ಎಬಿಡಿ ನಿವೃತ್ತಿ ನಂತರ ಆರ್ಸಿಬಿ ಉಳಿಸಿಕೊಳ್ಳುತ್ತಿರುವ ನಾಲ್ಕು ಆಟಗಾರರು ಯಾರ್ಯಾರು ಗೊತ್ತೇ? ಈ ಅಚ್ಚರಿಯ ಲಿಸ್ಟ್ ಕುರಿತು ನಿಮ್ಮ ಅಭಿಪ್ರಾಯ??

ನಮಸ್ಕಾರ ಸ್ನೇಹಿತರೇ ಐಪಿಎಲ್ ನ ಮೆಗಾ ಹರಾಜು ಕೆಲವೇ ದಿನಗಳಲ್ಲಿ ನಡೆಯಲಿದೆ. ಈಗಾಗಲೇ ಈ ಬಗ್ಗೆ ನಿಯಮಗಳನ್ನು ತಿಳಿಸಿರುವ ಐಪಿಎಲ್ ಆಡಳಿತ ಮಂಡಳಿ, ಎಲ್ಲಾ ಫ್ರಾಂಚೈಸಿಗಳಿಗೂ ನಿಯಮಗಳನ್ನ ತಿಳಿಸಿದೆ. ಪ್ರತಿ ಫ್ರಾಂಚೈಸಿಗಳು ಸಹ ನಾಲ್ಕು ಆಟಗಾರರನ್ನ ರಿಟೈನ್ ಮಾಡಿಕೊಳ್ಳಬಹುದು. ಅದೇ ರೀತಿ ಆರ್ಸಿಬಿ ರಿಟೈನ್ ಮಾಡಿಕೊಳ್ಳಲಿರುವ ನಾಲ್ಕು ಆಟಗಾರರು ಯಾರು ಎಂದು ತಿಳಿಯೋಣ ಬನ್ನಿ.

ಹೌದು ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ಎಬಿಡಿ ರವರು ನಿವೃತ್ತಿ ಘೋಷಣೆ ಮಾಡಿರುವ ಕಾರಣ ಆರ್ಸಿಬಿ ಉಳಿಸಿಕೊಳ್ಳುವ ಆಟಗಾರರ ಕುರಿತು ಚರ್ಚೆ ನಡೆಯುತ್ತಿದೆ. ಈ ಸಮಯದಲ್ಲಿ ನಾಲ್ಕು ಹೆಸರುಗಳು ಬಲವಾಗಿ ಕೇಳಿಬರುತ್ತಿವೆ. ಈ ಹೆಸರು ಈ ಕೆಳಗಿನಂತೆ ಇದ್ದು, ಈ ಆಟಗಾರರ ಕುರಿತು ನಿಮ್ಮ ಅಭಿಪ್ರಾಯ ನೋಡಿ. ಮೊದಲನೆಯದಾಗಿ ವಿರಾಟ್ ಕೊಹ್ಲಿ – ನಾಯಕತ್ವ ಸ್ಥಾನದಿಂದ ಇಳಿದರೂ, ಆರ್ಸಿಬಿ ತಂಡದಲ್ಲಿ ಮುಂದುವರಿಯುವುದಾಗಿ ವಿರಾಟ್ ಘೋಷಿಸಿದ್ದಾರೆ. ಹೀಗಾಗಿ ವಿರಾಟ್ ರನ್ನ ಆರ್ಸಿಬಿ ರಿಟೇನ್ ಮಾಡುತ್ತಿದ್ದು 16 ಕೋಟಿ ರೂಪಾಯಿ ನೀಡಲಿದೆ.

ಎರಡನೆಯದಾಗಿ ಹರ್ಷಲ್ ಪಟೇಲ್ – ಆರ್ಸಿಬಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಬಂದು, ಪರ್ಪಲ್ ಕ್ಯಾಪ್ ಪಡೆದರು. ಸ್ಲಾಗ್ ಓವರ್ ಗಳಲ್ಲಿ ಉತ್ತಮ ಬೌಲಿಂಗ್ ಮಾಡುವ ಹರ್ಷಲ್ ಪಟೇಲ್ ರನ್ನ ತನ್ನಲ್ಲೇ ಉಳಿಸಿಕೊಳ್ಳಲು ನಿರ್ಧರಿಸಿದೆ. ಇನ್ನು ಮೂರನೆಯದಾಗಿ ಯುಜವೇಂದ್ರ ಚಾಹಲ್ – ಆರ್ಸಿಬಿ ತಂಡದ ಪ್ರಮುಖ ಬೌಲರ್ ಹಾಗೂ ವಿಕೇಟ್ ಟೇಕಿಂಗ್ ಬೌಲರ್. ಇವರನ್ನು ಸಹ ಆರ್ಸಿಬಿ ತನ್ನಲ್ಲೇ ಉಳಿಸಿಕೊಳ್ಳುವ ನಿರ್ಧಾರ ಮಾಡಿದೆ.

ನಾಲ್ಕನೆಯದಾಗಿ ದೇವದತ್ ಪಡಿಕ್ಕಲ್ – ಕರ್ನಾಟಕದ ಸ್ಟೈಲಿಶ್ ಬ್ಯಾಟ್ಸಮನ್ ದೇವದತ್, ಆರ್ಸಿಬಿ ಪರ ಹೆಚ್ಚು ರನ್ ಗಳಿಸಿದ ಬ್ಯಾಟ್ಸಮನ್. ಹೀಗಾಗಿ ಅವರು ಈ ಭಾರಿ ಆರ್ಸಿಬಿ ತಂಡದಲ್ಲಿಯೇ ಉಳಿಯುವ ಸಾಧ್ಯತೆ ಹೆಚ್ಚಿದೆ. ಇವರಲ್ಲದೇ ಮಹಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಕೆ.ಎಸ್.ಭರತ್ ರವರನ್ನ ಉಳಿಸಿಕೊಳ್ಳಲು ಸಹ ಯೋಚಿಸುತ್ತಿದೆ. ಆರ್ಸಿಬಿ ಯಾವ ನಾಲ್ಕು ಆಟಗಾರರನ್ನು ರಿಟೇನ್ ಮಾಡಿಕೊಳ್ಳಬೇಕು ಎಂಬ ನಿಮ್ಮ ಅಭಿಪ್ರಾಯವನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.