ಫೈನಲ್ ತಲುಪಲಾಗದೆ ಐಪಿಎಲ್ ಟೂರ್ನಿಯಿಂದ ಹೊರಬಂದ ಬಳಿಕ ಆರ್ಸಿಬಿ ಫ್ಯಾನ್ಸ್ ಗಳಿಗೆ ಭಾವನಾತ್ಮಕ ಸಂದೇಶ ರವಾನೆ ಮಾಡಿದ ದಿನೇಶ್. ಹೇಳಿದ್ದೇನು ಗೊತ್ತೇ?

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನಮ್ಮೆಲ್ಲರ ನೆಚ್ಚಿನ ತಂಡವಾಗಿರುವ ರಾಜ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ ಐಪಿಎಲ್ ನಲ್ಲಿ ಬಲಿಷ್ಠ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ಸೋಲುವ ಮೂಲಕ ಈ ಬಾರಿ ಕಪ್ ಗೆಲ್ಲುವ ಅವಕಾಶದಿಂದ ಹೊರಬಿದ್ದಿದೆ ಎಂದು ಹೇಳಬಹುದಾಗಿದೆ. ಪ್ರತಿಯೊಬ್ಬರ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಕೂಡ ಈ ಬಾರಿ ಖಂಡಿತವಾಗಿ ನಮ್ಮತಂಡ ಕಪ್ ಗೆದ್ದೇ ಗೆಲ್ಲುತ್ತದೆ ಎಂಬುದಾಗಿ ಕನಸನ್ನು ಕಟ್ಟಿಕೊಂಡಿದ್ದರು ಆದರೆ ಆ ಕನಸೆಲ್ಲಾ ಇಂದು ನುಚ್ಚುನೂರಾಗಿದೆ ಎಂದು ಹೇಳಬಹುದಾಗಿದೆ.

ಡುಪ್ಲೆಸಿಸ್ ರವರ ನಾಯಕತ್ವದಲ್ಲಿ ಈ ಬಾರಿ ಹೊಸ ಹಾಗೂ ಉತ್ಸಾಹಿತ ತಂಡದೊಂದಿಗೆ ಐಪಿಎಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ತಂಡದಂತಹ ಸೂಪರ್ ಸ್ಟ್ರಾಂಗ್ ತಂಡವನ್ನು ಸೋಲಿಸಿ ಕ್ವಾಲಿಫೈರ್ 2 ಹಂತಕ್ಕೆ ತಲುಪಿತ್ತು. ಆದರೆ ಕ್ವಾಲಿಫೈಯರ್ ಎರಡು ಹಂತದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿ ಕೂಡ ವಿಫಲರಾಗುವ ಮೂಲಕ ಸೋಲಿಗೆ ಶರಣಾಗಿದ್ದಾರೆ ಎಂದು ಹೇಳಬಹುದು. ಇನ್ನು ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ದಿನೇಶ್ ಕಾರ್ತಿಕ್ ರವರು ಅದ್ಭುತ ಪ್ರದರ್ಶನವನ್ನು ನೀಡುವ ಮೂಲಕ ಟೀಮ್ ಇಂಡಿಯಾಗೆ ಕೂಡ ಕಂಬ್ಯಾಕ್ ಮಾಡಿದ್ದಾರೆ.

ಆರ್ಸಿಬಿ ತಂಡ ನೀಡಿರುವ ಗೋಲ್ಡನ್ ಆಪರ್ಚುನಿಟಿ ಅನ್ನು ದಿನೇಶ್ ಕಾರ್ತಿಕ್ ರವರು ಎರಡು ಕೈಗಳಿಂದ ಬಾಚಿಕೊಂಡು ಈ ಬಾರಿ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಮಾತ್ರವಲ್ಲದೆ ಐಪಿಎಲ್ ನಲ್ಲಿ ಉತ್ತಮ ಫಿನಿಶರ್ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ. ಮಾತ್ರವಲ್ಲದೆ ಬರೋಬ್ಬರಿ ಮೂರು ವರ್ಷಗಳ ನಂತರ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗುವ ಮೂಲಕ ಐಪಿಎಲ್ ನಂತರ ನಡೆಯುವ ದಕ್ಷಿಣ ಆಫ್ರಿಕಾ ವಿರುದ್ಧದ ಐದು ಟಿ20 ಪಂದ್ಯಗಳ ಸರಣಿಗೆ ಆಯ್ಕೆಯಾಗಿದ್ದಾರೆ. ಆದರೆ ಈ ಬಾರಿ ಆರ್ಸಿಬಿ ತಂಡವನ್ನು ಫೈನಲ್ಗೆ ಕೊಂಡೊಯ್ಯಲು ಸಾಧ್ಯವಾಗಲಿಲ್ಲ ಎನ್ನುವ ದುಃಖ ಕೂಡ ದಿನೇಶ್ ಕಾರ್ತಿಕ್ ರವರ ಮನಸ್ಸಿನಲ್ಲಿದೆ ಎಂದು ಹೇಳಬಹುದಾಗಿದೆ.

ಆರ್ಸಿಬಿ ತಂಡದ ಅಭಿಮಾನಿಗಳ ಕುರಿತಂತೆ ಮಾತನಾಡುತ್ತ ದಿನೇಶ್ ಕಾರ್ತಿಕ್ ರವರು ನಾನು ಇದುವರೆಗೂ ಈ ಹಿಂದೆ ಗುಜರಾತ್ ಲಯನ್ಸ್ ಕೊಲ್ಕತ್ತಾ ನೈಟ್ ರೈಡರ್ಸ್ ಡೆಲ್ಲಿ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ಪರವಾಗಿ ಕೂಡ ಆಡಿದ್ದೇನೆ ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇರುವಂತಹ ಅಭಿಮಾನಿಗಳನ್ನು ಬೇರೆ ಯಾವ ತಂಡದಲ್ಲಿ ಕೂಡ ನಾನು ನೋಡಿಲ್ಲ ಎಂಬುದಾಗಿ ದಿನೇಶ್ ಕಾರ್ತಿಕ್ ಅಭಿಪ್ರಾಯಪಟ್ಟಿದ್ದಾರೆ. ಇಷ್ಟೊಂದು ದೊಡ್ಡ ಮಟ್ಟದ ಬೆಂಬಲ ಸಿಕ್ಕಿರುವ ಕಾರಣದಿಂದಾಗಿ ತಂಡಕ್ಕೆ ಏನಾದರೂ ಮಾಡಬೇಕು ಎನ್ನುವ ಆಸೆಯಲ್ಲಿದ್ದ ಎಂಬುದಾಗಿ ಕೂಡ ದಿನೇಶ್ ಕಾರ್ತಿಕ್ ರವರು ಈ ಸಂದರ್ಭದಲ್ಲಿ ಬಿಚ್ಚಿಟ್ಟಿದ್ದರು.

ಆರ್ಸಿಬಿ ಪರ ಆಡಿದ ಹಗಲೆಲ್ಲ ಕ್ರೀಡಾಂಗಣದಲ್ಲಿ ಅಭಿಮಾನಿಗಳ ಹರ್ಷೋದ್ಗಾರ ಹಾಗೂ ವಿಜಯಘೋಷವನ್ನು ನಾನು ತುಂಬು ಮನಸ್ಸಿನಿಂದ ಆನಂದಿಸಿದ್ದೇನೆ ಹಾಗೂ ಅಭಿಮಾನಿಗಳಿಗೆ ಹೃದಯಪೂರ್ವಕವಾಗಿ ಆಭಾರಿಯಾಗಿದ್ದೇನೆ. ನಿಮ್ಮ ಬೆಂಬಲದಿಂದಾಗಿಯೇ ಈ ಬಾರಿ ಐಪಿಎಲ್ ನಲ್ಲಿ ಸಾಕಷ್ಟು ಸಾಧನೆಗಳನ್ನು ನಾನು ಸಾಧಿಸಲು ಸಾಧ್ಯವಾಯಿತು. ನಿಮ್ಮ ಬೆಂಬಲಕ್ಕೆ ನಾನು ಸದಾ ಚಿರಋಣಿಯಾಗಿದ್ದೇನೆ ನನ್ನನ್ನು ತುಂಬು ತೋಳಿನಿಂದ ಆರ್ಸಿಬಿ ಫ್ಯಾಮಿಲಿಗೆ ಸ್ವಾಗತಿಸಿದ ಕ್ಕಾಗಿ ಅಭಿಮಾನಿಗಳಿಗೆ ಧನ್ಯವಾದ ಎಂಬುದಾಗಿ ದಿನೇಶ್ ಕಾರ್ತಿಕ್ ರವರು ಅಭಿಮಾನಿಗಳನ್ನು ಕೊಂಡಾಡಿದ್ದಾರೆ.

ಕೇವಲ ಕ್ರೀಡಾಂಗಣದಲ್ಲಿ ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಹಲವಾರು ವಿಚಾರಗಳಿಂದ ನನ್ನನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ನನ್ನ ಕುರಿತಂತೆ ಮೆಚ್ಚುಗೆಯ ಮಾತುಗಳನ್ನು ಆಡುತ್ತಿರುವುದು ನಿಜಕ್ಕೂ ಕೂಡ ನನಗೆ ಸಂತೋಷವನ್ನು ತರಿಸಿದೆ. ಮುಂದಿನ ಸೀಸನ್ ನಲ್ಲಿ ಇನ್ನಷ್ಟು ಬಲಿಷ್ಠವಾಗಿ ನಾವು ವಾಪಸ್ ಆಗುತ್ತೇವೆ ಎಂಬುದಾಗಿ ಕೂಡ ಅಭಿಮಾನಿಗಳಿಗೆ ವಿಶ್ವಾಸವನ್ನು ತುಂಬಿದ್ದಾರೆ. ಈ ಬಾರಿಯ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆ ಆಗಿರುವ ದಿನೇಶ್ ಕಾರ್ತಿಕ್ ರವರು ಅತ್ಯುತ್ತಮವಾಗಿ ಆಟ ಆಡಲು ಎನ್ನುವುದಾಗಿ ಹಾರೈಸೋಣ.