ಸೌತ್ ಆಫ್ರಿಕಾದಲ್ಲಿ ಅಬ್ಬರಿಸಲು ಸಜ್ಜಾದ ಕನ್ನಡಿಗರು. ಮೊದಲ ಟೆಸ್ಟ್ ಗೆ ಭಾರತ ತಂಡದ ಸಂಭಾವ್ಯ ಇಲೆವೆನ್ ಹೇಗಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಹಲವಾರು ಹಿನ್ನಡೆಗಳ ನಂತರ ಭಾರತ ಹಾಗೂ ದಕ್ಷಿಣ ಆಫ್ರಿಕಾದ ಸರಣಿ ಇದೇ ಡಿಸೆಂಬರ್ 26 ರಿಂದ ಆರಂಭವಾಗುತ್ತಿದೆ. ಮೊದಲ ಪಂದ್ಯಕ್ಕೆ ಸೆಂಚೂರಿಯನ್ ಕ್ರೀಡಾಂಗಣದ ಸ್ಪೋರ್ಟ್ ಪಾರ್ಕ್ ಸಿದ್ದವಾಗಿದೆ. ಅಭ್ಯಾಸ ಶಿಬಿರದಲ್ಲಿ ರೋಹಿತ್ ಶರ್ಮಾ ಗಾಯಗೊಂಡು ಸರಣಿಯಿಂದ ಹೊರ ನಡೆದರು. ಅದೇ ರೀತಿ ಆಲ್ ರೌಂಡರ್ ಗಳಾದ ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಶುಭಮಾನ್ ಗಿಲ್ ಸಹ ಈ ಟೂರ್ನಿಯಲ್ಲಿ ಸ್ಥಾನ ಪಡೆದಿಲ್ಲ.ಹಾಗಾಗಿ ಸೌತ್ ಆಫ್ರಿಕಾ ವಿರುದ್ದದ ಮೊದಲ ಟೆಸ್ಟ್ ನಲ್ಲಿ ಆಡುವ ಸಂಭಾವ್ಯ ಹನ್ನೊಂದರ ಬಳಗ ಹೀಗಿದೆ.

ಕನ್ನಡಿಗರಾದ ಕೆ.ಎಲ್.ರಾಹುಲ್ ಹಾಗೂ ಮಯಾಂಕ್ ಅಗರವಾಲ್ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ದಟ್ಟವಾಗಿದೆ. ರಾಹುಲ್ ಇಂಗ್ಲೆಂಡ್ ಸರಣಿಯಲ್ಲಿ ಉತ್ತಮವಾಗಿ ಆಡಿದ್ದರೇ, ಮಯಾಂಕ್ ನ್ಯೂಜಿಲೆಂಡ್ ವಿರುದ್ದದ ಸರಣಿಯಲ್ಲಿ ಶತಕ ಭಾರಿಸಿ ಫಾರ್ಮ್ ಗೆ ಮರಳಿದ್ದಾರೆ. ಇನ್ನು ಮೂರನೇ ಕ್ರಮಾಂಕದಲ್ಲಿ ಎಂದಿನಂತೇ ಚೇತೇಶ್ವರ ಪೂಜಾರ, ನಾಲ್ಕನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಆಡಿದರೇ, ಐದನೇ ಕ್ರಮಾಂಕದಲ್ಲಿ ಕಾನ್ಪುರ ಟೆಸ್ಟ್ ಹೀರೋ ಶ್ರೇಯಸ್ ಅಯ್ಯರ್ ಆಡಲಿದ್ದಾರೆ. ಫಾರ್ಮ್ ನಲ್ಲಿ ಇಲ್ಲದ ರಹಾನೆಗೆ ಸ್ಥಾನ ಸಿಗುವುದು ಅನುಮಾನವಾಗಿದೆ. ಆರನೇ ಕ್ರಮಾಂಕದಲ್ಲಿ ರಿಷಭ್ ಪಂತ್ ಆಡಲಿದ್ದು, ಅವರಿಗೆ ವೃದ್ಧಿಮಾನ್ ಸಹಾ ಜಾಗ ಬಿಟ್ಟುಕೊಡಬೇಕಾಗಿದೆ.

ಇನ್ನು ಜಡೇಜಾ ಅನುಪಸ್ಥಿತಿಯಲ್ಲಿ ಆರ್.ಅಶ್ವಿನ್ ಏಳನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಎಂಟನೇ ಕ್ರಮಾಂಕದಲ್ಲಿ ಶಾರ್ದೂಲ್ ಠಾಕೂರ್ ಆಲ್ ರೌಂಡರ್ ಪ್ರದರ್ಶನ ನೀಡುವ ಜವಾಬ್ದಾರಿ ಹೊರಬೇಕಾಗಿದೆ. ಒಂಬತ್ತನೇ ಕ್ರಮಾಂಕದಲ್ಲಿ ಮಹಮದ್ ಶಮಿ, ಹತ್ತನೇ ಕ್ರಮಾಂಕದಲ್ಲಿ ಜಸ್ಪ್ರಿತ್ ಬುಮ್ರಾ, ಹನ್ನೊಂದನೇ ಕ್ರಮಾಂಕದಲ್ಲಿ ಮಹಮದ್ ಸಿರಾಜ್ ಆಡಲಿದ್ದಾರೆ. ಇಶಾಂತ್ ಬದಲು ಸಿರಾಜ್ ರವರೇ ಆಫ್ರಿಕನ್ ಪಿಚ್ ಕಂಡಿಷನ್ ಗೆ ಸೂಕ್ತ ಆಯ್ಕೆಯಾಗಲಿದ್ದಾರೆ. ಸಂಭಾವ್ಯ ತಂಡ ಇಂತಿದೆ – ಕೆ.ಎಲ್.ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಆರ್.ಅಶ್ವಿನ್, ಶಾರ್ದೂಲ್ ಠಾಕೂರ್, ಮಹಮದ್ ಶಮಿ, ಜಸ್ಪ್ರಿತ್ ಬುಮ್ರಾ, ಮಹಮದ್ ಸಿರಾಜ್.