ಕೊಹ್ಲಿ ನಾಯಕತ್ವ ತ್ಯಜಿಸಿದರೆ ಏನು, ರಾಹುಲ್ ಸಿಗದಿದ್ದರೂ ಪರವಾಗಿಲ್ಲ ಆರ್ಸಿಬಿ ನಾಯಕ ಪಟ್ಟ ಬಹುತೇಕ ಫೈನಲ್. ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಆರ್ಸಿಬಿ ತಂಡ ಈ ಸೀಸನ್ ನಲ್ಲಿಯೂ ಸಹ ಏಲಿಮಿನೇಟರ್ ಪಂದ್ಯದಲ್ಲಿ ನಿರಾಸೆ ಅನುಭವಿಸಿತ್ತು. ಅದಲ್ಲದೇ ನಾಯಕರಾಗಿ ವಿರಾಟ್ ಕೊಹ್ಲಿ ಸಹ ಇದೇ ನನ್ನ ಕೊನೆಯ ಸೀಸನ್, ಆದರೇ ಆಟಗಾರನಾಗಿ ಮುಂದುವರೆಯಲಿದ್ದೇನೆ ಎಂದು ಘೋಷಿಸಿದ್ದರು. ವಿರಾಟ್ ಕೊಹ್ಲಿ ನಂತರ ಆರ್ಸಿಬಿಯ ಆಪತ್ಭಾಂದವ ಎಬಿ ಡಿ ವಿಲಿಯರ್ಸ್ ಮುಂದಿನ ನಾಯಕರಾಗಬಹುದು ಎಂದು ಎಲ್ಲರೂ ಊಹಿಸಿದ್ದರು. ಆದರೇ ಬದಲಾದ ಸನ್ನಿವೇಶದಲ್ಲಿ ಎಬಿ ಡಿ ವಿಲಿಯರ್ಸ್ ಎಲ್ಲಾ ಮಾದರಿಯ ಕ್ರಿಕೇಟ್ ಗೂ ನಿವೃತ್ತಿ ಘೋಷಿಸಿದರು. ಇದು ಆರ್ಸಿಬಿ ತಂಡಕ್ಕೆ ನುಂಗಲಾರದ ತುತ್ತಾಗಿದೆ. ಸದ್ಯ ಆರ್ಸಿಬಿ ತಂಡ ನೂತನ ನಾಯಕನಿಗಾಗಿ ಹುಡುಕಾಡುತ್ತಿದೆ.

ಇತ್ತ ಹರಾಜಿನಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಅಥವಾ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ರವರನ್ನ ಖರೀದಿಸಿ, ಅವರನ್ನ ನಾಯಕನನ್ನಾಗಿ ಮಾಡುತ್ತದೆ ಎಂದು ಮೂಲಗಳು ಹೇಳಿದ್ಧರೂ, ಅದು ಅಂದುಕೊಂಡಷ್ಟು ಸುಲಭವಲ್ಲ. ಹೀಗಾಗಿ ಇರುವ ಆಟಗಾರರಲ್ಲಿಯೇ ಆರ್ಸಿಬಿ ತಂಡ ನೂತನ ನಾಯಕನನ್ನ ಎದುರು ನೋಡುತ್ತಿದೆ. ಕನ್ನಡಿಗ ದೇವದತ್ ಪಡಿಕ್ಕಲ್, ಲೆಗ್ ಸ್ಪಿನ್ಪರ್ ಯುಜವೇಂದ್ರ ಚಾಹಲ್ ಗೆ ಅನುಭವವಿದ್ದರೂ, ನಾಯಕನ ಒತ್ತಡ ನಿಭಾಯಿಸಲು ಆಗುವುದಿಲ್ಲ.

ಆ ಕಾರಣಕ್ಕೆ ಆರ್ಸಿಬಿ ತಂಡ ಈ ಭಾರಿ ಎಬಿ ಡಿ ವಿಲಿಯರ್ಸ್ ಬದಲು ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸವೆಲ್ ರನ್ನ ರಿಟೇನ್ ಮಾಡಿಕೊಳ್ಳುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೇ, ಗ್ಲೆನ್ ಮ್ಯಾಕ್ಸವೆಲ್ ಆರ್ಸಿಬಿ ತಂಡದ ನೂತನ ನಾಯಕರಾಗಲಿದ್ದಾರೆ. ಈ ಹಿಂದೆ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿ ಅನುಭವ ಹೊಂದಿರುವ ಮ್ಯಾಕ್ಸವೆಲ್ ಆಸ್ಟ್ರೇಲಿಯಾ ತಂಡದ ನಾಯಕರಾಗಿಯೂ ಸಹ ಅನುಭವ ಹೊಂದಿದ್ದಾರೆ. ಹೀಗಾಗಿ ಮ್ಯಾಕ್ಸವೆಲ್ ಆರ್ಸಿಬಿ ತಂಡದ ನೂತನ ನಾಯಕರಾಗುತ್ತಿರುವುದು ಬಹುತೇಖ ಖಚಿತವಾಗಿದೆ. ನಿಮ್ಮ ಪ್ರಕಾರ ಆರ್ಸಿಬಿ ತಂಡದ ಮುಂದಿನ ನಾಯಕ ಯಾರಾಗಬೇಕೆಂಬುದನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ.