ಆರ್ಸಿಬಿ ಖರೀದಿ ಮಾಡಿದ ಬೆಸ್ಟ್ ಆಟಗಾರ ಯಾರು ಗೊತ್ತೇ? ಕಡಿಮೆ ಬೆಲೆ ಈತನನ್ನು ಖರೀದಿ ಮಾಡಿದ್ದೆ ಬೆಸ್ಟ್. ಯಾರ ಆ ಆಟಗಾರ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲ ತಿಳಿದಿರುವಂತೆ ಈಗಾಗಲೇ ಟಾಟಾ ಐಪಿಎಲ್ 2022 ರ ಮೆಗಾ ಹರಾಜು ಫೆಬ್ರವರಿ 12 ಹಾಗೂ 13ರಂದು ಬೆಂಗಳೂರಿನಲ್ಲಿ ಯಶಸ್ವಿಯಾಗಿ ಸಂಪೂರ್ಣಗೊಂಡಿದೆ. ಬಹುತೇಕ ಎಲ್ಲ ಖಂಡಗಳು ಕೂಡ ತಮಗೆ ಬೇಕಾಗಿರುವ ಆಟಗಾರರನ್ನು ಕೋಟಿಕೋಟಿ ಬೆಲೆ ನೀಡಿ ಖರ್ಚುಮಾಡಿ ಖರೀದಿಸಿದ್ದಾರೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕುರಿತಂತೆ ಹೇಳುವುದಾದರೆ ಈಗಾಗಲೇ ವಿರಾಟ್ ಕೊಹ್ಲಿ ಮೊಹಮ್ಮದ್ ಸಿರಾಜ್ ಹಾಗೂ ಆಸ್ಟ್ರೇಲಿಯಾದ ಆಲ್-ರೌಂಡರ್ ಆಗಿರುವ ಗ್ಲೆನ್ ಮ್ಯಾಕ್ಸ್ವೆಲ್ ಅವರನ್ನು ತಮ್ಮ ಬಳಿ ಉಳಿಸಿಕೊಂಡಿತ್ತು.

ಈ ಬಾರಿಯ ಮೆಗಾ ಹರಾಜಿನಲ್ಲಿ ಕೂಡ ಸಾಕಷ್ಟು ಒಳ್ಳೆಯ ಆಟಗಾರರನ್ನು ಖರೀದಿಸಿತ್ತು. ಅವುಗಳಲ್ಲಿ ಪ್ರಮುಖವಾಗಿ ಹೇಳುವುದಾದರೆ ಆಫ್ರಿಕಾ ಮೂಲದ ಬ್ಯಾಟ್ಸ್ಮನ್ ಆಗಿರುವ ಪಾಫ್ ಡುಪ್ಲೆಸಿಸ್. ಈಗಾಗಲೇ ಹಲವಾರು ಬಾರಿ ಚೆನ್ನೈ ಮ್ಯಾಚ್ ವಿನ್ನರ್ ಆಗಿ ಕಾಣಿಸಿಕೊಂಡಿದ್ದಾರೆ. ಕಳೆದ ಬಾರಿಯ ಪರ್ಪಲ್ ಕ್ಯಾಪ್ ವಿನ್ನರ್ ಆಗಿರುವ ಹರ್ಷಲ್ ಪಟೇಲ್. ಶ್ರೀಲಂಕಾದ ವನಿಂದು ಹಸರಂಗ. ಆಸ್ಟ್ರೇಲಿಯಾದ ಫಾಸ್ಟ್ ಬೌಲರ್ ಆಗಿರುವ ಜೋಶ್ ಹೆಜಲ್ವುಡ್. ದಿನೇಶ್ ಕಾರ್ತಿಕ್ ರವರನ್ನು ಕೂಡ ಖರೀದಿಸಿದೆ. ಹೀಗೆ ಹಲವಾರು ಆಟಗಾರರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೆಗಾ ಹರಾಜಿನಲ್ಲಿ ಖರೀದಿಸಿದ್ದು ತಂಡದ ಪ್ರಮುಖ ಆಟಗಾರರಾಗಿ ಮುಂದಿನ ದಿನಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಭರವಸೆಯನ್ನು ನೀಡಿದೆ.

ಆದರೆ ಇವರೆಲ್ಲರಿಗಿಂತ ಹೆಚ್ಚಾಗಿ ಈಗ ಮತ್ತೊಬ್ಬ ಆಟಗಾರರನ್ನು ಖರೀದಿಸಿದ್ದು ಪ್ರಮುಖವಾಗಿ ಬೆಸ್ಟ್ ಎಂದು ಹೇಳುವಂತೆ ಮಾಡಿದೆ. ಹೌದು ನ್ಯೂಜಿಲೆಂಡ್ ಮೂಲದ ಫಿನ್ ಆಲೆನ್ ರವರನ್ನು 80 ಲಕ್ಷ ರೂಪಾಯಿ ಖರೀದಿಸಿರುವುದು ಈಗ ಎಲ್ಲ ವಿಮರ್ಶಕರು ಬೆಸ್ಟ್ ಎಂದು ಹೇಳುವಂತೆ ಮಾಡಿದೆ. ಯಾಕೆಂದರೆ ಅತಿ ಕಡಿಮೆ ಬೆಲೆಗೆ ವಿದೇಶಿ ಆಟಗಾರನನ್ನು ಅದು ಕೂಡ ಒಂದು ವೇಳೆ ದಿನೇಶ್ ಕಾರ್ತಿಕ್ ರವರ ವಿಕೆಟ್ ಕೀಪಿಂಗ್ ಸ್ಥಾನಕ್ಕೆ ರಿಪ್ಲೇಸ್ಮೆಂಟ್ ಬೇಕು ಎಂದು ಹುಡುಕಿದರೆ ಫಿನ್ ಆಲೆನ್ ಅರ್ಹ ಆಟಗಾರನಾಗಿ ಕಾಣಿಸಿಕೊಳ್ಳುತ್ತಾರೆ. ಕಳೆದ ಬಾರಿ ಕೂಡ ತಂಡದಲ್ಲಿದ್ದರು ಆಡುವ ಬಳಗದಲ್ಲಿ ಕಾಣಿಸಿಕೊಂಡಿರಲಿಲ್ಲ. ಈ ಬಾರಿ ಸಿಕ್ಕಂತಹ ಅವಕಾಶವನ್ನು ಖಂಡಿತವಾಗಿ ಇವರು ಉಪಯೋಗಿಸಿಕೊಳ್ಳಲಿ ದ್ದಾರೆ ಎಂಬ ಭರವಸೆ ಮೂಡಿಸಿದೆ.

best news in kannadafinn allen rcbIPLipl 2022Ipl news in kannadaipl rcbKannadakannada ipl newsKannada Newskannada top newsKarunaada Vaaninews in kannadarcbrcb iplrcb ipl 2022top news channeltop news in kannadatop news kannadaಕನ್ನಡಕನ್ನಡ ನ್ಯೂಸ್ಕರುನಾಡ ವಾಣಿ