ಕೊಹ್ಲಿ, ರೋಹಿತ್ ಅಲ್ಲ, ಟೆಸ್ಟ್ ವರ್ಲ್ಡ್ ಕಪ್ ನಲ್ಲಿ ಭಾರತವನ್ನು ಗೆಲ್ಲಿಸುವ ಏಕೈಕ ಆಟಗಾರರನ್ನು ಆಯ್ಕೆ ಮಾಡಿದ ಇಂಗ್ಲೆಂಡ್ ಮಾಜಿ ಆಟಗಾರ. ಯಾರಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮಗೆಲ್ಲಾ ತಿಳಿದಿರುವಂತೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಇದೇ ಜೂನ್ 18 ರಿಂದ 22 ರ ತನಕ ಇಂಗ್ಲೆಂಡ್ ನ ಸೌತಾಂಪ್ಟನ್ ನಲ್ಲಿ ನಡೆಯಲಿದೆ. ಜೂನ್ 23 ನ್ನು ಕಾಯ್ದಿರಿಸಿದ ದಿನ ಎಂದು ಐಸಿಸಿ ಈಗಾಗಲೇ ಘೋಷಿಸಿದೆ. ಅದಾಗಲೇ ಆಟಗಾರರು ಕ್ವಾರಂಟೈನ್ ನಲ್ಲಿದ್ದಾರೆ. ಇದೆಲ್ಲದರ ಮಧ್ಯೆ ಈಗ ಇಂಗ್ಲೆಂಡ್ ತಂಡದ ಮಾಜಿ ಸ್ಪಿನ್ನರ್ ಮಾಂಟಿ ಪಣೇಸರ್ ಭಾರತದ ಪರ ಪಂದ್ಯ ಗೆದ್ದುಕೊಡುವ ಆಟಗಾರರೊಬ್ಬರ ಹೆಸರನ್ನ ಘೋಷಿಸಿದ್ದಾರೆ.

ಸೌತಾಂಪ್ಟನ್ ನಡೆಯಲಿರುವ ಪಿಚ್ ಬಹಳಷ್ಟು ಸ್ಪರ್ಧಾತ್ಮಕವಾಗಿರಲಿದೆ ಎಂದು ಐಸಿಸಿ ಹೇಳಿದೆ. ಹಾಗಾಗಿ ತಂಡಗಳು ಮೂವರು ವೇಗಿಗಳು ಮತ್ತು ಇಬ್ಬರು ಸ್ಪಿನ್ನರ್ ಗಳನ್ನು ಆಡಿಸುವ ಸಾಧ್ಯತೆಯಿದೆ. ಒಂದು ವೇಳೆ ಪಿಚ್ ನಲ್ಲಿ ಹಸಿರು ಹಾಗೆ ಕಂಡರೇ ಇತ್ತಂಡಗಳು ನಾಲ್ವರು ವೇಗಿಗಳು ಹಾಗೂ ಒಬ್ಬ ಸ್ಪಿನ್ನರ್ ನೊಂದಿಗೆ ಕಣಕ್ಕಿಳಿಯಲಿವೆ. ಒಂದು ವೇಳೆ ಏಕೈಕ ಸ್ಪಿನ್ನರ್ ನೊಂದಿಗೆ ಭಾರತ ಕಣಕ್ಕಿಳಿದರೇ ಅಂತಹ ಸಂದರ್ಭದಲ್ಲಿ ಬಲಗೈ ಸ್ಪಿನ್ನರ್ ಆರ್.ಅಶ್ವಿನ್ ಬದಲಿಗೆ ಏಡಗೈ ಸ್ಪಿನ್ನರ್ ಸರ್ ರವೀಂದ್ರ ಜಡೇಜಾರವನ್ನ ಕಣಕ್ಕಿಸಬೇಕು ಎಂದು ಮಾಂಟಿ ಪಣೇಸರ್ ತಮ್ಮ ಅಭಿಪ್ರಾಯ ಹೇಳಿದ್ದಾರೆ.

ಖಂಡಿತವಾಗಿಯೂ ಆಲ್ ರೌಂಡರ್ ಜಡೇಜಾ ತಮ್ಮ ಆಲ್ ರೌಂಡರ್ ಆಟದಿಂದಾಗಿ ಈ ಭಾರಿ ಭಾರತಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಪಟ್ಟಕ್ಕೆ ಏರಿಸುತ್ತಾರೆ ಎಂದು ಹೇಳಿದರು.ಅಲ್ಲದೇ ನ್ಯೂಜಿಲೆಂಡ್ ತಂಡದಲ್ಲಿ ಹೆಚ್ಚು ಬಲಗೈ ಬ್ಯಾಟ್ಸಮನ್ ಇರುವ ಕಾರಣ ಅಶ್ವಿನ್ ಗಿಂತ ಜಡೇಜಾ ಹೆಚ್ಚು ಪರಿಣಾಮಕಾರಿ ಯಾಗಬಲ್ಲರು ಎಂದು ಹೇಳಿದರು. ಈ ಹಿಂದೆ ಇಂಗ್ಲೆಂಡ್ ತಂಡದ ಸರಣಿಯನ್ನು ಇಂಜೆರಿ ಕಾರಣಕ್ಕೆ ರವೀಂದ್ರ ಜಡೇಜಾ ತಪ್ಪಿಸಿ ಕೊಂಡಿದ್ದರು. ಈ ಸರಣಿಯಲ್ಲಿ ಅಶ್ವಿನ್ ಉತ್ತಮ ಬೌಲಿಂಗ್ ನಡೆಸುವುದು ಮಾತ್ರವಲ್ಲದೇ, ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಶತಕ ಗಳಿಸುವ ಮೂಲಕ ತಾವು ಸಹ ಆಲ್ ರೌಂಡರ್ ಎಂದು ಸಾಬೀತು ಪಡಿಸಿದ್ದರು. ಇತ್ತಂಡಗಳು ವಿಭಿನ್ನ ಸ್ಥಳದಲ್ಲಿ ಮೊದಲ ಭಾರಿ ತನ್ನ ಟೆಸ್ಟ್ ಪಂದ್ಯ ಆಡುತ್ತಿವೆ. ಭಾರತ ಮೊಟ್ಟ ಮೊದಲ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ತನ್ನದಾಗಿಸಿಕೊಳ್ಳಲಿ ಎಂಬುದು ಲಕ್ಷಾಂತರ ಅಭಿಮಾನಿಗಳ ಹಾರೈಕೆಯಾಗಿದೆ. ಸ್ಟಾರ್ ಸ್ಪೋರ್ಟ್ಸ್ ಕನ್ನಡ ಈ ಪಂದ್ಯವನ್ನು ನೇರ ಪ್ರಸಾರ ಮಾಡಲಿದೆ.