ಕೆ.ಎಲ್.ರಾಹುಲ್ ರವರನ್ನು ಹೀಗೇ ಆಡಲು ಬಿಡಿ, ರಾಹುಲ್ ರವರ ಆಟದ ಕುರಿತು ತಂಡಕ್ಕೆ ಸಂದೇಶ ರವಾನಿಸಿದ ಹರ್ಭಜನ್ ಏನಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಐಸಿಸಿ ಟಿ 20 ವಿಶ್ವಕಪ್ ನ ಕಾವು ಜೋರಾಗಿ ನಡೆಯುತ್ತಿದೆ. ಸೂಪರ್ 12 ರಿಂದ ಸೆಮಿಫೈನಲ್ ಹಂತಕ್ಕೆ ಹೋಗಲು ಎಲ್ಲಾ ತಂಡಗಳು ಪ್ರಯತ್ನ ಪಡುತ್ತಿವೆ. ಇನ್ನು ಮೊದಲ ಪಂದ್ಯದಲ್ಲಿ ತನ್ನ ಸಿಂಪ್ರದಾಯಕ ಎದುರಾಳಿ ಪಾಕಿಸ್ತಾನದ ವಿರುದ್ದ ಸೋತಿರುವ ಭಾರತ ಈ ಭಾನುವಾರ ನ್ಯೂಜಿಲೆಂಡ್ ವಿರುದ್ದ ತನ್ನ ಮಾಡು ಇಲ್ಲವೇ ಮಡಿ ಪಂದ್ಯ ಆಡಲಿದೆ. ಎರಡೂ ತಂಡಗಳಿಗೆ ಈ ಪಂದ್ಯ ಅನಿವಾರ್ಯವಾಗಿದ್ದು ಗೆಲ್ಲುವ ತಂಡಕ್ಕೆ ಸೆಮಿಫೈನಲ್ ಅವಕಾಶ ಹೆಚ್ಚಲಿದ್ದು, ಸೋಲುವ ತಂಡ ಬಹುತೇಖ ಟೂರ್ನಿಯಿಂದ ಹೊರಬಿದ್ದಂತೆ. ಇನ್ನು ಈ ಪಂದ್ಯದ ಬಗ್ಗೆ ಮಾತನಾಡಿರುವ ಭಾರತ ತಂಡದ ಮಾಜಿ ಆಟಗಾರ ಹರ್ಭಜನ್ ಸಿಂಗ್, ತಂಡದಲ್ಲಿ ಕೆಲವು ಬದಲಾವಣೆಗಳನ್ನ ಸೂಚಿಸಿದ್ದಾರೆ.

ಹರ್ಭಜನ್ ಪ್ರಕಾರ, ಭಾರತ ತಂಡದ ಆರಂಭಿಕರಾಗಿ ರೋಹಿತ್ ಶರ್ಮಾ ಜೊತೆ ಕೆ.ಎಲ್.ರಾಹುಲ್ ಕಣಕ್ಕಿಳಿಯುವ ಬದಲು ಇಶಾನ್ ಕಿಶನ್ ಕಣಕ್ಕಿಳಿಯಬೇಕಂತೆ. ಆರಂಭಿಕರಾಗಿ ಭರ್ಜರಿ ಯಶಸ್ಸು ಕಂಡಿರುವ ಕಿಶನ್ ಪವರ್ ಪ್ಲೇ ಸಮಯದಲ್ಲಿ ಉತ್ತಮ ಶಾಟ್ ಭಾರಿಸುತ್ತಾರೆ. ರನ್ ವೇಗಕ್ಕೂ ಸಹಾಯ ಮಾಡುತ್ತಾರೆ. ಇದು ರೋಹಿತ್ ಶರ್ಮಾ ಮೇಲಿನ ಒತ್ತಡ ಕಡಿಮೆ ಮಾಡುತ್ತದೆ. ಹಾಗೂ ಲೆಫ್ಟ್ ಮತ್ತು ರೈಟ್ ಕಾಂಬಿನೇಷನ್ ಆಡಿದರೇ, ಎದುರಾಳಿ ಬೌಲರ್ ಗಳು ಸಹ ಲೆಂಗ್ತ್ ಮತ್ತು ಲೈನ್ ತಪ್ಪುವ ಸಾಧ್ಯತೆ ಇರುತ್ತದೆ. ಇದು ಭಾರತ ತಂಡಕ್ಕೆ ಉತ್ತಮ ರನ್ ಗಳಿಸುವ ವಾತಾವರಣ ನಿರ್ಮಿಸುತ್ತದೆ ಎಂದು ಹೇಳಿದರು.

ಇನ್ನು ಇಶಾನ್ ಕಿಶನ್ ರನ್ನ ಆರಂಭಿಕರನ್ನಾಗಿ ಆಡಿಸಿದರೇ, ರಾಹುಲ್ ರನ್ನ ಕೈ ಬಿಡುತ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಿರುವ ಹರ್ಭಜನ್, ರಾಹುಲ್ ರನ್ನ ಕೈ ಬಿಡುವ ಪ್ರಶ್ನೆಯೇ ಇಲ್ಲ. ರಾಹುಲ್ ತಂಡದ ಹಿತದೃಷ್ಠಿಯಿಂದ ನಾಲ್ಕು ಅಥವಾ ಐದನೇ ಕ್ರಮಾಂಕದಲ್ಲಿ ಆಡುವುದು ಉತ್ತಮ. ಈ ಮೂಲಕ ತಂಡದ ಬ್ಯಾಟಿಂಗ್ ಚಿಂತೆ ಸಹ ದೂರವಾಗುತ್ತದೆ ಎಂದು ಹೇಳಿದರು. ರಾಹುಲ್ ಕೇವಲ ಆರಂಭಿಕರಾಗಿ ಮಾತ್ರವಲ್ಲದೇ, ಕೆಳ ಕ್ರಮಾಂಕದಲ್ಲಿ ಸಹ ಬಂದು ಉತ್ತಮ ಆಟವಾಡಿದ್ದಾರೆ‌. ಹಾಗಾಗಿ ರಾಹುಲ್ ಒಬ್ಬ ಚಾಂಪಿಯನ್ ಆಟಗಾರನಾಗಿದ್ದು, ಭಾರತ ತಂಡಕ್ಕೆ ಸಿಕ್ಕ ಅಮೂಲ್ಯ ರತ್ನ ಎಂದು ಬಣ್ಣಿಸಿದರು.

ಇನ್ನು ಹಾರ್ದಿಕ್ ಪಾಂಡ್ಯ ಉತ್ತಮ ಆಟಗಾರನಾಗಿದ್ದು, ಅವರನ್ನ ತಂಡದಲ್ಲಿ ಉಳಿಸಿಕೊಳ್ಳುವುದು ಉತ್ತಮ. ಆತ ಯಾವಾಗ ಬೇಕಾದರೂ ಫಾರ್ಮ್ ಗೆ ಮರಳುತ್ತಾರೆ ಎಂದಿರುವ ಭಜ್ಜಿ, ನ್ಯೂಜಿಲೆಂಡ್ ವಿರುದ್ದದ ಪಂದ್ಯದಲ್ಲಿ ಭಾರತ, ಭುವನೇಶ್ವರ್ ಕುಮಾರ್ ಬದಲು, ಶಾರ್ದೂಲ್ ಠಾಕೂರ್ ರವರನ್ನ ಆಡಿಸಬೇಕು. ಶಾರ್ದೂಲ್ ಸದ್ಯ ಭುವಿಗಿಂತ ಒಳ್ಳೆಯ ಫಾರ್ಮ್ ನಲ್ಲಿ ಇದ್ದಾರೆ ಎಂದು ಹೇಳಿದರು. ಹರ್ಭಜನ್ ರವರ ಪ್ರಕಾರ, ನ್ಯೂಜಿಲೆಂಡ್ ವಿರುದ್ದ ಆಡಲಿರುವ ಭಾರತ ತಂಡ ಇಂತಿದೆ. – ರೋಹಿತ್ ಶರ್ಮಾ, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮಹಮದ್ ಶಮಿ, ಜಸಪ್ರಿತ್ ಬುಮ್ರಾ, ವರುಣ್ ಚಕ್ರವರ್ತಿ.