ರೋಹಿತ್ ರವರಿಗೆ ಏನಾಗಿದೆ?? ಸೋಲಿಗೆ ಕಾರಣ ಕೇಳಿದರೆ ಏನೆಂದು ಹೇಳಿದ್ದಾರೆ ಗೊತ್ತೇ??ನೀವು ನಾಯಕ, ಈ ಮಾತು ಹೇಗೆ ಹೇಳುತ್ತೀರಿ ಎಂದು ಫ್ಯಾನ್ಸ್ ಗರಂ. ಏನು ಕಾರಣ ಅಂತೇ ಗೊತ್ತೇ??

ಬಹಳ ನಿರೀಕ್ಷೆ ಇಟ್ಟುಕೊಂಡಿದ್ದ ಏಷ್ಯಾಕಪ್ ಪಂದ್ಯಗಳಿಂದ ಭಾರತ ತಂಡ ವಾಪಸ್ ಬಂದಿದೆ. ಟೂರ್ನಿ ಶುರುವಾಗುವ ಸಮಯದಲ್ಲಿ ಎಲ್ಲರೂ ಸಹ, ಭಾರತ ತಂಡವೆ ಗೆಲ್ಲುತ್ತದೆ, ಸೆಪ್ಟೆಂಬರ್ 11ರಂದು ನಡೆಯುವ ಫಿನಾಲೆಯಲ್ಲಿ ಭಾರತ ಹಾಗೂ ಪಾಕಿಸ್ತಾನ್ ಮುಖಾಮುಖಿಯಾಗಬಹುದು ಎಂದೇ ಭಾವಿಸಿದ್ದರು. ಆದರೆ ಅದೆಲ್ಲವೂ ಸೂಪರ್ 4 ಹಂತದ ಪಂದ್ಯಗಳಲ್ಲಿ ಉಲ್ಟಾ ಆಗಿಹೋಯಿತು. ಮೊದಲ ಎರಡು ಪಂದ್ಯಗಳನ್ನು ಒಳ್ಳೆಯ ಆಂತರದಲ್ಲಿ ಗೆದ್ದ ಭಾರತ ತಂಡ ಸೂಪರ್ 4 ಹಂತದ ಪಂದ್ಯಗಳಲ್ಲಿ ಎಡವಿತು.

ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಮೂರರಲ್ಲೂ ನಿರೀಕ್ಷೆಯ ಮಟ್ಟದ ಪ್ರದರ್ಶನವಿಲ್ಲದೆ ಸೋಲುವ ಹಾಗಾಯಿತು. 3 ಹಾಗೂ 4ನೇ ಪಂದ್ಯದಲ್ಲಿ 200 ರನ್ ಗಳ ಗಡಿ ಮುಟ್ಟಬೇಕಿದ್ದ ಭಾರತ ತಂಡ, 15 ರಿಂದ 25 ರನ್ ಗಳು ಕಡಿಮೆ ಹೊಡೆಯಿತು, ಬಳಿಕ ಎರಡು ಪಂದ್ಯಗಳಲ್ಲಿ 19ನೇ ಓವರ್ ನಲ್ಲಿ ಭುವನೇಶ್ವರ್ ಕುಮಾರ್ ಅವರ ಕಳಪೆ ಬೌಲಿಂಗ್ ಪ್ರದರ್ಶನ ಸೋಲಿಗೆ ಹತ್ತಿರ ಕರೆದೊಯ್ಯಿತು ಎಂದರೆ ತಪ್ಪಲ್ಲ, ಹಾಗೆಯೇ ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಅರ್ಷದೀಪ್ ಸಿಂಗ್ ಅವರು ಮುಖ್ಯವಾದ ಕ್ಯಾಚ್ ಅನ್ನು ಸಹ ಬಿಟ್ಟರು, ಫೀಲ್ಡಿಂಗ್ ನಲ್ಲಿ ಸಹ ಸಮಸ್ಯೆ ಇದ್ದ ಕಾರಣ, ಸೋಲುವ ಹಾಗಾಯಿತು. ಆದರೆ ಅಫ್ಘಾನಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಉತ್ತಮವಾಗಿ ಗೆದ್ದ ಭಾರತ ತಂಡ, ಗೆಲುವಿನಿಂದ ಮರಳಿ ಬಂದಿದೆ.

ಏಷ್ಯಾಕಪ್ ಟೂರ್ನಿಯಿಂದ ಹೊರಬಂದ ಬಳಿಕ ಕ್ಯಾಪ್ಟನ್ ರೋಹಿತ್ ಶರ್ಮಾ ಹಾಗೂ ವಿರಾಟ್ ಕೋಹ್ಲಿ ಅವರು ಮಾತನಾಡಿದ್ದು, ಭಾರತ ತಂಡದ ಸೋಲಿಗೆ ಕಾರಣ ಏನು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ, ತಂಡ ಸೋಲಲು ಟಾಸ್ ಸೋತಿದ್ದು ಕೂಡ ಮುಖ್ಯವಾದ ಕಾರಣ ಆಯಿತು ಎಂದು ಹೇಳಿದ್ದಾರೆ ರೋಹಿತ್ ಶರ್ಮಾ. ದುಬೈನಲ್ಲಿ 2ನೇ ಬಾರಿ ಬ್ಯಾಟಿಂಗ್ ಮಾಡಿದ ತಂಡಗಳೇ ಹೆಚ್ಚು ಗೆದ್ದಿವೆ, ಟಾಸ್ ಕೂಡ ಪ್ರಮುಖವಾಯಿತು, ಟಿ20 ವಿಶ್ವಕಪ್ ಪಂದ್ಯಗಳಲ್ಲಿ ಈ ರೀತಿ ಆಗಬಾರದು ಎಂದು ಭಾವಿಸುತ್ತೇನೆ..ಎಂದು ರೋಹಿತ್ ಶರ್ಮಾ ಅವರು ಹೇಳಿದ್ದು, ಎಲ್ಲದಕ್ಕೂ ಟಾಸ್ ಕಾರಣ ಎಂದು ಹೇಳಲು ಸಾಧ್ಯವಿಲ್ಲ, ನಾಯಕನಾಗಿ ಈ ರೀತಿ ಹೇಗೆ ಹೇಳಬಹುದು ನೆಟ್ಟಿಗರು ಹಾಗೂ ಕ್ರಿಕೆಟ್ ಪ್ರಿಯರು ರೋಹಿತ್ ಶರ್ಮಾ ಅವರ ಮೇಲೆ ಗರಂ ಆಗಿದ್ದಾರೆ.