ಪ್ರತಿ ತಂಡಗಳಿಗೂ ಇವರೇ ಬೇಕು, ಇವರಿಗಾಗಿ ಕೋಟಿ ಕೋಟಿ ಖರ್ಚು ಮಾಡಲು ಸಿದ್ದವಾದ ತಂಡಗಳು, ಯಾವ್ಯಾವ ಆಟಗಾರು ಟಾಪ್ ಲಿಸ್ಟ್ ನಲ್ಲಿ ಗೊತ್ತೇ??

ನಮಸ್ಕಾರ ಸ್ನೇಹಿತರೇ ಕ್ರಿಕೆಟ್ ನ ಅತಿ ದೊಡ್ಡ ಹಬ್ಬ ಎಂದೇ ಖ್ಯಾತವಾಗಿರುವ ಐಪಿಎಲ್ ನ 2022 ರ ಅವತರಣಿಕೆ ಪ್ರಾರಂಭವಾಗಲು ಇನ್ನು ಕೇವಲ ಕೆಲವೇ ತಿಂಗಳುಗಳು ಬಾಕಿ ಉಳಿದಿವೆ. ಇದೇ ಫೆಬ್ರವರಿ 12 ಹಾಗೂ 13 ರಂದು ಬೆಂಗಳೂರಿನಲ್ಲಿ ಮೆಗಾ ಹರಾಜು ಕೂಡ ನಡೆಯಲು ವೇದಿಕೆ ಸಿದ್ಧವಾಗಿದೆ. ಹರಾಜಿಗೆ ಕೇವಲ ಕೆಲವೇ ದಿನಗಳು ಬಾಕಿ ಉಳಿದಿದ್ದು ಐಪಿಎಲ್ ನ ಎಲ್ಲಾ ಫ್ರಾಂಚೈಸಿಗಳು ಕೂಡ ಈ 5 ಆಟಗಾರರನ್ನು ಹೇಗಾದರೂ ಮಾಡಿ ಕೋಟಿ ಕೋಟಿ ಹಣವನ್ನು ಖರ್ಚು ಮಾಡಿಯಾದರೂ ಕೂಡ ಖರೀದಿಸಲು ತಂತ್ರಗಾರಿಕೆಯನ್ನು ರೂಪಿಸುತ್ತಿದ್ದಾರೆ. ಹಾಗಿದ್ದರೆ ಈ ಬಾರಿಯ ಮೆಗಾ ಹರಾಜಿನಲ್ಲಿ ಎಲ್ಲಾ ಫ್ರಾಂಚೈಸಿಗಳು ಕಣ್ಣಿಟ್ಟಿರುವ ಆ 5 ಮೋಸ್ಟ್ ವಾಂಟೆಡ್ ಆಟಗಾರರು ಯಾರು ಎಂಬುದನ್ನು ತಿಳಿಯೋಣ ಬನ್ನಿ.

ಇಶಾನ್ ಕಿಶನ್; ಭಾರತೀಯ ಕ್ರಿಕೆಟ್ ತಂಡದ ಮಾಜಿ ಕಪ್ತಾನ ರಾಗಿರುವ ಮಹೇಂದ್ರ ಸಿಂಗ್ ಧೋನಿ ರವರ ನಂತರ ಜಾರ್ಖಂಡ್ ನಿಂದ ಭಾರತ ಕ್ರಿಕೆಟ್ ಜಗತ್ತಿಗೆ ಪರಿಚಿತವಾಗಿರುವ ದ್ರುವತಾರೆ ಇಶನ್ ಕಿಶನ್ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಈಗಾಗಲೇ ಮುಂಬೈ ಇಂಡಿಯನ್ಸ್ ತಂಡದಲ್ಲಿ ಹಾಗೂ ಭಾರತೀಯ ಕ್ರಿಕೆಟ್ ತಂಡದಲ್ಲಿ ತಮ್ಮ ಪ್ರತಿಭೆಯ ಸಾಮರ್ಥ್ಯವನ್ನು ಸಾಬೀತು ಪಡಿಸಿರುವಂತಹ ಉದಯೋನ್ಮುಖ ಪ್ರತಿಭೆ. ಮುಂಬೈ ತಂಡ ತನ್ನ ಮೊದಲ ಮೂರು ಆಟಗಾರರ ಲಿಸ್ಟಿನಿಂದ ಇಶಾನ್ ಕಿಶನ್ ರವರನ್ನು ಹೊರ ಹಾಕಿರಬಹುದು ಆದರೆ ಹರಾಜಿನಲ್ಲಿ ಖರೀದಿಸುವುದಕ್ಕೆ ಪೂರ್ಣಪ್ರಮಾಣದ ಪ್ರಯತ್ನವನ್ನು ನಡೆಸಲಿದೆ. ಯಾಕೆಂದರೆ ಇಶಾನ್ ಕಿಶನ್ ಅವರು ಕೇವಲ ಬ್ಯಾಟ್ಸ್ಮನ್ ಆಗಿ ಮಾತ್ರವಲ್ಲದೆ ತಂಡಕ್ಕೆ ವಿಕೆಟ್ ಕೀಪರ್ ಆಗಿ ಕೊಡುಗೆಯನ್ನು ನೀಡಬಲ್ಲರು.

ಡೇವಿಡ್ ವಾರ್ನರ್; ಆಸ್ಟ್ರೇಲಿಯ ಮೂಲದ ಕ್ರಿಕೆಟರ್ ಆಗಿರುವ ಡೇವಿಡ್ ವಾರ್ನರ್ ರವರು ವಿದೇಶಿ ಆಟಗಾರರಲ್ಲಿ ಐಪಿಎಲ್ ನಲ್ಲಿ ಅತ್ಯಂತ ಹೆಚ್ಚು ರನ್ ಗಳಿಸಿರುವ ಆಟಗಾರನಾಗಿದ್ದಾರೆ. ಇಷ್ಟು ಮಾತ್ರವಲ್ಲದೆ ಕಪ್ತಾನನಾಗಿ ಸನ್ರೈಸರ್ಸ್ ಹೈದರಾಬಾದ್ ನಲ್ಲಿ ಐಪಿಎಲ್ ಟ್ರೋಫಿಯನ್ನು ಕೂಡ ಗೆದ್ದಿದ್ದಾರೆ. ಹೀಗಾಗಿ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ಗಳಂತಹ ತಂಡಗಳು ನಾಯಕ ಹಾಗೂ ಓಪನಿಂಗ್ ಬ್ಯಾಟ್ಸ್ ಮ್ಯಾನ್ ಹುಡುಕಾಟದಲ್ಲಿ ಇರುವ ಕಾರಣದಿಂದಾಗಿ ಡೇವಿಡ್ ವಾರ್ನರ್ ರವರನ್ನು ಆಯ್ಕೆ ಮಾಡಬಹುದಾದಂತಹ ಸಾಧ್ಯತೆ ದಟ್ಟವಾಗಿದೆ.

ಕಗೀಸೋ ರಬಾಡ; ರಬಾಡ ಈಗಾಗಲೇ ಡೆಲ್ಲಿ ತಂಡದ ಫಾಸ್ಟ್ ಬೌಲರ್ ಆಗಿ ಐಪಿಎಲ್ನಲ್ಲಿ ತಮ್ಮ ಚಾಕಚಕ್ಯತೆಯನ್ನು ಪ್ರದರ್ಶಿಸಿದ್ದಾರೆ. ಆದರೆ ಈ ಆಫ್ರಿಕನ್ ಫಾಸ್ಟ್ ಬೌಲರ್ ಅನ್ನು ಡೆಲ್ಲಿ ತಂಡ ರಿಟೇನ್ ಮಾಡಿಕೊಳ್ಳುವಲ್ಲಿ ಎಡವಿದೆ. ಹೀಗಾಗಿ ಈ ಬಾರಿಯ ಮೆಗಾ ಹರಾಜಿನಲ್ಲಿ ಡೆಲ್ಲಿ ಸೇರಿದಂತೆ ಬಹುತೇಕ ಎಲ್ಲಾ ಫ್ರಾಂಚೈಸಿಗಳು ಕೂಡ ರಬಾಡ ರವರನ್ನು ಖರೀದಿಸಲು ದೊಡ್ಡ ಮಟ್ಟದ ಪೈಪೋಟಿ ನೀಡಿ ಕೋಟಿಕೋಟಿ ಸುರಿಯೋದಂತೂ ಖಂಡಿತ. ಹೀಗಾಗಿ ಈ ಬಾರಿಯ ಮೆಗಾ ಹರಾಜಿನಲ್ಲಿ ರವರ ಅತ್ಯಂತ ದುಬಾರಿ ಆಟಗಾರನಾಗುವ ಎಲ್ಲಾ ಸೂಚನೆಗಳು ಕಂಡು ಬರುತ್ತಿವೆ.

ಶ್ರೇಯಸ್ ಅಯ್ಯರ್; ಇತ್ತೀಚಿನ ವರ್ಷಗಳಲ್ಲಿ ಯುವ ನಾಯಕನಾಗಿ ಹಾಗೂ ಭರವಸೆಯ ಬ್ಯಾಟ್ಸ್ಮನ್ ಆಗಿ ತಂಡವನ್ನು ಮುನ್ನಡೆಸಬಲ್ಲಂತಹ ಸಾಮರ್ಥ್ಯವನ್ನು ಮಾಡಿ ತೋರಿಸುವ ಮೂಲಕ ತನ್ನ ಮೌಲ್ಯವನ್ನು ಪ್ರದರ್ಶಿಸಿದ್ದಾರೆ. ಹೀಗಾಗಿ ಈ ಬಾರಿಯ ಮೆಗಾ ಹರಾಜಿನಲ್ಲಿ ಬಹುತೇಕ ಎಲ್ಲಾ ಫ್ರಾಂಚೈಸಿಗಳು ಕೂಡ ಶ್ರೇಯಸ್ ಅಯ್ಯರ್ ರವರನ್ನು ಖರೀದಿಸಲು ತಾಮುಂದು ನಾಮುಂದು ಎಂದು ಪೈಪೋಟಿಗೆ ಇಳಿಯುವುದು ಫಿಕ್ಸ್.

ಶಾರುಖ್ ಖಾನ್; ತಮಿಳುನಾಡು ಮೂಲದ ಡೊಮೆಸ್ಟಿಕ್ ಆಟಗಾರನಾಗಿರುವ ಹಾಗೂ ಆಲ್-ರೌಂಡರ್ ಆಗಿರುವ ಶಾರುಖ್ ಖಾನ್ ಈ ಬಾರಿಯ ಮೆಗಾ ಹರಾಜಿನಲ್ಲಿ ದೊಡ್ಡ ಮೊತ್ತಕ್ಕೆ ಸೇಲ್ ಆಗುವಂತಹ ಆಟಗಾರನಾಗಿ ಮಿಂಚುತ್ತಾರೆ ಎಂಬುದಾಗಿ ಸುದ್ದಿಗಳು ಹೇಳುತ್ತಿವೆ. ಯಾಕೆಂದರೆ ಈ ವರ್ಷದ ಎಲ್ಲಾ ಡೊಮೆಸ್ಟಿಕ್ ಟೂರ್ನಮೆಂಟ್ ಗಳಲ್ಲಿ ಬೆಸ್ಟ್ ಪ್ರದರ್ಶನವನ್ನು ನೀಡಿದ್ದಾರೆ. ಇವರು ಮಾತ್ರವಲ್ಲದೆ ದೀಪಕ್ ಚಹರ್ ಹರ್ಷಲ್ ಪಟೇಲ್ ರಂತಹ ಹಲವಾರು ಯುವ ಉದಯೋನ್ಮುಖ ಆಟಗಾರರು ಕೂಡ ಈ ಬಾರಿಯ ಹರಾಜಿನಲ್ಲಿ ದೊಡ್ಡ ಮೊತ್ತಕ್ಕೆ ಸೇಲ್ ಆಗುವ ಮುನ್ಸೂಚನೆಯನ್ನು ನೀಡಿದ್ದಾರೆ.