ಭಾರತ ತಂಡದ ಸಾರ್ವಕಾಲಿಕ ಶ್ರೇಷ್ಠ ತಂಡ ಘೋಷಣೆ ಮಾಡಿದ ಲೆಜೆಂಡ್ ಸ್ಪಿನ್ನರ್ ಶೇನ್ ವಾರ್ನ್, ಸ್ಥಾನ ಪಡೆದ ಹನ್ನೊಂದು ಆಟಗಾರರು ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಮೈದಾನದಲ್ಲಿ ಲೆಜೆಂಡ್, ಹೊರಗಡೆ ಪ್ಲೇ ಬಾಯ್ ಎಂಬ ಖ್ಯಾತಿ ಹಾಗೂ ಕುಖ್ಯಾತಿಗೆ ಒಳಗಾಗಿರುವ ಆಸ್ಟ್ರೇಲಿಯಾದ ವಿಶ್ವ ವಿಖ್ಯಾತ ಸ್ಪಿನ್ನರ್ ಶೇನ್ ವಾರ್ನ್. ಆಸ್ಟ್ರೇಲಿಯಾ ಪರ ಅತಿ ಹೆಚ್ಚು ವಿಕೇಟ್ ಕಬಳಿಸಿರುವ ದಾಖಲೆ ಹೊಂದಿರುವ ಶೇನ್ ವಾರ್ನ್ ಈಗ ಭಾರತದ ಸಾರ್ವಕಾಲಿಕ ಶ್ರೇಷ್ಠ ಹನ್ನೊಂದು ಆಟಗಾರರ ಪಟ್ಟಿಯನ್ನ ಹೆಸರಿಸಿದ್ದಾರೆ. ಆದರೇ ವಿಪರ್ಯಾಸವೆಂಬಂತೆ ಸದ್ಯ ಕ್ರಿಕೇಟ್ ಜಗತ್ತಿನಲ್ಲಿ ಮಿಂಚುತ್ತಿರುವ ಯಾವ ಆಟಗಾರರು ಇಲ್ಲ.

ಭಾರತದ ಈಗಿನ ಕ್ರಿಕೇಟ್ ದಿಗ್ಗಜರಾದ ವಿರಾಟ್ ಕೊಹ್ಲಿ ಹಾಗೂ ಎಂ.ಎಸ್.ಧೋನಿಯವರಿಗೆ ಸ್ಥಾನ ನೀಡಿಲ್ಲ. ಈ ಬಗ್ಗೆ ಸ್ಪಷ್ಟಪಡಿಸಿರುವ ಶೇನ್ ವಾರ್ನ್ ನನ್ನ ವಿರುದ್ದ ಆಡಿದ ಆಟಗಾರರನ್ನ ಮಾತ್ರ ನಾನು ಈ ತಂಡದಲ್ಲಿ ಆಯ್ಕೆ ಮಾಡಿದ್ದೇನೆ. ಹಾಗಾಗಿ ಈಗ ಅಂತರಾಷ್ಟ್ರೀಯ ಕ್ರಿಕೇಟ್ ನಲ್ಲಿ ಮಿಂಚುತ್ತಿರುವ ಆಟಗಾರರು ಯಾರು ಸಹ ಸ್ಥಾನ ಪಡೆದಿಲ್ಲ ಎಂದು ಹೇಳಿದ್ದಾರೆ. ಆದರೇ ಮಹೇಂದ್ರ ಸಿಂಗ್ ಧೋನಿ ಒಬ್ಬ ಶ್ರೇಷ್ಠ ವಿಕೇಟ್ ಕೀಪರ್ ಬ್ಯಾಟ್ಸಮನ್ ಹಾಗೂ ವಿರಾಟ್ ಕೊಹ್ಲಿ ಕ್ರಿಕೇಟ್ ನ ಎಲ್ಲಾ ಮಾದರಿಯ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸಮನ್ ಎಂದು ಶೇನ್ ವಾರ್ನ್ ಹೇಳಿದ್ದಾರೆ.

ಭಾರತದ ಸಾರ್ವಕಾಲಿಕ ಶ್ರೇಷ್ಠ ತಂಡಕ್ಕೆ ಸೌರವ್ ಗಂಗೂಲಿಯವರನ್ನ ನಾಯಕನನ್ನಾಗಿ ಘೋಷಿಸಿದ್ದಾರೆ.ಕನ್ನಡಿಗರಾದ ಅನಿಲ್ ಕುಂಬ್ಳೆ ಹಾಗೂ ಜಾವಗಲ್ ಶ್ರೀನಾಥ್ ರವರು ಸಹ ವಾರ್ನ್ ಪ್ರಕಟಿಸಿದ ತಂಡದಲ್ಲಿ ಸ್ಥಾನ ಪಡೆದಿದ್ದಾರೆ‌.ಏಳು ಬ್ಯಾಟ್ಸಮನ್ ಗಳು, ಒಬ್ಬ ಆಲ್ ರೌಂಡರ್, ಹಾಗೂ ಮೂವರು ವೇಗದ ಬೌಲರ್ ಗಳು ವಾರ್ನ್ ಹೆಸರಿಸಿದ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ತಂಡ ಇಂತಿದೆ : ಸೌರವ್ ಗಂಗೂಲಿ(ನಾಯಕ), ವಿರೇಂದ್ರ ಸೆಹ್ವಾಗ್, ರಾಹುಲ್ ದ್ರಾವಿಡ್, ನವಜೋತ್ ಸಿಂಗ್ ಸಿಧು, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ಮಹಮದ್ ಅಜರುದ್ದೀನ್, ಕಪಿಲ್ ದೇವ್, ನಯನ್ ಮೋಂಗಿಯಾ, ,ಹರ್ಭಜನ್ ಸಿಂಗ್, ಜಾವಗಲ್ ಶ್ರೀನಾಥ್, ಅನಿಲ್ ಕುಂಬ್ಳೆ.