ಮುಂಬೈ ಲಾಬಿ ಇಲ್ಲದೆ, ಕೊಹ್ಲಿ ಇಂಗ್ಲೆಂಡ್ ವಿರುದ್ಧ ರಚಿಸಲು ಬಯಸುತ್ತಿರುವ ತಂಡದಲ್ಲಿ ಯಾರ್ಯಾರಿದ್ದಾರೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಅನುಭವಿಸಿದ ದಯನೀಯ ಸೋಲು ಈಗ ಭಾರತ ತಂಡದಲ್ಲಿ ಹಲವು ಹೊಸ ಬದಲಾವಣೆಗಳಿಗೆ ಕಾರಣವಾಗುತ್ತಿದೆ. ಮುಂದಿನ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಗೆ ಇಂಗ್ಲೆಂಡ್ ವಿರುದ್ದದ ಸರಣಿ ಅತಿ ಮಹತ್ವವಾಗಲಿದ್ದು 5 ಟೆಸ್ಟ್ ಗಳ ಸರಣಿಯಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಬೇಕಾದ ಅನಿವಾರ್ಯತೆಯಲ್ಲಿ ಸಿಲುಕಿದೆ.

ಆರಂಭಿಕ ಶುಭಮಾನ್ ಗಿಲ್ ಹೊರಬಿದ್ದ ನಂತರ ಈಗ ಮಯಾಂಕ್ ಅಗರ್ ವಾಲ್ ರನ್ನ ಆ ಸ್ಥಾನಕ್ಕೆ ಆರಿಸಿದೆ. ಮೀಸಲು ಆರಂಭಿಕರಾಗಿ ಆಂದ್ರ ಪ್ರದೇಶದ ಹನುಮ ವಿಹಾರಿಯನ್ನ ಆಯ್ಕೆ ಮಾಡಲಾಗಿದೆ. ಮಯಾಂಕ್ ಹಾಗೂ ಹನುಮ ವಿಹಾರಿ ಹೊಸ ಚೆಂಡಿನ ಜೊತೆ ಉತ್ತಮವಾಗಿ ಆಡುತ್ತಾರೆ. ಈ ಹಿಂದೆ ಆಸ್ಟ್ರೇಲಿಯಾದಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ನಲ್ಲಿ ಈ ಜೋಡಿ ಆರಂಭಿಕರಾಗಿ ಕಣಕ್ಕಿಳಿದಿತ್ತು. ಹಾಗಾಗಿ ಮಯಾಂಕ್ ಅಗರವಾಲ್ ಮತ್ತು ಹನುಮ ವಿಹಾರಿಯವರನ್ನ ಆರಂಭಿಕರು ಎಂಬುದಾಗಿ ತಂಡ ಇನ್ಮುಂದೆ ಪರಿಗಣಿಸಲಿದೆ.

ಇನ್ನು ಕರ್ನಾಟಕದ ಮತ್ತೊಬ್ಬ ಪ್ರತಿಭಾನ್ವಿತ ಬ್ಯಾಟ್ಸಮನ್ ಆದ ಕೆ.ಎಲ್.ರಾಹುಲ್ ರವರನ್ನ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಎಂದು ತಂಡ ಪರಿಗಣಿಸಲಿದೆ. ರಾಹುಲ್ ಹೊಸ ಚೆಂಡಿಗಿಂತ, ಚೆಂಡು ಹಳೇಯದಾದ ನಂತರ ಬ್ಯಾಟಿಂಗ್ ಇಳಿದರೇ ಉತ್ತಮವಾಗಿ ಬ್ಯಾಟ್ ಬೀಸುತ್ತಾರೆ. ಇದು ಈ ಹಿಂದೆ ಸಾಕಷ್ಟು ಪಂದ್ಯಗಳಲ್ಲಿ ಋಜುವಾತಾಗಿದೆ. ಹಾಗಾಗಿ ರಾಹುಲ್ ರನ್ನ ಕ್ರಮಾಂಕದಲ್ಲಿ ಆಡಿಸಲು ಟೀಂ ಇಂಡಿಯಾದ ಮ್ಯಾನೇಜ್ ಮೆಂಟ್ ಮುಂದಾಗಿದೆ.

ಒಟ್ಟಿನಲ್ಲಿ ಭಾರತ ತಂಡ ಮಹತ್ವದ ಬದಲಾವಣೆಯೊಂದಿಗೆ ಕಣಕ್ಕಿಳಿಯುತ್ತಿದೆ. ಕೆ.ಎಲ್.ರಾಹುಲ್ ಹಾಗೂ ಮಯಾಂಕ್ ಅಗರ್ ವಾಲ್ ರವರು ತಂಡಕ್ಕೆ ಆಗಮಿಸುವುದರಿಂದ ಹಿರಿಯ ಆಟಗಾರರ ಮೇಲಿನ ಒತ್ತಡ ಕಡಿಮೆಯಾಗಿ ಅವರು ಉತ್ತಮ ಪ್ರದರ್ಶನ ನೀಡುವ ಸಾಧ್ಯತೆಯಿದೆ. ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ. ತಂಡ ಇಂತಿದೆ – ರೋಹಿತ್ ಶರ್ಮಾ, ಮಯಾಂಕ್ ಅಗರವಾಲ್, ಚೇತೆಶ್ವರ ಪೂಜಾರ, ವಿರಾಟ್ ಕೋಹ್ಲಿ, ಅಜಿಂಕ್ಯಾ ರಹಾನೆ,ಕೆ.ಎಲ್ ರಾಹುಲ್, ರಿಷಭ್ ಪಂತ್, ಆರ್.ಅಶ್ವಿನ್, ಇಶಾಂತ್ ಶರ್ಮಾ, ಮಹಮದ್ ಶಮಿ,ಜಸ್ಪ್ರಿತ್ ಬುಮ್ರಾ.