ಅದ್ಭುತ ಫಾರ್ಮ್ ನಲ್ಲಿ ಇದ್ದರೂ ರಾಹುಲ್ ರವರನ್ನು ಯಾಕೆ ಉಳಿಸಿಕೊಳ್ಳಲಿಲ್ಲ ಎಂದು ತಿಳಿಸಿದ ಕುಂಬ್ಳೆ. ಯಾಕಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಐಪಿಎಲ್ ಆಟಗಾರರ ಮೆಗಾ ಹರಾಜು ಶೀಘ್ರವೇ ನಡೆಯಲಿದೆ. ಇದರ ನಡುವೆ ಇತ್ತಿಚೆಗಷ್ಟೇ ಎಲ್ಲಾ ಫ್ರಾಂಚೈಸಿಗಳು ತಂಡದಲ್ಲಿ ಕೆಲವೊಂದು ಆಟಗಾರರನ್ನ ರಿಟೈನ್ ಮಾಡಿಕೊಂಡವು. ಅದರಲ್ಲೂ ಅಚ್ಚರಿಯೆಂಬಂತೆ ಪಂಜಾಬ್ ಕಿಂಗ್ಸ್ ತಂಡದಲ್ಲಿ ಕನ್ನಡಿಗ ಮಯಾಂಕ್ ಅಗರ್ವಾಲ್ ಹಾಗೂ ಅರ್ಶದೀಪ್ ಸಿಂಗ್ ರವರನ್ನ ಮಾತ್ರ ರಿಟೇನ್ ಮಾಡಿಕೊಂಡಿತು. ಆದರೇ ತಂಡದ ನಾಯಕ ಹಾಗೂ ಇನ್ ಫಾರ್ಮ್ ಬ್ಯಾಟ್ಸಮನ್ ಕೆ.ಎಲ್.ರಾಹುಲ್ ರನ್ನ ಮಾತ್ರ ತಂಡದಲ್ಲಿ ಉಳಿಸಿಕೊಳ್ಳಲಿಲ್ಲ.

ಈ ನಡುವೆ ಕೆ.ಎಲ್.ರಾಹುಲ್ 20 ಕೋಟಿ ರೂಪಾಯಿಗೆ ಲಕ್ನೋ ತಂಡದ ಜೊತೆ ಪೂರ್ವ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಸುದ್ದಿಗಳು ಮಾಧ್ಯಮದಲ್ಲಿ ವರದಿಯಾಗಿದ್ದವು. ಈ ಎಲ್ಲಾ ವದಂತಿಗಳ ನಡುವೆ ಪಂಜಾಬ್ ಕಿಂಗ್ಸ್ ತಂಡದ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಮುಕ್ತವಾಗಿ ಮಾತನಾಡಿದ್ದಾರೆ. ಕೆ.ಎಲ್.ರಾಹುಲ್ ಒಬ್ಬ ಪ್ರತಿಭಾವಂತ ಕ್ರಿಕೇಟಿಗ. ಆತ ನಮ್ಮ ಪಂಜಾಬ್ ಕಿಂಗ್ಸ್ ತಂಡದಲ್ಲಿ ನಾಲ್ಕು ವರ್ಷದಿಂದ ಇದ್ದರು. ಕಳೆದೆರೆಡು ವರ್ಷಗಳಿಂದ ಆತ ಪಂಜಾಬ್ ಕಿಂಗ್ಸ್ ತಂಡದ ನಾಯಕನಾಗಿ ಅತ್ಯುತ್ತಮ ಪ್ರದರ್ಶನ ನೀಡಿದ್ದ.

ಅದಲ್ಲದೇ ಎರಡು ಸೀಸನ್ ಗಳಲ್ಲಿ ಆರೇಂಜ್ ಕ್ಯಾಪ್ ಗಳಿಸುವ ಮೂಲಕ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದ. ಅವರನ್ನ ರಿಟೇನ್ ಮಾಡಿಕೊಳ್ಳಲು ನಾವು ಸಹ ಮನಸ್ಸು ಮಾಡಿದ್ದೆವು. ಆದರೇ ಅವರೇ ಈ ಭಾರಿ ನನಗೆ ಹರಾಜಿನಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿ ಎಂದು ವಿನಂತಿಸಿಕೊಂಡಿದ್ದರು. ಹಾಗಾಗಿ ಅವರನ್ನ ರಿಟೇನ್ ಮಾಡಿಕೊಳ್ಳದೇ ತಂಡದಿಂದ ಬಿಡುಗಡೆಗೊಳಿಸಲಾಯಿತು ಎಂದು ಹೇಳಿದರು. ಮಯಾಂಕ್ ಸಹ ನಾಲ್ಕು ವರ್ಷದಿಂದ ಪಂಜಾಬ್ ಕಿಂಗ್ಸ್ ಪರ ಆಡುತ್ತಿದ್ದು, ಅವರಿಗೆ ಸಾಕಷ್ಟು ಅನುಭವ ಇದೆ. ಇದಲ್ಲದೇ ಅರ್ಶದೀಪ್ ಸಿಂಗ್ ಸಹ ಉತ್ತಮ ಬೌಲರ್ ಆಗಿದ್ದು, ಅವರು ಸಹ ತಂಡಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಈ ಭಾರಿ ಸಂಪೂರ್ಣ ಹೊಸ ತಂಡ ಕಟ್ಟಲಿದ್ದು, ಪಂಜಾಬ್ ಕಿಂಗ್ಸ್ ಈ ಭಾರಿಯ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ವ್ಯಕ್ತಪಡಿಸಿದರು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.