ಫೈನಲ್ ಪಂದ್ಯದ ಬೆನ್ನಲ್ಲೇ ಕ್ರಿಕೆಟ್ ತಂಡಕ್ಕೆ ಮೇಜರ್ ಸರ್ಜರಿ ಮಾಡಲು ಮುಂದಾದ ಗಂಗೂಲಿ, ನಡೆಯುತ್ತಿರುವುದಾದರೂ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಭಾರತ ಕ್ರಿಕೆಟ್ ತಂಡ ಫೈನಲ್ ಪಂದ್ಯ ದಲ್ಲಿ ನ್ಯೂಝಿಲ್ಯಾಂಡ್ ತಂಡದ ವಿರುದ್ಧ ಸೋಲನ್ನು ಕಾಣುವ ಮೂಲಕ ಮೊದಲ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಅನ್ನು ಗೆಲ್ಲುವ ಕನಸನ್ನು ನುಚ್ಚು ನೂರು ಮಾಡಿಕೊಂಡಿದೆ. ಟೂರ್ನಿಯ ಉದ್ದಕ್ಕ್ಕೂ ಅದ್ಭುತ ಪ್ರದರ್ಶನದ ಮೂಲಕ ಅದ್ವಿತೀಯ ಆಟವಾಡಿದ್ದ ಭಾರತ ಕ್ರಿಕೆಟ್ ತಂಡ ಫೈನಲ್ ನಲ್ಲಿ ನಿರೀಕ್ಷೆಯ ಬೆಟ್ಟವನ್ನೇ ಹೊತ್ತುಕೊಂಡಿದ್ದ ಕೆಲವೊಂದು ಆಟಗಾರರು ತೀರಾ ಕೆಲ ಮಟ್ಟದ ಪ್ರದರ್ಶನ ನೀಡಿದ ಕಾರಣ ಸೋಲನ್ನು ಕಾಣಬೇಕಾಯಿತು ಎಂದು ಕ್ರಿಕೆಟ್ ವಿಶ್ಲೇಷಕರು ತಿಳಿಸಿದ್ದಾರೆ.

ಹಾಗೂ ಅದೇ ಸಮಯದಲ್ಲಿ ನ್ಯೂಝಿಲ್ಯಾಂಡ್ ದೇಶವು ಫೈನಲ್ ಪಂದ್ಯಕ್ಕೂ ಮುನ್ನ ಎರಡು ಟೆಸ್ಟ್ ಪಂದ್ಯಗಳನ್ನು ಆಡಿರುವ ಕಾರಣ ನ್ಯೂಝಿಲ್ಯಾಂಡ್ ದೇಶಕ್ಕೆ ಪರಿಸ್ಥಿತಿಗಳ ಅರಿವು ಇತ್ತು. ಅದೇನೇ ಆಗಲಿ ಒಟ್ಟಿನಲ್ಲಿ ಪಂದ್ಯ ಸೋತಿದ್ದಾಗಿದೆ. ಇದರ ಕುರಿತು ಚರ್ಚೆ ನಡೆಸುವುದಕ್ಕಿಂತ ಮುಂದೆ ಹೇಗೆ ಗೆಲ್ಲಬೇಕು ಎಂಬುದರ ಕುರಿತು ಚರ್ಚೆ ನಡಿಸಿದರೆ ಉತ್ತಮ ಎಂಬ ಮಾರ್ಗವನ್ನು ಸೌರವ್ ಗಂಗೂಲಿ ರವರು ಅನುಸರಿಸಿದಂತೆ ಕಾಣುತ್ತಿದೆ.

ಹೌದು ಸ್ನೇಹಿತರೇ ಇದೀಗ ಬಂದಿರುವ ಮಾಹಿತಿಯ ಪ್ರಕಾರ ಭಾರತ ಕ್ರಿಕೆಟ್ ತಂಡಕ್ಕೆ ಮೇಜರ್ ಸರ್ಜರಿ ಯ ಕುರಿತು ಬಿಸಿಸಿಐ ನಲ್ಲಿ ಆಯ್ಕೆ ಸಮಿತಿಯನ್ನು ಸೇರಿದಂತೆ ವಿವಿಧ ಚರ್ಚೆಗಳು ಆರಂಭವಾಗಿವೆ ಎಂಬುದು ತಿಳಿದು ಬಂದಿದೆ. ಕಳೆದ ಕೆಲವೇ ವರ್ಷಗಳಲ್ಲಿ ಭಾರತ ಕ್ರಿಕೆಟ್ ತಂಡ 6 ಐಸಿಸಿ ಟ್ರೋಫಿಗಳನ್ನು ಸೋತಿರುವ ಕಾರಣ ಈ ಚರ್ಚೆ ಬಹಳ ಮುಖ್ಯವೆನಿಸಿದೆ. ಭಾಹುತೇಕ ಎಲ್ಲ ದೇಶಗಳ ಮೇಲೆ ಸಾಲು ಸಾಲು ಸರಣಿಗಳನ್ನು ಗೆದ್ದಿರುವ ಭಾರತ ಐಸಿಸಿ ಟೂರ್ನಮೆಂಟ್ ಗಳಲ್ಲಿ ಅದರಲ್ಲಿಯೂ ನಾಕ್ ಔಟ್ ಪಂದ್ಯಗಳಲ್ಲಿ ಸೋಲನ್ನು ಕಾಣುತ್ತಿರುವ ಕಾರಣ,

ರವಿ ಶಾಸ್ತ್ರಿರವರ ಕೋಚ್ ಅವಧಿ ಮುಗಿದ ಕೂಡಲೇ (ಇನ್ನೇನು ಕೆಲವೇ ತಿಂಗಳಿನಲ್ಲಿ) ಅವರನ್ನು ಹಾಗೆ ಮುಂದುವರೆಸದೆ, ರಾಹುಲ್ ದ್ರಾವಿಡ್ ಅಥವಾ ವೀರೇಂದ್ರ ಸೆಹ್ವಾಗ್ ರವರನ್ನು ಕೋಚ್ ಹುದ್ದೆಗೆ ಆಯ್ಕೆ ಮಾಡುವ ಕುರಿತು ಚರ್ಚೆ ನಡೆಯುತ್ತಿದೆ. ಅಷ್ಟೇ ಅಲ್ಲದೆ, ಮುಂದಿನ ಐಸಿಸಿ ಟ್ರೋಫಿಗಳಿಗೆ ಸಿದ್ಧತೆ ನಡೆಸಲು ಹಿರಿಯರಿಗೆ ಕೊಕ್ ನೀಡಿ, ಯುವ ಆಟಗಾರನನ್ನು ಇಂದಿನಿಂದಲೇ ಅವಕಾಶ ನೀಡುವ ಕುರಿತು ಚರ್ಚೆ ನಡೆಯುತ್ತಿದೆ.

ಕೊಹ್ಲಿ ರವರ ನಾಯಕತ್ವದ ಕುರಿತು ಕೂಡ ಚರ್ಚೆ ನಡೆಯುತ್ತಿದ್ದಿದು, ರೋಹಿತ್ ರವರು ಹೆಚ್ಚಿನ ಕಾಲ ತಂಡದಲ್ಲಿ ಇರುವುದಿಲ್ಲ, ಆದ ಕಾರಣ ಯುವ ಆಟಗಾರರ ನಾಯಕತ್ವದ ಕೌಶಲ್ಯಗಳನ್ನು ಕೂಡ ಗಣನೆಗೆ ತೆಗೆದುಕೊಂಡು ಉಪ ನಾಯಕನಾಗಿ ಅಥವಾ ಕೆಲವೊಂದು ಮಾದರಿ ಕ್ರಿಕೆಟ್ ಗಳಿಗೆ ನಾಯಕನ ಸ್ಥಾನ ನೀಡಿ ಅತ್ಯುತ್ತಮ ನಾಯಕರನ್ನು ರೂಪಿಸುವ ಅಗತ್ಯತೆ ಇದೆ ಎಂಬುದರ ಕುರಿತು ಕೂಡ ಸಾಕಷ್ಟು ಚರ್ಚೆಗಳು ಆರಂಭವಾಗಿವೆ.

ಸ್ವತಃ ಸೌರವ್ ಗಂಗೂಲಿ ರವರು ಈ ಕುರಿತು ಚರ್ಚೆ ನಡೆಸಲು ಆಸಕ್ತಿ ತೋರಿಸಿ, ಆಹ್ವಾನ ನೀಡಿದ್ದು, ಭಾರತೀಯ ಕ್ರಿಕೆಟ್ ತಂಡ ಮೂರು ಮಾಡಲಿಗಳಲ್ಲಿಯೂ ಕೂಡ ಸಾಕಷ್ಟು ಬದಲಾವಣೆಗಳು ಆದರೂ ಕೂಡ ಯಾವುದೇ ಅಚ್ಚರಿ ಪಡಬೇಕಾಗಿಲ್ಲ. ಈ ಕುರಿತು ಯಾವ್ಯಾವ ಬದಲಾವಣೆಗಳು ತಂಡದಲ್ಲಿ ನಡೆಯಲೇಬೇಕು ಎಂಬುದರ ಕುರಿತು ನಿಮ್ಮ ಅಭಿಪ್ರಾಯಗಳನ್ನು ತಿಳಿಸುವುದನ್ನು ಮರೆಯಬೇಡಿ.