ದೀಪಕ್ ಚಾಹರ್ ಬ್ಯಾಟಿಂಗ್ ಗೆ ಆ ಸೂಪರ್ ಸ್ಟಾರ್ ಕಾರಣ ಎಂದ ರಾಹುಲ್ ದ್ರಾವಿಡ್, ಯಾರು ಆ ಸೂಪರ್ ಸ್ಟಾರ್ ಗೊತ್ತಾ??

ನಮಸ್ಕಾರ ಸ್ನೇಹಿತರೇ ಹಲವು ನಾಟಕೀಯ ಬೆಳವಣಿಗೆಗಳ ಸಾಕ್ಷಿಗೆ ಕಾರಣವಾದ ಭಾರತ-ಶ್ರೀಲಂಕಾ ಏರಡನೇ ಏಕದಿನ ಪಂದ್ಯದಲ್ಲಿ ಕೊನೆಗೂ ಭಾರತ ರೋಚಕ ಜಯ ಸಾಧಿಸಿದೆ. ಇನ್ನೇನು ಭಾರತಕ್ಕೆ ಸೋಲು ಖಚಿತ ಎಂದು ಭಾವಿಸುತ್ತಿರುವಾಗಲೇ, ಅನೀರಿಕ್ಷಿತವಾಗಿ ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದ ದೀಪಕ್ ಚಾಹರ್ ರವರ ಸಾಹಸದ ನೆರವಿನಿಂದ ಭಾರತ ಎರಡು ವಿಕೇಟ್ ಗಳ ಅದ್ಭುತ ಜಯ ಸಾಧಿಸಿದಲ್ಲದೇ, ಸರಣಿಯನ್ನು ಸಹ ತನ್ನದಾಗಿಸಿಕೊಂಡಿತು.

ಮೊದಲು ಬ್ಯಾಟ್ ಮಾಡಿದ ಲಂಕಾ ತಂಡ 275 ರನ್ನುಗಳ ಬೃಹತ್ ಮೊತ್ತ ಕಲೆಹಾಕಿತು. ಭಾರತದ ಪರ ಲೆಗ್ ಸ್ಪಿನ್ನರ್ ಯುಜವೇಂದ್ರ ಚಾಹಲ್, ದೀಪಕ್ ಚಾಹರ್, ಭುವನೇಶ್ವರ್ ತಲಾ ಮೂರು, ಎರಡು ವಿಕೇಟ್ ಪಡೆದು ಮಿಂಚಿದರು. ನಂತರ ಬ್ಯಾಟಿಂಗ್ ಗೆ ಇಳಿದ ಭಾರತ ತಂಡ ಆರಂಭದಲ್ಲೇ ಪೃಥ್ವಿ ಶಾ ಮತ್ತು ಇಶಾನ್ ಕಿಶನ್ ವಿಕೇಟ್ ಕಳೆದುಕೊಂಡಿತು. ನಂತರ ಹಂತಹಂತವಾಗಿ ಶಿಖರ್ ಧವನ್, ಮನೀಷ್ ಪಾಂಡೆ, ಸೂರ್ಯ ಕುಮಾರ್ ಯಾದವ್ ಹಾಗೂ ಕೃನಾಲ್ ಪಾಂಡ್ಯ ವಿಕೇಟ್ ಕಳೆದುಕೊಂಡಿತು. ಆಗ ಭಾರತಕ್ಕೆ ಸೋಲು ಇನ್ನೇನು ಖಚಿತ ಎನ್ನುವಷ್ಟರಲ್ಲಿ ಬೌಲರ್ ಗಳಾದ ದೀಪಕ್ ಚಾಹರ್ ಮತ್ತು ಭುವನೇಶ್ವರ್ ಕುಮಾರ್ ಎಂಟನೇ ವಿಕೇಟ್ ಗೆ ಮುರಿಯದ 84 ರನ್ನುಗಳ ಜೊತೆಯಾಟವಾಡಿ ಭಾರತಕ್ಕೆ ಜಯ ತಂದಿತ್ತರು.

ಈ ನಡುವೆ ಪಂದ್ಯ ಮುಗಿದ ನಂತರ ಮಾತನಾಡಿದ ಕೋಚ್ ರಾಹುಲ್ ದ್ರಾವಿಡ್, ದೀಪಕ್ ಚಾಹರ್ ರವರ ಸಾಹಸದ ಬಗ್ಗೆ ಮೆಚ್ಚುಗೆ ಸೂಚಿಸಿದರು. ಅದಲ್ಲದೇ ದೀಪಕ್ ಚಾಹರ್ ರವರ ಈ ಪ್ರದರ್ಶನದ ಬಗ್ಗೆ ನನಗೇನೂ ಹೆಚ್ಚು ಆಶ್ಚರ್ಯ ಉಂಟಾಗಲಿಲ್ಲ. ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡುವಾಗ , ಮಹೇಂದ್ರ ಸಿಂಗ್ ಧೋನಿಯವರ ಜೊತೆ ಆಡುವಾಗ ಇಂತಹ ಪರಿಸ್ಥಿತಿಗಳನ್ನು ಎದುರಿಸಿ ಅನುಭವ ಪಡೆದಿರುತ್ತಾರೆ. ಆ ಅನುಭವವನ್ನ ಇಲ್ಲಿ ಸಂಪೂರ್ಣ ಧಾರೆ ಎರೆದಿದ್ದಾರೆ. ಹಾಗಾಗಿಯೇ ದೀಪಕ್ ಚಾಹರ್ ಒಳಗಿರುವ ಪಕ್ವ ಬ್ಯಾಟ್ಸಮನ್ ಇಂದು ಹೊರಗಡೆ ಬಂದಿದ್ದಾನೆ ಎಂದು ಶ್ಲಾಘಿಸಿದರು. ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲೂ ಸಹ ಭಾರತ ದ ಸಾಹಸಮಯ ಗೆಲುವಿನ ಚರ್ಚೆ ಜೋರಾಗಿ ನಡೆದಿದ್ದು, ಈ ಗೆಲುವಿನ ಶ್ರೇಯಸ್ಸು ರಾಹುಲ್ ದ್ರಾವಿಡ್ ರವರಿಗೂ ಸಹ ಸಲ್ಲಬೇಕು ಎಂದು ಹೇಳುತ್ತಿದ್ದಾರೆ. ರಾಹುಲ್ ದ್ರಾವಿಡ್ ಸ್ವಲ್ಪ ಹೊತ್ತುಗಳ ಕಾಲ ಟ್ರೆಂಡಿಂಗ್ ನಲ್ಲಿ ಸಹ ಇದ್ದರು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ.