರು ಸ್ವಲ್ಪ ರೆಸ್ಟ್ ಮಾಡುವುದು ಒಳ್ಳೆಯದು ಹಾಗೂ ಅವರ ದೀಪಕ್ ಚಹರ್ ಅವರಿಗೆ ಅವಕಾಶ ಕೊಡುವುದು ಒಳ್ಳೆಯದು ಎನ್ನಲಾಗುತ್ತಿದೆ. ಭಾರತ ವರ್ಸಸ್ ಆಸ್ಟ್ರೇಲಿಯಾ ಸರಣಿಯಲ್ಲಿ ಚಹರ್ ಅವರು ಒಂದು ಪಂದ್ಯವನ್ನು ಆಡಿಲ್ಲ ಹಾಗಾಗಿ ಅವರಿಗೆ ಅವಕಾಶ ಕೊಡುವುದು ಒಳ್ಳೆಯದು ಎನ್ನಲಾಗುತ್ತಿದೆ.

ದಿನೇಶ್ ಕಾರ್ತಿಕ್ ಅಥವಾ ರಿಷಬ್ ಪಂತ್ :- ಇವರಿಬ್ಬರಲ್ಲಿ ಯಾರನ್ನು ಆಯ್ಕೆಮಾಡುವುದು ಎನ್ನುವ ಬಗ್ಗೆ ಯಾವಾಗಲೂ ಗೊಂದಲ ಇದ್ದೇ ಇರುತ್ತದೆ. ಹಿರಿಯ ಆಟಗಾರ ದಿನೇಶ್ ಕಾರ್ತಿಕ್ ಅವರಿಗೆ ಆಡುವ ಅವಕಾಶ ಸಿಕ್ಕಿದೆ, ಎರಡನೇ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಅವರು ವಿಕೆಟ್ ಕೀಪರ್ ಆಗಿ ಕಾಣಿಸಿಕೊಂಡ ಕಾರಣ ರಿಷಬ್ ಪಂತ್ ಅವರಿಗೆ ಆಡುವ ಅವಕಾಶ ಸಿಕ್ಕಿತ್ತು. ಹಾಗಾಗಿ ಪಂತ್ ಅವರಿಗೆ ಅವಕಾಶ ಕೊಡಲಾಗುತ್ತಾ ಅಥವಾ ಭುವನೇಶ್ವರ್ ಕುಮಾರ್ ಅವರು ಬಂದಿರುವ ಕಾರಣ ಪಂತ್ ಅವರನ್ನು ಪ್ಲೇಯಿಂಗ್ 11 ಇಂದ ಹೊರಗೆ ಇಡಲಾಗುತ್ತಾ ಎಂದು ನೋಡಬೇಕಿದೆ. ಇವರಿಬ್ಬರು ಸಹ ವಿಶ್ವಕಪ್ ಪಂದ್ಯಗಳಿಗೆ ಆಯ್ಕೆಯಾಗಿದ್ದಾರೆ.