ಇಶಾನ್ ಕಿಶನ್, ಬೇಡ. ವಿಶ್ವಕಪ್ ನಲ್ಲಿ ಭಾರತ ತಂಡದ ವಿಕೆಟ್ ಕೀಪರ್ ಆಯ್ಕೆ ಮಾಡಿದ ರಿಕ್ಕಿ ಪಾಂಟಿಂಗ್. ಆಯ್ಕೆ ಮಾಡಿದ್ದು ಯಾರನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತೀಯ ಕ್ರಿಕೆಟ್ ತಂಡ ಕಳೆದ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡುವ ಮೂಲಕ ನಾಕೌಟ್ ಹಂತಕ್ಕೂ ಮೊದಲೇ ಹೊರ ಹೋಗಿತ್ತು. ಇದು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಾಕಷ್ಟು ಬೇಸರವನ್ನು ಮೂಡಿಸಿತ್ತು. ಆದರೆ ಈ ಬಾರಿ ನಾಯಕ ರೋಹಿತ್ ಶರ್ಮಾ ಹಾಗೂ ಕೋಚ್ ರಾಹುಲ್ ದ್ರಾವಿಡ್ ರವರ ನೇತೃತ್ವದಲ್ಲಿ ಈ ಬಾರಿ ಆಸ್ಟ್ರೇಲಿಯಾ ನೆಲದಲ್ಲಿ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ನಡೆಯಲಿರುವ ಟಿ ಟ್ವೆಂಟಿ ವಿಶ್ವಕಪ್ ಗೆ ಪರಿಪಕ್ವವಾಗಿ ತಯಾರಿಯನ್ನು ನಡೆಸಿಕೊಂಡಿದೆ.

ಆದರೆ ಆಸ್ಟ್ರೇಲಿಯಾದ ಸರ್ವ ಶ್ರೇಷ್ಠ ನಾಯಕ ಆಗಿರುವ ರಿಕಿ ಪಾಂಟಿಂಗ್ ರವರು ಭಾರತೀಯ ಕ್ರಿಕೆಟ್ ತಂಡ ಇಶಾನ್ ಕಿಶನ್ ರವರ ಬದಲಿಗೆ ಈ ಇಬ್ಬರು ವಿಕೆಟ್ ಕೀಪರ್ ಗಳನ್ನು ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಬೇಕು ಎಂಬುದಾಗಿ ಸಜೆಸ್ಟ್ ಮಾಡಿದ್ದಾರೆ. ಅಷ್ಟೊಂದು ಅತ್ಯುತ್ತಮವಾಗಿ ಪ್ರದರ್ಶನ ನೀಡುತ್ತಿರುವ ಇಶಾನ್ ಕಿಶನ್ ಅವರ ಬದಲಿಗೆ ರಿಕಿ ಪಾಂಟಿಂಗ್ ರವರು ಆಯ್ಕೆಮಾಡಿರುವ ಆಟಗಾರರು ಯಾರು ಎಂಬುದನ್ನು ನೋಡೋಣ ಬನ್ನಿ. ಹೌದು ಗೆಳೆಯರೇ ರಿಕಿ ಪಾಂಟಿಂಗ್ ಆಯ್ಕೆಮಾಡಿರುವ ಆಟಗಾರರು ರಿಷಬ್ ಪಂತ್ ಹಾಗೂ ದಿನೇಶ್ ಕಾರ್ತಿಕ್.

ಸದ್ಯದ ಮಟ್ಟಿಗೆ ರಿಷಬ್ ಪಂತ್ ಅತ್ಯುತ್ತಮ ಫಾರ್ಮ್ ನಲ್ಲಿದ್ದಾರೆ ಹೀಗಾಗಿ ಅವರಿಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡಲೇಬೇಕು. ಇನ್ನು ದಿನೇಶ್ ಕಾರ್ತಿಕ ರವರ ಬಗ್ಗೆ ಮಾತನಾಡುವುದಾದರೆ ತಂಡದ ಪರವಾಗಿ ಅತ್ಯುತ್ತಮ ಫಿನಿಶರ್ ಜವಾಬ್ದಾರಿಯನ್ನು ಅವರು ನಿರ್ವಹಿಸಲಿದ್ದಾರೆ. ಹಾರ್ದಿಕ್ ಪಾಂಡ್ಯ ಹಾಗೂ ದಿನೇಶ್ ಕಾರ್ತಿಕ್ ಅವರ ಕಾಂಬಿನೇಷನ್ ಕೆಳಕ್ರಮಾಂಕದಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ಅತ್ಯುತ್ತಮ ಸ್ಟ್ಯಾಂಡನ್ನು ನೀಡಲಿದೆ ಎಂಬುದಾಗಿ ರಿಕಿ ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ. ರಿಕಿ ಪಾಂಟಿಂಗ್ ರವರ ಈ ಹೇಳಿಕೆಯ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.