ಡುಪ್ಲೆಸಿಸ್, ದಿನೇಶ್ ಬೇಡವೇ ಬೇಡ, ಈತನೇ ಆರ್ಸಿಬಿಗೆ ಬೆಸ್ಟ್ ಕ್ಯಾಪ್ಟನ್ ಎಂದ ಸುನಿಲ್ ಗವಾಸ್ಕರ್, ಯಾರು ಮತ್ತು ಯಾಕಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಐಪಿಎಲ್ ಹರಾಜು ಮುಗಿದಿದೆ. ಇನ್ನೇನಿದ್ದರೂ ತಂಡದ ಸಂಯೋಜನೆ ಅಷ್ಟೇ. ಎಲ್ಲಾ ಹತ್ತು ತಂಡಗಳು ಮೈಂಡ್ ಗೇಮ್ ನಲ್ಲಿ ತೊಡಗಿವೆ. ಈಗಾಗಲೇ ಎಂಟು ತಂಡಗಳು ತಮ್ಮ ತಂಡಕ್ಕೆ ನಾಯಕನನ್ನು ಘೋಷಿಸಿವೆ. ಆರ್ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ತಂಡ ಮಾತ್ರ ನಾಯಕನನ್ನು ಘೋಷಿಸಬೇಕಾಗಿದೆ.

ಈ ನಡುವೆ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಸುನೀಲ್ ಗವಾಸ್ಕರ್, ಈತನೇ ಆರ್ಸಿಬಿ ತಂಡದ ಮುಂದಿನ ನಾಯಕನಾಗಬೇಕೆಂದು ಅದಕ್ಕೆ ಸೂಕ್ತ ಕಾರಣ ಸಹ ನೀಡಿದ್ದಾರೆ. ಬನ್ನಿ ಆತ ಯಾರು ಎಂದು ತಿಳಿಯೋಣ. ಸುನಿಲ್ ಗವಾಸ್ಕರ್ ಪ್ರಕಾರ ಆರ್ಸಿಬಿ ತಂಡದ ಮುಂದಿನ ನಾಯಕರಾಗಿ ಆಸೀಸ್ ನ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಗ್ಲೆನ್ ಮ್ಯಾಕ್ಸ್ವೆಲ್ ರನ್ನು ಮಾಡಬೇಕಂತೆ.

ಅವರು ಈಗಾಗಲೇ ಐಪಿಎಲ್ ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕತ್ವ ವಹಿಸಿದ ಅನುಭವವಿದೆ. ಜೊತೆಗೆ ಮ್ಯಾಕ್ಸ್ವೆಲ್ ಒಬ್ಬ ಹುಡುಗಾಟದ ಆಟಗಾರ. ಕ್ರೀಸ್ ಗೆ ಬರೋದು, ಒಂದಷ್ಟು ಬಿಸೋದು, ಔಟಾಗಿ ಹೋಗೋದು ಹೀಗೆ ಮಾಡುತ್ತಾರೆ. ಆದರೇ ನಾಯಕತ್ವದ ಜವಾಬ್ದಾರಿ ವಹಿಸಿದರೇ, ಅವರು ಇನ್ನಿಂಗ್ಸ್ ನಲ್ಲಿ ಸಹ ಜವಾಬ್ದಾರಿಯ ಆಟವಾಡುತ್ತಾರೆ. ಇದರ ಜೊತೆ ನಾವು ಬೇರೆಯದೇ ಆದ ಮ್ಯಾಕ್ಸ್ವೆಲ್ ರನ್ನು ನೋಡಬಹುದು. ಅದಲ್ಲದೇ ಆರ್ಸಿಬಿ ಫ್ರಾಂಚೈಸಿ ಸಹ ಮ್ಯಾಕ್ಸ್ವೆಲ್ ಗೆ ಹಳೆಯದಾಗಿರುವ ಕಾರಣ ಉತ್ತಮ ಸಂಭಂದ ಮ್ಯಾನೇಜ್ ಮೆಂಟ್ ಜೊತೆ ಇದೆ. ಹೀಗಾಗಿ ಮ್ಯಾಕ್ಸ್ವೆಲ್ ರನ್ನೇ ಮುಂದಿನ ನಾಯಕರನ್ನಾಗಿ ಮಾಡಬೇಕು ಎಂದು ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.

Kannada NewsKarunaada Vaaniಕನ್ನಡಕನ್ನಡ ನ್ಯೂಸ್ಕರುನಾಡ ವಾಣಿ